ಚಿತ್ರಮಂದಿರದಲ್ಲಿ ಫ್ಲಾಪ್, ಆದರೆ ಯೂಟ್ಯೂಬ್​​​ನಲ್ಲಿ ದಾಖಲೆ ಬರೆದ ಸಿನಿಮಾ – Kannada News | Telugu movie Jaya Janaki Nayaka achieved rare feet got 1 billion views in YouTube

ಕೆಲ ಸಿನಿಮಾಗಳ (Cinema) ಹಣೆಬರಹವೇ ವಿಚಿತ್ರವಾಗಿರುತ್ತದೆ. ಎಷ್ಟೋ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಹಿಟ್ ಆಗುವುದಿಲ್ಲ ಬಿಡುಗಡೆ ಆಗಿ ಎಷ್ಟೋ ವರ್ಷಗಳ ಬಳಿಕ ಒಟಿಟಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತವೆ. ‘ಉಳಿದವರು ಕಂಡಂತೆ’, ‘ಗ್ಯಾಂಗ್ಸ್ ಆಫ್ ವಸೇಪುರ್’ ಇನ್ನೂ ಕೆಲವು ಸಿನಿಮಾಗಳು ಈ ಸಾಲಿಗೆ ಸೇರುತ್ತವೆ. ಆದರೆ ಈ ಸಿನಿಮಾಗಳು ನಿಜವಾಗಿಯೂ ಚೆನ್ನಾಗಿದ್ದವು. ಆದರೆ ಇಲ್ಲೊಂದು ಸಿನಿಮಾ ಚೆನ್ನಾಗಿಲ್ಲದ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಕಳಪೆ ಪ್ರದರ್ಶನ ಕಂಡಿತ್ತು ಆದರೆ ಯೂಟ್ಯೂಬ್​​ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

2017 ರಲ್ಲಿ ಬಿಡುಗಡೆ ಆದ ತೆಲುಗು ಸಿನಿಮಾ ‘ಜಯ ಜಾನಕಿ ನಾಯಕ’ ಸಿನಿಮಾ ಇದೀಗ ಯೂಟ್ಯೂಬ್​​ನಲ್ಲಿ ದಾಖಲೆ ಬರೆದಿದ್ದು, ಒಂದು ಬಿಲಿಯನ್ ವೀವ್ಸ್ ಪಡೆದಿರುವ ಏಕೈಕ ಭಾರತದ ಸಿನಿಮಾ ಎನಿಸಿಕೊಂಡಿದೆ. ಬೋಯಪಾಟಿ ಶ್ರೀನು ನಿರ್ದೇಶನ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ನಟನೆಯ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಲಿಲ್ಲ. ಆದರೆ, ವರ್ಷಗಳ ನಂತರ ಈ ಚಿತ್ರವು ಯೂಟ್ಯೂಬ್​​ನಲ್ಲಿ ಭಾರಿ ಹಿಟ್ ಆಗಿದೆ.

ಈ ಚಿತ್ರವನ್ನು ‘ಖೂನ್ಖಾರ್’ (Khoonkhar) ಎಂಬ ಹೆಸರಿನಲ್ಲಿ ಹಿಂದಿಗೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯಿತು. ಕ್ರಮೇಣವಾಗಿ ಈ ಚಿತ್ರವು ಉತ್ತರ ಭಾರತದಲ್ಲಿ ಭಾರಿ ಪ್ರೇಕ್ಷಕರನ್ನು ಗಳಿಸಿಕೊಂಡಿತು. ಚಿತ್ರದ ಆಕ್ಷನ್ ದೃಶ್ಯಗಳು, ಭಾವುಕ ಕೌಟುಂಬಿಕ ಸನ್ನಿವೇಶಗಳು ಮತ್ತು ಮಾಸ್ ಅಂಶಗಳು ಪ್ರೇಕ್ಷಕರನ್ನು ಬಲವಾಗಿ ಸೆಳೆದಿವೆ.

ಇದನ್ನೂ ಓದಿ:ಮತ್ತೆ ಲಾಯರ್ ಪಾತ್ರ ಮಾಡಿದ ಶಿವರಾಜ್​ಕುಮಾರ್; ‘ಮಹಾನ್’ ಸಿನಿಮಾದಲ್ಲಿ ನಟನೆ

ಇದೀಗ, ಈ ಚಿತ್ರ ಯೂಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆಗಳನ್ನು ದಾಟುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಯಾವುದೇ ಭಾರತೀಯ ಚಿತ್ರಕ್ಕೆ ಯೂಟ್ಯೂಬ್​​ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವೀವ್ಸ್ ಬಂದಿಲ್ಲ. ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ ಅಂತಹ ರಾಜ್ಯಗಳಲ್ಲಿ ಇರುವ ಬೇಡಿಕೆಗೆ ಇದು ಸಾಕ್ಷಿಯಾಗಿದೆ.

ನಿರ್ದೇಶಕ ಬೋಯಪಾಟಿ ಶ್ರೀನು ನಿರ್ದೇಶನದ ಈ ಸಿನಿಮಾ ಆಕ್ಷನ್ ಜೊತೆಗೆ ಪ್ರೇಮ ಕತೆ ಮತ್ತು ಕೌಟುಂಬಿಕ ಡ್ರಾಮಾ ಅನ್ನು ಸಹ ಒಳಗೊಂಡಿದೆ. ಸಿನಿಮಾನಲ್ಲಿ ಓವರ್​ ದಿ ಟಾಪ್ ಫೈಟ್ ಸೀನ್​​ಗಳು, ಡ್ರಾಮಾ ಸಹ ಇದೆ. ಇದೇ ಕಾರಣಕ್ಕೆ ಬಹುಷಃ ಉತ್ತರ ಭಾರತದ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:58 pm, Tue, 30 June 26

Source link

Leave a Reply

Your email address will not be published. Required fields are marked *