ಚಿರಂಜೀವಿ ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ, ವಿಎಫ್​​ಎಕ್ಸ್ ಮಾಡಲು ಹಣವಿಲ್ಲ – Kannada News | Megastar Chiranjeevi’s new movie under financial problem

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಟಾಲಿವುಡ್​​ನ ಸ್ಟಾರ್ ನಟ, ವಯಸ್ಸು 70 ಆದರೂ ಈಗಲೂ ಸಿನಿಮಾಗಳಲ್ಲಿ ಬಿಡುವಿಲ್ಲದೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಅವರ ಈ ಹಿಂದಿನ ಸಿನಿಮಾ ಆಗಿರುವ ‘ಮನ ಶಂಕರ ವರ ಪ್ರಸಾದ್ ಗಾರು’ ದೊಡ್ಡ ಹಿಟ್ ಆಗಿದೆ. ಅವರ ಸಿನಿಮಾಗಳಿಗೆ ಬಂಡವಾಳ ಹೂಡಲು ನಿರ್ಮಾಪಕರು ಈಗಲೂ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಇಂಥಹಾ ಮೆಗಾಸ್ಟಾರ್ ಸಿನಿಮಾಕ್ಕೆ ಈಗ ಹಣಕಾಸಿನ ಸಮಸ್ಯೆ ಎದುರಾಗಿದೆ. ಚಿರಂಜೀವಿ ‘ವಿಶ್ವಂಭರ’ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಶುರುವಾಗಿ ಸಾಕಷ್ಟು ಸಮಯವಾಗಿದೆ. ಇದೀಗ ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ವಿಳಂಬ ಆಗುತ್ತಿದೆಯಂತೆ.

ಕಳೆದ ವರ್ಷವೇ ‘ವಿಶ್ವಂಭರ’ ಸಿನಿಮಾ ಸೆಟ್ಟೇರಿದೆ. ಸಿನಿಮಾವು ಫ್ಯಾಂಟಸಿ ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ಚಿರಂಜೀವಿ ಅವರು ಈ ಹಿಂದೆ ನಟಿಸಿದ್ದ ‘ಅಂಜಿ’, ‘ಜಗದೇಕ ವೀರುಡು, ಅತಿಲೋಕ ಸುಂದರಿ’ ಮಾದರಿಯ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾನಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸುತ್ತಿದ್ದರು. ಆದರೆ ಸಿನಿಮಾಕ್ಕೆ ಇದೀಗ ಹಣಕಾಸಿನ ಸಮಸ್ಯೆ ಎದುರಾಗಿದೆಯಂತೆ.

ಇದನ್ನೂ ಓದಿ:ಚಿರಂಜೀವಿ ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ, ವಿಎಫ್​​ಎಕ್ಸ್ ಮಾಡಲು ಹಣವಿಲ್ಲ

ಸಿನಿಮಾನಲ್ಲಿ ಅತಿಯಾದ ವಿಎಫ್​​ಎಕ್ಸ್ ಬಳಕೆಯ ಅವಶ್ಯಕತೆ ಇದ್ದು, ಗುಣಮಟ್ಟದ ವಿಎಫ್​​ಎಕ್ಸ್​​ಗೆ ದೊಡ್ಡ ಮೊತ್ತ ಖರ್ಚಾಗಿದೆಯಂತೆ. ಅಲ್ಲದೆ ಸಿನಿಮಾದ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಯುವಿ ಕ್ರಿಯೇಷನ್ಸ್ ಈಗಾಗಲೇ ಕೆಲವು ಸಿನಿಮಾಗಳ ವಿಎಫ್​​ಎಕ್ಸ್ ಮೊತ್ತವನ್ನು ತೀರಿಸಿಲ್ಲವಂತೆ. ಅದರಲ್ಲಿ 100 ಕೋಟಿ ರೂಪಾಯಿ ಹಣ ‘ವಿಶ್ವಂಭರ’ ಸಿನಿಮಾದ್ದೆ ಬಾಕಿ ಇದೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಮುಂಗಡವಾಗಿ ಒಟಿಟಿ ಒಪ್ಪಂದ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆ ಮುಂದಾಗಿದೆಯಾದರೂ ಅದು ವರ್ಕೌಟ್ ಆಗಿಲ್ಲ. ಒಟಿಟಿಗಳು ಕಡಿಮೆ ಮೊತ್ತದ ಆಫರ್ ನೀಡಿದ್ದರಿಂದ ಅದರಿಂದಲೂ ಹಿಂದೆ ಸರಿಯಲಾಗಿದೆ.

ಇದೀಗ ‘ವಿಶ್ವಂಭರ’ ಸಿನಿಮಾದ ಹಣಕಾಸು ಸಮಸ್ಯೆ ಬಗೆಹರಿಸಲು ಖುದ್ದು ಮೆಗಾಸ್ಟಾರ್ ಚಿರಂಜೀವಿ ಅವರನ್ನೇ ಸಹಾಯ ಕೇಳಲಾಗಿದೆ. ಚಿರಂಜೀವಿ ಅವರು ತಮ್ಮ ಸಂಭಾವನೆಯನ್ನು ಬಿಟ್ಟುಕೊಟ್ಟು, ಲಾಭ ಹಂಚಿಕೆ ಆಧಾರದಲ್ಲಿ ಸಹ ನಿರ್ಮಾಪಕ ಆಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ರಾಮ್ ಚರಣ್ ಅವರು ಸಹ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣಕ್ಕೂ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಾರೆ, ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:17 am, Fri, 26 June 26

Source link

Leave a Reply

Your email address will not be published. Required fields are marked *