ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Election Results) ಬಿಜೆಪಿ ಸರ್ಕಾರ ರಚಿಸುವ ಹಂತದಲ್ಲಿರುವಾಗ ಘರ್ಷಣೆಯ ನಡುವೆ ಟಿಎಂಸಿ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಸನ್ಸೋಲ್ನ ಗೋಧೂಲಿ ಪ್ರದೇಶದಲ್ಲಿ ಟಿಎಂಸಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯ ಸೋಲನ್ನು ಕಂಡಿದೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ. ಇದರ ನಡುವೆ ಟಿಎಂಸಿ ಕಚೇರಿಯನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಟಿಎಂಸಿ ಕಚೇರಿಯ ಆವರಣವು ತೀವ್ರವಾಗಿ ಹಾನಿಗೊಳಗಾಗಿದ್ದು, ಪೀಠೋಪಕರಣಗಳು, ಧ್ವಜಗಳು, ಪೋಸ್ಟರ್ಗಳು ಮತ್ತು ಬ್ಯಾನರ್ಗಳು ಹರಿದುಹೋಗಿವೆ. ಕಟ್ಟಡಕ್ಕೆ ಬೆಂಕಿಯನ್ನೂ ಹಚ್ಚಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ