2026 ರ ಐಪಿಎಲ್‌ನಲ್ಲಿ (IPL 2026) ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವಿಭಾಗದ ಪಾತ್ರ ಎಷ್ಟಿದೆಯೋ, ಬೌಲಿಂಗ್ ವಿಭಾಗದ್ದು ಅಷ್ಟೇ ಕೊಡುಗೆ ಇದೆ. ಅದರಲ್ಲೂ ಮುಂಬೈ ತಂಡದ ಬೌಲಿಂಗ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ. ಇದು ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದುವರೆಗೆ ಬುಮ್ರಾ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದಾರೆ. ಈ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.
ನೋ ಬಾಲ್ ಎಸೆದ ಬುಮ್ರಾ
ಇಂದು ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ ಎರಡು ಓವರ್ಗಳನ್ನು ಬೌಲ್ ಮಾಡಿದ ಬುಮ್ರಾ ದುಬಾರಿಯಾಗಿದ್ದರು. ಇದರ ಜೊತೆಗೆ ವಿಕೆಟ್ ಕೂಡ ಪಡೆದಿರಲಿಲ್ಲ. ಆ ನಂತರ ಡೆತ್ ಓವರ್ನಲ್ಲಿ ಬೌಲಿಂಗ್ಗೆ ಬಂದ ಬುಮ್ರಾಗೆ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತು. ಲಕ್ನೋ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಹಿಮ್ಮತ್ ಸಿಂಗ್, ಬುಮ್ರಾ ಬೌಲ್ ಮಾಡಿದ 14ನೇ ಓವರ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಆದರೆ ದುರಾದೃಷ್ಟವೆಂಬಂತೆ ಬುಮ್ರಾ ಆ ಎಸೆತವನ್ನು ನೋ ಬಾಲ್ ಮಾಡಿದ್ದರು. ಹೀಗಾಗಿ ಹಿಮ್ಮತ್ಗೆ ಜೀವದಾನ ಸಿಕ್ಕಿತು.
2 ರನ್ಗೆ ಸಿಕ್ಕಿತು ಜೀವದಾನ
ಹಿಮ್ಮತ್ಗೆ ಜೀವದಾನ ಸಿಕ್ಕಾಗ ಅವರು ಕೇವಲ 2 ರನ್ ಮಾತ್ರ ಗಳಿಸಿದ್ದರು. ನೋ ಬಾಲ್ ಎಸೆದು ಎದುರಾಳಿ ಬ್ಯಾಟರ್ಗೆ ಜೀವದಾನ ಮಾಡಿದ್ದು ಮಾತ್ರವಲ್ಲದೆ ಬುಮ್ರಾ, ಅದೇ ಓವರ್ನಲ್ಲಿ ಎರಡನೇ ನೋ ಬಾಲ್ ಮಾಡಿದರು. ಒಟ್ಟಾರೆ ಈ ಪಂದ್ಯದಲ್ಲಿ ಬುಮ್ರಾ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದರು. ಮಾತ್ರವಲ್ಲದೆ ಬುಮ್ರಾ ಈ ಆವೃತ್ತಿಯಲ್ಲಿ ಈಗಾಗಲೇ ಒಂಬತ್ತು ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಬುಮ್ರಾ ಈ ರೀತಿಯಾಗಿ ಲಯ ತಪ್ಪಿರುವುದನ್ನು ನೋಡುವುದು ತುಂಬಾ ವಿರಳ ಆದರೆ ಪ್ರಸ್ತುತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬುಮ್ರಾ ಲಯ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
🎥 Wickets that didn’t count, no-balls, and bat flying out of hands 👀
The most eventful over of the season? 🤷♂️
Updates ▶️ https://t.co/elXSOvaeig #TATAIPL | #KhelBindaas | #MIvLSG pic.twitter.com/4OQj5C9R49
— IndianPremierLeague (@IPL) May 4, 2026
40 ರನ್ ಬಾರಿಸಿದ ಹಿಮ್ಮತ್
ಇನ್ನು ಬುಮ್ರಾರಿಂದ ಜೀವದಾನ ಪಡೆದ ಹಿಮ್ಮತ್ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್ಗಳ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಮಾರ್ಕ್ರಾಮ್ ಅವರೊಂದಿಗೆ 6ನೇ ವಿಕೆಟ್ಗೆ ಅಜೇಯ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ಲಕ್ನೋ ತಂಡವನ್ನು 228 ರನ್ಗಳಿಗೆ ಕೊಂಡೊಯ್ದರು. ಅಂದರೆ ಬುಮ್ರಾ ಮಾಡಿದ ಎಡವಟ್ಟು ಮುಂಬೈ ತಂಡಕ್ಕೆ 38 ರನ್ಗಳ ದಂಡವಾಗಿ ಪರಿಣಮಿಸಿತು.
MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್
ಬುಮ್ರಾಗೆ ವಿಕೆಟ್ ಬರ
ನಿರ್ಣಾಯಕ ವಿಕೆಟ್ ಟೇಕಿಂಗ್ ಪ್ರದರ್ಶನಕ್ಕೆ ಹೆಸರುವಾಸಿಯಾದ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯಲ್ಲಿ ವಿಕೆಟ್ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ, 100 ಕ್ಕಿಂತ ಹೆಚ್ಚು ಬೌಲಿಂಗ್ ಸರಾಸರಿ ಹೊಂದಿದ್ದಾರೆ. ತವರು ಮೈದಾನವಾದ ವಾಂಖೆಡೆಯಲ್ಲಿ, ಬುಮ್ರಾ ತಮ್ಮ ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ಬುಮ್ರಾ ಅವರ ಎಕಾನಮಿ ರೇಟ್ ಕೂಡ ಪ್ರತಿ ಓವರ್‌ಗೆ ಸುಮಾರು 9 ರನ್‌ಗಳಷ್ಟಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:07 pm, Mon, 4 May 26