ಬೆಂಗಳೂರು, ಜೂನ್ 26): ‘ನಮ್ಮ ಮೆಟ್ರೋ’ (Namma Metro) ಸೇವೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೊಬ್ಬರಿ 21 ಬಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಪೀಕ್ ಅವರ್ಸ್ ನಲ್ಲೇ ನಮ್ಮ ಮೆಟ್ರೋಗಳು ಕೈ ಕೊಡುತ್ತಿವೆ. ಮುಖ್ಯವಾಗಿ ಕಳೆದ 3 ವರ್ಷಗಳಲ್ಲಿ 11 ಬಾರಿ ನೇರಳೆ ಮಾರ್ಗದಲ್ಲಿ ಮೆಟ್ರೋನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದರಲ್ಲೂ ಮುಖ್ಯವಾಗಿ ಮೊನ್ನೇ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿರುವುದರಿಂದ ತಲೆ ಗಂಭೀರವಾಗಿ ಪರಿಗಣಿಸಿದ್ದ ಬಿಎಂಆರ್‌ಸಿಎಲ್ ಕೊನೆಗೆ ಕಾರಣವನ್ನು ಪತ್ತೆ ಮಾಡಿದೆ. ಅದೇಕೆ ಮೇಲಿಂದ ಮೇಲೆ ಸಮಸ್ಯೆಗಳು ಆಗುತ್ತಿವೆ ಎಂದು ಟೆಕ್ನಿಕಲ್ ಟೀಮ್ ನಡೆಸಿದ ಪರಿಶೀಲನೆಯಲ್ಲಿ ಮಹತ್ವದ ಕಾರಣ ಪತ್ತೆಯಾಗಿದೆ. ತಾಂತ್ರಿಕ ದೋಷ ಕಂಡುಬರುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಕೊನೆಗೂ ಟೆಕ್ನಿಕಲ್ ತಂಡ ಪತ್ತೆ ಮಾಡಿ ಬಿಎಂಆರ್‌ಸಿಎಲ್ ವರದಿ ನೀಡಿದ್ದು, ಈ ಹಿಂದೆ ನಮ್ಮ ಮೆಟ್ರೋದಲ್ಲಿ ಇಂತಹ ಘಟನೆ ನಡೆದಿರಲಿಲ್ವಂತೆ. ಇನ್ನು ಒಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎನ್ನುವುದು ವರದಿ ತಿಳಿಸಿದೆ.
ತಾಂತ್ರಿಕ ದೋಷಕ್ಕೆ ಕಾರಣವೇನು? ವರದಿಯಲ್ಲೇನಿದೆ?
ಮೊನ್ನೇ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ಸಮಸ್ಯೆ ಸಂಬಂಧ ಬಿಎಂಆರ್‌ಸಿಎಲ್, ಪ್ರಾಥಮಿಕ ತನಿಖೆಯ ವರದಿ ಬಿಡುಗಡೆ ಮಾಡಿದ್ದು, ಅಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತವಾಗ್ತಿತಂತೆ. ಎಂಜಿ ರೋಡ್ ನಿಂದ ಕಬ್ಬನ್ ಪಾರ್ಕ್ ಮಧ್ಯದ ಟನಲ್ ನಲ್ಲೇ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ನಿಂದ ಕಬ್ಬನ್ ಪಾರ್ಕ್ ನಿಲ್ದಾಣದ ವರೆಗೆ ರೈಲು ವಿದ್ಯುತ್ ಸಂಪರ್ಕವಿಲ್ಲದೇ ಸಂಚಾರ ಮಾಡಿದೆ. ಅನಿಲ್ ಕುಂಬ್ಳೆ ಸರ್ಕಲ್ ಬಳಿಕ ಸುರಂಗ ಮಾರ್ಗ ಆರಂಭವಾಗುತ್ತದೆ. ಈ ಮಾರ್ಗದಲ್ಲಿ ತಿರುವು ಸಿಗುತ್ತದೆ. ಇಲ್ಲಿ ಹಳಿಯ ಪಕ್ಕದಲ್ಲಿ ಥರ್ಡ್ ರೈಲ್ ಸಂಪರ್ಕ ಇದೆ. ಆದರೆ,ಇಲ್ಲಿದ್ದ ಫೈಬರ್ ಕವರ್ ಮುಂದಕ್ಕೆ ಪಾಸ್ ಆಗಿದ್ಯಂತೆ. ಹೀಗಾಗಿ ರೈಲು ಹಳಿ ಮತ್ತು ವಿದ್ಯುತ್ ಹಳಿಯ ನಡುವೆ ಅಂತರ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ
ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ
ವೈರ್ ಶಾರ್ಟ್ ಸಕ್ಯೂರ್ಟ್ ಆಗಿ ಈ ಸಮಸ್ಯೆಯಿಂದಾಗಿ ರೈಲಿಗೆ ಪವರ್ ಸಪ್ಲೈ ಆಗಿಲ್ಲವಂತೆ. ಇದರಿಂದಾಗಿ ಥರ್ಡ್ ರೈಲ್ ಮತ್ತು ಸಿಸಿಡಿಗೂ ಹಾನಿ ಉಂಟಾಗಿತ್ತು. ಇಷ್ಟಾದರೂ ತಕ್ಷಣಕ್ಕೆ ರೈಲು ಸ್ಟಾಪ್ ಆಗಿಲ್ಲ. ಮುಂದಿನ ಸ್ಟೇಷನ್ ಕಬ್ಬನ್ ಪಾರ್ಕ್ ವರೆಗೂ ರೈಲು ಬಂದಿದೆ. ರೈಲು ಏನಾದರೂ ಟನಲ್ ಒಳಗೆ ಸ್ಟಾಪ್ ಆಗಿದ್ರೆ ದೊಡ್ಡಮಟ್ಟದಲ್ಲಿ ಅನಾಹುತವಾಗ್ತಿತ್ತು ಎಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಾಥಮಿಕ ವರದಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 5:55 pm, Fri, 26 June 26
