ಚೇತನ್ ಇನ್ನಾದರೂ ಮನುಷ್ಯನಾಗು: ವಿವಾದದ ಬಳಿಕ ಸಾರಾ ಗೋವಿಂದು ಕಿವಿಮಾತು – Kannada News | Sa Ra Govindu talks about Chetan Ahimsa after Dr Rajkumar Samadhi controversy

ನಟ ‘ಆ ದಿನಗಳು’ ಚೇತನ್ (Chetan Ahimsa) ಅವರು ಡಾ. ರಾಜ್​ಕುಮಾರ್ ಸಮಾಧಿ ಬಗ್ಗೆ ನೀಡಿದ ಹೇಳಿಕೆಗೆ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಚೇತನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಕೂಡ ಮಾಡಲಾಗಿದೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ‘ಗೌರಿ ಲಂಕೇಶ್ ಅವರ ಪಾರ್ಥೀವ ಶರೀರ ನೋಡಲು ಹೋದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ರೀ ವಾಟಾಳ್ ಅವರೇ ಅಂತ ಕರೆದಿದ್ದ ಈ ಅಯೋಗ್ಯ. ಆವತ್ತೇ ಜನರು ಆಕ್ರೋಶಕ್ಕೆ ಒಳಗಾಗಿದ್ದರು. ನಿನಗೆ ತಂದೆ-ತಾಯಿ ಸಂಸ್ಕಾರ ಹೇಳಿಕೊಟ್ಟಿಲ್ಲವಾ? ಇನ್ಮೇಲಾದರೂ ಮನುಷ್ಯನಾಗು. ಇನ್ಮುಂದೆ ಯಾರ ಬಗ್ಗೆಯಾದರೂ ಮಾತನಾಡುವಾಗ ಅವರ ಚರಿತ್​ರೆ ತಿಳ್ಕೋ’ ಎಂದು ಚೇತನ್ ಅವರಿಗೆ ಸಾರಾ ಗೋವಿಂದು (Sa Ra Govindu) ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *