ಛತ್ತೀಸ್‌ಗಢದಲ್ಲಿ ಬೆಟ್ಟಕ್ಕೆ ಡಿಕ್ಕಿಯಾಗಿ ವಿಮಾನ ಪತನ; ಇಬ್ಬರು ಪೈಲಟ್​ ಸಾವು – Kannada News | Private jet crashes into hillside in Chhattisgarh pilot and co pilot died

ಜಶ್​ಪುರ, ಏಪ್ರಿಲ್ 20: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಇಂದು ಖಾಸಗಿ ವಿಮಾನವೊಂದು ಪತನಗೊಂಡಿದ್ದು (Plane Crash), ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಶ್‌ಪುರ-ನಾರಾಯಣಪುರ ಪ್ರದೇಶದ ಅರಾ ಬೆಟ್ಟದ ಇಳಿಜಾರಿನಲ್ಲಿ ಪತನಗೊಂಡ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡಿವೆ. ಈ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಖಚಿತವಾಗಿಲ್ಲ.

ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾದ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆಯ ನಂತರ ಪೊಲೀಸರು ಮತ್ತು ಆಡಳಿತ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ‘ಅದು ಕೊನೆಯ ಸಂದೇಶ’: ವಿಮಾನದೊಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ಪ್ರಯಾಣಿಕ

ಈ ವಿಮಾನವು ಅರಾ ಬೆಟ್ಟಕ್ಕೆ ಡಿಕ್ಕಿ ಹೊಡೆದ ನಂತರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಘಟನೆಯಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರು ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಎನ್‌ಡಿಟಿವಿ ವರದಿಯ ಪ್ರಕಾರ, ಖುರಾಸಗರ್ಹ ಗ್ರಾಮದ ಬಳಿಯ ರತನ್‌ಪಹ್ಲಿ ಕಾಡಿನಲ್ಲಿ ಈ ಘಟನೆ ಸಂಭವಿಸಿದೆ. ಈ ವಿಮಾನ ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಮೃತಪಟ್ಟ ಪೈಲಟ್​ಗಳ ಗುರುತುಗಳು ಇನ್ನೂ ಬಹಿರಂಗಗೊಂಡಿಲ್ಲ. ಸ್ಥಳೀಯ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *