Headlines

‘ಜನ ನಾಯಗನ್’ ಒಟಿಟಿ ರಿಲೀಸ್ ದಿನಾಂಕ ಘೋಷಣೆ; ವಿಜಯ್ ಕೊನೆಯ ಸಿನಿಮಾ ವೀಕ್ಷಣೆಗೆ ದಿನಾಂಕ ನಿಗದಿ – Kannada News | Thalapathy Vijay Starrer Jana Nayagan OTT Release Date Fixed: Streaming Details Inside

ತಮಿಳು ಚಿತ್ರರಂಗದ ನಟ, ಸಿಎಂ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಈಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲು ಸಂಪೂರ್ಣ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ ಈ ಸಿನಿಮಾ ಡಿಜಿಟಲ್ ವೇದಿಕೆಗೆ ಹೆಜ್ಜೆ ಇಡುತ್ತಿದೆ. ವಿಜಯ್ ಅವರ ರಾಜಕೀಯ ಪ್ರವೇಶದ ಮುನ್ನ ಮೂಡಿಬಂದ ಕೊನೆಯ ಚಿತ್ರ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಅಭಿಮಾನಿಗಳು ಒಟಿಟಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಹಾಗೂ ರಿಲೀಸ್ ದಿನಾಂಕ

‘ಜನ ನಾಯಗನ್’ ಸಿನಿಮಾ ಬರುವ ಆಗಸ್ಟ್ 21ರಿಂದ ಜೀ5 ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಜೀ ತಮಿಳು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎಐ ಟೀಸರ್ ಹಂಚಿಕೊಂಡು ಈ ವಿಷಯ ತಿಳಿಸಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೆನ್ಸಾರ್ ವಿಳಂಬ ಹಾಗೂ ಥಿಯೇಟರ್ ರಿಲೀಸ್

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳ ಒಳಗಾಗಿಯೇ ಈ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಜನವರಿ 9ಕ್ಕೆ ತೆರೆಗೆ ಬರಬೇಕಿದ್ದ ಈ ಚಿತ್ರ ಸೆನ್ಸಾರ್ ಮಂಡಳಿಯ (CBFC) ಕಾರಣದಿಂದ ತಡವಾಗಿತ್ತು. ಕಾನೂನು ಹೋರಾಟಗಳ ನಂತರ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿತ್ತು. ಅಂತಿಮವಾಗಿ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಅಲ್ಲದೆ, ಸಿನಿಮಾ ಮೊದಲೇ ಲೀಕ್ ಆಗಿದ್ದರಿಂದ ಅಂದುಕೊಂಡಂತೆ ಗಳಿಕೆ ಮಾಡಿಲ್ಲ.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ

ಸಿನಿಮಾ ವಿಮರ್ಶೆ ಮತ್ತು ವಿಜಯ್ ವಿದಾಯ

ಈ ಸಿನಿಮಾಗೆ ವಿಮರ್ಶಕರಿಂದ ಸಾಧಾರಣ ವಿಮರ್ಶೆ ದೊರೆತಿದೆ. ಇದು ವಿಜಯ್ ಅವರ ಸುದೀರ್ಘ ಸಿನಿಮಾ ಜೀವನಕ್ಕೆ ವಿದಾಯ ಹೇಳಿದ ಸಿನಿಮಾ. ಪೂರ್ಣಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಟ್ಟ ವಿಜಯ್ ಅವರಿಗೆ ಇದು ಸೂಕ್ತ ಕಟ್-ಆಫ್ ಸಿನಿಮಾ ಆಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಲು ಬಯಸುವ ಅಭಿಮಾನಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *