‘ಜನ ನಾಯಗನ್’ ಸಿನಿಮಾಗಾಗಿ ಕಾದಿದ್ದ ದಳಪತಿ ವಿಜಯ್ ಅಭಿಮಾನಿಗಳಿಗೆ ದೊಡ್ಡ ಶಾಕ್ – Kannada News | Thalapathy Vijay last movie Jana Nayagan will not release before April 2026

ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರು ನಟಿಸಿದ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ‘ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಆದರೆ ಈ ಸಿನಿಮಾದ ಬಿಡುಗಡೆಗೆ ಹಲವು ವಿಘ್ನಗಳು ಎದುರಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವರ್ಷದ ಆರಂಭದಲ್ಲೇ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಯಿತು. ಬಳಿಕ ಈ ವಿವಾದ ಕೋರ್ಟ್ ಮೆಟ್ಟಿಲು ಏರಿತು. ಇದರಿಂದ ರಿಲೀಸ್ ದಿನಾಂಕ ಮುಂದೂಡಿಕೆ ಆಗುತ್ತಲೇ ಹೋಯಿತು. ಈಗ ವಿದೇಶಿ ವಿತರಕರಿಂದ ಒಂದು ಶಾಕಿಂಗ್ ಅಪ್​ಡೇಟ್ ಸಿಕ್ಕಿದೆ.

ಅಮೆರಿಕದಲ್ಲಿ ‘ಜನ ನಾಯಗನ್’ ಸಿನಿಮಾವನ್ನು ವಿತರಣೆ ಮಾಡುತ್ತಿರುವ ‘ಯಾರ್ಕ್ ಸಿನಿಮಾಸ್’ ಸಂಸ್ಥೆಯು ಒಂದು ಪ್ರಕಟಣೆ ಬಿಡುಗಡೆ ಮಾಡಿದೆ. ಅದರಲ್ಲಿ ಅಭಿಮಾನಿಗಳಿಗೆ ಬೇಸರ ಆಗುವ ಸುದ್ದಿ ಇದೆ. ಏಪ್ರಿಲ್ 30ರ ತನಕ ಈ ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಅಂದರೆ, ಈ ಸಿನಿಮಾ ನೋಡಲು ಅಭಿಮಾನಿಗಳು ಇನ್ನೂ ಹಲವು ದಿನ ಕಾಯಬೇಕು.

‘ಜನ ನಾಯಗನ್ ಸಿನಿಮಾ ಏಪ್ರಿಲ್ 30ಕ್ಕಿಂತ ಮೊದಲು ರಿಲೀಸ್ ಆಗಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಈಗಾಗಲೇ ನೀವು ಖರೀದಿಸಿದ ಟಿಕೆಟ್​ಗಳಿಗೆ ಇನ್ನೂ ಹಣ ಮರುಪಾವತಿ ಆಗದೇ ಇದ್ದಲ್ಲಿ ಆದಷ್ಟು ಬೇಗ ನಮ್ಮ ಚಿತ್ರಮಂದಿರಗಳಿಗೆ ಬಂದು ಪಡೆದುಕೊಳ್ಳಿ. ನಿಮ್ಮ ತಾಳ್ಮೆಗಾಗಿ, ಬೆಂಬೆಲಕ್ಕಾಗಿ, ಅರ್ಥ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು’ ಎಂದು ‘ಯಾರ್ಕ್ ಸಿನಿಮಾಸ್’ ಮ್ಯಾನೇಜ್​ಮೆಂಟ್ ತಿಳಿಸಿದೆ.

ಸದ್ಯದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರು ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡಿದ್ದಾರೆ. ‘ಜನ ನಾಯಗನ್’ ಸಿನಿಮಾದಲ್ಲಿ ರಾಜಕೀಯದ ಕಥಾಹಂದರ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವ ತನಕ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಅವಕಾಶ ಸಿಗುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಮದುವೆ ಫಂಕ್ಷನ್​​ಗೆ ಅಟೆಂಡ್ ಆಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್

‘ಜನ ನಾಯಗನ್’ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ನಿರ್ಮಾಪಕರಿಂದಲೇ ಅಧಿಕೃತ ಮಾಹಿತಿ ಹೊರಬರಲಿ ಎಂದು ದಳಪತಿ ವಿಜಯ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರು ನಾಯಕಿಯಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *