ವಿಜಯ್ (Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಏಳು ತಿಂಗಳ ಬಿಡುಗಡೆ ಆಗಿದೆ. ಸಿಬಿಎಫ್ಸಿಯಲ್ಲಿ ಸುಮಾರು ಏಳು ತಿಂಗಳುಗಳ ಕಾಲ ಈ ಸಿನಿಮಾ ಸಿಕ್ಕಿಕೊಂಡಿತ್ತು. ಸಿಬಿಎಫ್ಸಿಯು ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಕೌಟುಂಬಿಕ ಸಿನಿಮಾ ಪ್ರೇಮಿಗಳ ಮೆಚ್ಚಿನ ನಾಯಕ ಆಗಿರುವ ವಿಜಯ್ ಅವರ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಅಲ್ಲದೆ, ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದಾಗಲೂ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ‘ಎ’ ಪ್ರಮಾಣ ಪತ್ರ ನೀಡುವಂಥಹದ್ದು ಸಿನಿಮಾನಲ್ಲಿ ಏನಿದೆ?
‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡುವುದಕ್ಕೂ ಮುಂಚೆ ಬರೋಬ್ಬರಿ 12 ಕಟ್ಗಳನ್ನು ಸಿನಿಮಾಕ್ಕೆ ಮಾಡಲಾಗಿದೆ. ವಿಜಯ್ ಅವರ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡುವುದೇ ಅಪರೂಪ, ಅದರಲ್ಲೂ 12 ಕಟ್ಗಳು, ಮ್ಯೂಟ್ಗಳು ಕಡಿಮೆ ಏನಲ್ಲ. ಸಿನಿಮಾನಲ್ಲಿ ಹಲವಾರು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ಕೆಲವಂತೂ ಏಕೆ ಮ್ಯೂಟ್ ಮಾಡಲಾಗಿದೆ ಎಂಬುದು ಸಹ ಅರ್ಥವಾಗುವುದಿಲ್ಲ.
ಬಾಬಿ ಡಿಯೋಲ್ ಅಮೆರಿಕ ಮತ್ತು ಸದ್ದಾಂ ಹುಸೇನ್ಗೆ ಸಂಬಂಧಿಸಿದ ಸಂಭಾಷಣೆ ಹೇಳುತ್ತಾರೆ. ಅದನ್ನು ಕಟ್ ಮಾಡಲಾಗಿದೆ. ಪ್ರಕಾಶ್ ರೈ, ‘ದರ್ಶನ’ಕ್ಕೆ ಹೋಗಿ ಬರುವಾಗ ಬಿಯರ್ ಕುಡಿಯೋಣ ಎಂದು ಹೇಳುವ ಸಂಭಾಷಣೆ ಇದೆ, ಪ್ರಕಾಶ್ ರೈ ‘ದರ್ಶನ’ ಎನ್ನುವ ಪದಕ್ಕೆ ಮುಂಚೆ ಹೇಳುವ ಪದವನ್ನು ಮ್ಯೂಟ್ ಮಾಡಲಾಗಿದೆ. ಹೀಗೆ ಇನ್ನೂ ಹಲವು ಸಂಭಾಷಣೆಗಳಲ್ಲಿ ಮ್ಯೂಟ್ಗಳನ್ನು ಮಾಡಲಾಗಿದೆ. ಸಂವಿಧಾನದ ಬಗ್ಗೆ ಹೇಳಲಾಗುವ ಸಂಭಾಷಣೆಯಲ್ಲೂ ಮ್ಯೂಟ್ ಮಾಡಲಾಗಿದೆ. ಪ್ರಕಾಶ್ ರೈ ಪಾತ್ರ, ಬಾಲಕಿಯ ಅತ್ಯಾಚಾರದ ವಿಷಯವಾಗಿ ಮಾತನಾಡುವಾಗ ಹೇಳಿರುವ ಸಂಭಾಷಣೆ, ಟಿವಿಕೆ ಎಂದು ಹೇಳುವ ಸಂಭಾಷಣೆಗಳಿಗೆ ಮ್ಯೂಟ್ ಮಾಡಲಾಗಿದೆ.
ಇದನ್ನೂ ಓದಿ:Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ?
ಮ್ಯೂಟ್ ಮಾತ್ರವೇ ಅಲ್ಲದೆ ಹಲವು ದೃಶ್ಯಗಳಿಗೆ ಸಹ ಕತ್ತರಿ ಹಾಕಲಾಗಿದೆಯಂತೆ. ವಿಜಯ್ ಎಂಟ್ರಿ ಸೀನ್ನಲ್ಲಿ ಅವರ ಕೈಮೇಲೆ ‘ಟಿವಿಕೆ’ ಎಂದು ಹಚ್ಚೆ ಹಾಕಿಸಿಕೊಂಡಿರು ದೃಶ್ಯ ತೋರಿಸಲಾಗುತ್ತದೆ. ಅದಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ವಿಜಯ್, ಒಂದು ದೃಶ್ಯದಲ್ಲಿ ಪುಸ್ತಕ ಹಿಡಿದಿರುತ್ತಾರೆ, ಆ ಪುಸ್ತಕದ ಮೇಲೆ ಅಂಬೇಡ್ಕರ್ ಚಿತ್ರ ಇರುತ್ತದೆ, ಅದಕ್ಕೂ ಸೆನ್ಸಾರ್ ಕತ್ತರಿ ಹಾಕಿದೆ. ಬಾವುಟದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ, ಓಂ ಅಕ್ಷರದ ದೃಶ್ಯವಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ.
ಸಿನಿಮಾನಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳಿವೆ. ವಿಜಯ್ ಅಂತೂ ಕತ್ತಿ ತೆಗೆದುಕೊಂಡು ಕೆಲವರ ಕೈ, ಕೆಲವರ ರುಂಡಗಳನ್ನು ಕತ್ತರಿಸುತ್ತಾರೆ. ರಕ್ತವನ್ನು ಧಾರೆಯ ರೀತಿ ಹರಿಸುತ್ತಾರೆ. ಆದರೆ ಅದಕ್ಕೆಲ್ಲ ಹೆಚ್ಚಿಗೇನೂ ಕತ್ತರಿ ಹಾಕಿದಂತೆ ಕಾಣಲಿಲ್ಲ. ಆಕ್ಷನ್ ದೃಶ್ಯಗಳ ಪೈಕಿ ಕೆಲವಷ್ಟಕ್ಕೆ ಮಾತ್ರವೇ ಕತ್ತರಿ ಹಾಕಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ