ಇತ್ತೀಚೆಗಷ್ಟೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ (jacqueline fernandez) ನಟಿಸಿರುವ ‘ಜುಗ್ನಿ’ ಹೆಸರಿನ ಆಲ್ಬಂ ಹಾಡು ಬಿಡುಗಡೆ ಆಯ್ತು. ಜಾಕ್ವೆಲಿನ್ ಎಂದಿನಂತೆ ಆ ಹಾಡಿನಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಭಿನ್ನ ಭಿನ್ನ ರೀತಿಯ ಉಡುಗೆಗಳನ್ನು ತೊಟ್ಟು ಮಾದಕವಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ಅದೇ ಹಾಡಿನ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಡಿನಲ್ಲಿ ಡ್ಯಾನ್ಸ್ ಮಾಡುವಾಗ ಒಂದು ದೃಶ್ಯದಲ್ಲಿ ಜಾಕ್ವೆಲಿನ್ ಅವರ ಒಳಾಂಗ ಕಾಣಿಸುತ್ತಿದೆ ಎಂಬ ಒಕ್ಕಣೆಯೊಂದಿಗೆ ಆ ವಿಡಿಯೋ ವೈರಲ್ ಆಗಿತ್ತು.
ಆದರೆ ಇದೀಗ ‘ಜುಗ್ನಿ’ ಹಾಡಿನ ಗಾಯಕ, ಜಾಕ್ವೆಲಿನ್ ಅವರ ವಿಡಿಯೋ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಕ ಸೋನು ಟುಕ್ರಾಲ್ ಅವರು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಯಾರೋ ಕೆಲವರು ಎಐ ಬಳಸಿ ವಿಡಿಯೋ ಸೃಷ್ಟಿಸಿ ಜಾಕ್ವೆಲಿನ್ ಅವರಿಗೆ ಹಾಗೂ ‘ಜುಗ್ನಿ’ ಹಾಡು ಮಾಡಿರುವವರಿಗೆ ಕಳಂಕ ತರಬೇಕೆಂಬ ಉದ್ದೇಶಿಸಿ ಈ ಕೃತ್ಯ ಎಸಗಿದ್ದು, ನಕಲಿ ವಿಡಿಯೋ ಹರಿಯ ಬಿಟ್ಟಿದ್ದಾರೆ ಎಂದು ದೂರು ನೀಡಿದ್ದಾರೆ.
‘ಜುಗ್ನಿ’ ಹಾಡಿನಲ್ಲಿ ಬಿಪರಾಖ್ ಜೊತೆಗೆ ಸೋನು ಟುಕ್ರಾಲ್ ಸಹ ದನಿಗೂಡಿಸಿದ್ದಾರೆ. ಹಾಡಿನಲ್ಲಿ ನಟಿ ಜಾಕ್ವೆಲಿನ್ ಅವರ ಖಾಸಗಿ ಅಂಗ ಕಾಣುವಂಥಹಾ ದೃಶ್ಯ ಇದೆಯೆಂಬ ಆರೋಪದಿಂದ ಬೇಸರಗೊಂಡು ಇದೀಗ ಸೋನು ಅವರು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸೋನು ಹೇಳಿರುವಂತೆ, ‘ಜುಗ್ನಿ’ ಹಾಡಿನಲ್ಲಿ ಜಾಕ್ವೆಲಿನ್ ಅವರ ಖಾಸಗಿ ಅಂಗ ಕಾಣುವಂಥ ಯಾವ ದೃಶ್ಯವೂ ಇಲ್ಲವಂತೆ. ಆದರೆ ಉದ್ದೇಶಪೂರ್ವಕವಾಗಿ ಕೆಲವರು ಎಐ ಇನ್ನಿತರೆ ತಂತ್ರಜ್ಞಾನ ಬಳಸಿ ಕೆಟ್ಟ ವಿಡಿಯೋ ಸೃಷ್ಟಿಸಿದ್ದಾರೆ ಎಂದಿದ್ದಾರೆ ಸೋನು.
ಇದನ್ನೂ ಓದಿ:ಪೋಲ್ ಡ್ಯಾನ್ಸ್ ಮಾಡಿದ ಜಾಕ್ವೆಲಿನ್ ಫರ್ನಾಂಡೀಸ್: ಇಲ್ಲಿದೆ ವಿಡಿಯೋ
ಇತ್ತೀಚೆಗೆ ಈ ಎಐ ವಿಡಿಯೋ ಹಾವಳಿ ಜೋರಾಗಿದೆ. ಹಲವು ನಟಿಯರಿಗೆ ಇದರಿಂದ ಸಮಸ್ಯೆಗಳಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಎಐ ವಿಡಿಯೋ ಸಖತ್ ವೈರಲ್ ಆಗಿತ್ತು. ಆ ವಿಡಿಯೋ ಅನ್ನು ವಿರೋಧಿಸಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದರು. ಇತ್ತೀಚೆಗಷ್ಟೆ ನಟಿ ರುಕ್ಮಿಣಿ ವಸಂತ್ ಅವರ ಎಐ ವಿಡಿಯೋ ಅನ್ನು ವೈರಲ್ ಮಾಡಲಾಗಿತ್ತು. ಯಾರದ್ದೋ ವಿಡಿಯೋಕ್ಕೆ ಎಐ ಸಹಾಯದಿಂದ ನಟಿ ರುಕ್ಮಿಣಿ ವಸಂತ್ ಮುಖ ಸೇರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸಹ ದೂರುಗಳು ದಾಖಲಾಗಿದ್ದವು. ಇದೀಗ ಜಾಕ್ವೆಲಿನ್ಗೆ ಸಹ ಅದೇ ಸಮಸ್ಯೆ ಎದುರಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
