‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಬಿಗ್ ಅಪ್​ಡೇಟ್ – Kannada News | Zindagi Na Milegi Dobara Sequel Confirmed: Zoya Akhtar Begins Work On Second Part  

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಒಂದಾಗಿದೆ. ಈ ಸೂಪರ್ ಹಿಟ್ ಚಿತ್ರ ತೆರೆಕಂಡು 15 ವರ್ಷಗಳು ಕಳೆದಿವೆ. ಈಗ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಬರಲಿದೆ. ಈ ಕುರಿತು ಸ್ವತಃ ನಿರ್ದೇಶಕಿ ಜೋಯಾ ಅಖ್ತರ್ ಖಚಿತಪಡಿಸಿದ್ದಾರೆ. ಈ ಸುದ್ದಿ ಕೇಳಿ ಅರ್ಜುನ್, ಕಬೀರ್ ಹಾಗೂ ಇಮ್ರಾನ್ ಪಾತ್ರ ನೋಡಲು ಅಭಿಮಾನಿಗಳು ತೀವ್ರ ಕಾತರಗೊಂಡಿದ್ದಾರೆ.

ಹಿಂದಿ ಚಿತ್ರರಂಗದ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್ ಅವರು ಮಾನ್ಸೂನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ದಿ ಹಾಲಿವುಡ್ ರಿಪೋರ್ಟರ್’ ಜೊತೆ ಮಾತನಾಡುತ್ತಾ ಅವರು ‘ಜಿಂದಗಿ ನಾ ಮಿಲೇಗಿ ದೊಬಾರಾ ಸೀಕ್ವೆಲ್ ಕೆಲಸ ನಡೆಯುತ್ತಿದೆ. ಕಥೆ ಸರಿಯಾದ ಹಾದಿಗೆ ಬಂದರೆ ಖಂಡಿತ ಸಿನಿಮಾ ಬರಲಿದೆ. ಹಳೆಯ ಪಾತ್ರಗಳನ್ನು ಮತ್ತೆ ತೆರೆಮೇಲೆ ತರುವುದು ಅದ್ಭುತ ಅನುಭವವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಹೃತಿಕ್ ರೋಶನ್, ಅಭಯ್ ಡಿಯೋಲ್ ಹಾಗೂ ಫರ್ಹಾನ್ ಅಖ್ತರ್ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. 2025ರ ಈ ಜಾಹೀರಾತು ಪ್ರವಾಸೋದ್ಯಮಕ್ಕೆ ಸಂಬಂಧಿಸಿತ್ತು. ಇದನ್ನು ನೋಡಿ ಅಭಿಮಾನಿಗಳು ಸೀಕ್ವೆಲ್ ಟ್ರೇಲರ್ ಎಂದೇ ಭಾವಿಸಿದ್ದರು. ನಂತರ ಅದು ಕೇವಲ ಜಾಹೀರಾತು ಎಂದು ತಿಳಿದು ಹಲವರು ನಿರಾಶೆಗೊಂಡಿದ್ದರು. ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ ಜೋಯಾ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ సినిಮಾಗಳ ಮೇಲಿನ ವಿಮರ್ಶೆಗಳ ಬಗ್ಗೆಯೂ ಜೋಯಾ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀಮಂತರ ಕಥೆಗಳನ್ನು ಮಾತ್ರ ಮಾಡುತ್ತಾರೆಂಬ ಟೀಕೆಗೆ ಅವರು ತಲೆಕೆಡಿಸಿಕೊಂಡಿಲ್ಲ. ‘ಗಲ್ಲಿ ಬಾಯ್’ ನಂತಹ ವಿಭಿನ್ನ ಚಿತ್ರಗಳನ್ನೂ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮಿಷ್ಟದ ಕಥೆ ಹೇಳುವ ಹಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಪ್ರೇಕ್ಷಕರು ಇಷ್ಟಪಟ್ಟು ನೋಡಿದರೆ ಸಾಕು ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ಈ ಗ್ರಾಮದಲ್ಲಿ ಕತ್ರಿನಾ ಕೈಫ್​ನ ಪೂಜಿಸಲಾಗುತ್ತದೆ; ದಂಪತಿಗಳಿಗೆ ನಟಿಯೇ ದೇವರು

2011ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸ್ಪೇನ್ ಹಾಗೂ ಭಾರತದಲ್ಲಿ ಚಿತ್ರೀಕರಣಗೊಂಡಿತ್ತು. 45 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 153 ಕೋಟಿ ಗಳಿಸಿತ್ತು. ಕತ್ರಿನಾ ಕೈಫ್ ಹಾಗೂ ಕಲ್ಕಿ ಕೊಚ್ಲಿನ್ ಮುಖ್ಯ ಪಾತ್ರದಲ್ಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *