ಅಯೋಧ್ಯೆ, ಜೂನ್ 19: ಅಯೋಧ್ಯೆಯ (Ayodhya) ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಭೂಮಿ ಖರೀದಿ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷಗಳು ಮಾಡಿದ್ದ ಆರೋಪಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿರುಗೇಟು ನೀಡಿದ್ದಾರೆ. ತಮ್ಮ ಜೀವನದಲ್ಲಿ ಒಮ್ಮೆಯೂ ಅಯೋಧ್ಯೆಗೆ ಭೇಟಿ ನೀಡದ ಮತ್ತು ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ನಾಯಕರು ಇಂದು ರಾಜಕೀಯ ಲಾಭಕ್ಕಾಗಿ ‘ರಾಮಭಕ್ತಿ’ಯ ನಾಟಕವಾಡುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದವರು ಈಗ ರಾಮ ಭಕ್ತರ ಬಗ್ಗೆ ಕಾಳಜಿ ವಹಿಸುತ್ತಿರುವಂತೆ ನಟಿಸುತ್ತಿದ್ದಾರೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಕೆಲವು ನಾಯಕರು ತಮ್ಮ ಇಡೀ ಜೀವನದಲ್ಲಿ ಎಂದಿಗೂ ಅಯೋಧ್ಯೆಗೆ ಹೆಜ್ಜೆ ಇಟ್ಟವರಲ್ಲ. ಅಯೋಧ್ಯೆಯ ಹೆಸರೆತ್ತಲು ಹೆದರುತ್ತಿದ್ದವರು ಮತ್ತು ಶ್ರೀರಾಮ ಕೇವಲ ಒಂದು ಕಾಲ್ಪನಿಕ ಪಾತ್ರ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದವರು ಇಂದು ರಾಮಮಂದಿರದ ನಿಧಿಯ ಬಗ್ಗೆ ಮಾತನಾಡುತ್ತಿದ್ದಾರೆ.” ಎಂದು ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
