Headlines

ಜುಲೈ 31ಕ್ಕೆ ಬಿಡುಗಡೆ ಆಗಿರುವ ‘ಜಾಲಿ’ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬೆಂಬಲ – Kannada News | Umapathy Srinivasa Gowda released Jolly Kannada movie Trailer ft Tarush

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivasa Gowda) ಅವರು ಯಶಸ್ಸು ಕಂಡಿದ್ದಾರೆ. ಹೊಸಬರಿಗೆ ಅವರು ಬೆಂಬಲ ನೀಡುತ್ತಾರೆ. ಈಗ ಹೊಸ ಪ್ರತಿಭೆಗಳ ‘ಜಾಲಿ’ (Jolly) ಸಿನಿಮಾಗೆ ಅವರು ಸಾಥ್ ನೀಡಿದ್ದಾರೆ. ಇತ್ತೀಚೆಗೆ ‘ಜಾಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಟ್ರೇಲರ್ ಮೂಲಕ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲಾಗಿದೆ. ಈ ಸಿನಿಮಾ ಜುಲೈ 31ರಂದು ರಿಲೀಸ್ ಆಗಲಿದೆ. ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ‘ಜಾಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಇದೇ ವೇದಿಕೆಯಲ್ಲಿ ಮಾತನಾಡಿದ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಜಾಲಿ’ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದರು. ‘ಸಿನಿಮಾಗೆ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋ. ಆದ್ದರಿಂದ ಅವರಿಗೆ ಮೊದಲು ಗೌರವ ಸಿಗಬೇಕು’ ಎಂದು ಉಮಾಪತಿ ಹೇಳಿದರು.

ಹೊಸ ತಂಡಕ್ಕೆ ಉಮಾಪತಿ ಸಲಹೆ:

‘ವರ್ಷಕ್ಕೆ 300ರಿಂದ 400 ಸಿನಿಮಾಗಳು ಬರುತ್ತವೆ. ಆದರೆ ಶೋಕಿಗಾಗಿ ಸಿನಿಮಾ ಮಾಡಬಾರದು. ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು. ಮೊಬೈಲ್, ಬಿಗ್ ‍ಬಾಸ್‍ಗಳ ಕಾರಣದಿಂದ ಜನರಿಗೆ ಬೆರಳ ತುದಿಯಲ್ಲೇ ಮನರಂಜನೆ ಸಿಗುತ್ತಿದೆ. ಹೀಗಾಗಿ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಚಿತ್ರತಂಡಗಳು ಆಲೋಚನೆ ಮಾಡಬೇಕು’ ಎಂದು ಉಮಾಪತಿ ಶ್ರೀನಿವಾಸ್ ಗೌಡ ಅವರು ಹೇಳಿದರು.

ಇದನ್ನೂ ಓದಿ: ನಿರ್ಮಾಪಕ-ನಿರ್ದೇಶಕ ಇದ್ರೆ ಮಾತ್ರ ಸ್ಟಾರ್ ಹುಟ್ಟುತ್ತಾನೆ; ಉಮಾಪತಿ ಶ್ರೀನಿವಾಸ್

ಸಿನಿಮಾ ಬಗ್ಗೆ ಮಾತನಾಡಿದ ಹೀರೋ ತಾರುಷ್:

‘ಜಾಲಿ’ ಸಿನಿಮಾದಲ್ಲಿ ಹೊಸ ನಟ ತಾರುಷ್ ಅವರು ಹೀರೋ ಆಗಿ ನಟಿಸಿದ್ದಾರೆ. ಅಲ್ಲದೇ, ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥೆ ಏನು ಎಂಬುದರ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆ ಕುರಿತು ಚಿತ್ರದಲ್ಲಿ ಕಥೆ ಹೆಣೆಯಲಾಗಿದೆ. ಕೊನೆಯಲ್ಲಿ ಉತ್ತಮ ಪರಿಹಾರ ಮತ್ತು ಸಂದೇಶವಿದೆ. ಕಾಮಿಡಿ, ಆ್ಯಕ್ಷನ್, ಅಪ್ಪ-ಮಗಳ ಎಮೋಷನ್ ಕೂಡ ಇದೆ’ ಎಂದು ಅವರು ಹೇಳಿದರು.

‘ಜಾಲಿ’ ಸಿನಿಮಾದ ಟ್ರೇಲರ್:

ತಾರುಷ್ ಅವರು ಸುಮಾರು 12 ವರ್ಷಗಳ ಕಾಲ ರಂಗಭೂಮಿ ಮತ್ತು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ‘ಜಾಲಿ’ ಚಿತ್ರಕ್ಕೆ ನಿತಿನ್ ರಾಜ್ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು ಯೋಗರಾಜ್ ಭಟ್, ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ. ರೇಖಾ ದಾಸ್, ಶೋಭರಾಜ್ ಮುಂತಾದ ಹಿರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *