ನಟ ದರ್ಶನ್ ಜೊತೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಲವು ಸಿನಿಮಾ ಮಾಡಿದ್ದರು. ಈಗ ದರ್ಶನ್ (Darshan) ಜೈಲಿನಲ್ಲಿ ಇದ್ದಾರೆ. ಆದಷ್ಟು ಬೇಗ ಅವರು ರಿಲೀಸ್ ಆಗುತ್ತಾರೆ ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ. ‘ಭೀಮ ತೀರದಲ್ಲಿ’ ಚಿತ್ರ ಮರುಬಿಡುಗಡೆ ಆಗಲಿದ್ದು, ಆ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಜೂನ್, ಜುಲೈ ಒಳಗೆ ದರ್ಶನ್ ಅವರು ಜೈಲಿನಿಂದ ಹೊರಗೆ ಬರುತ್ತಾರೆ. 3-4 ತಿಂಗಳಲ್ಲಿ ಅವರು ಬರುವುದು ಪಕ್ಕಾ. ಆ ನಂಬಿಕೆ ನನಗೆ ಇದೆ. ಈ ರೀತಿ ನಾನು ಮೊದಲು ತುಂಬಾ ಸಿನಿಮಾಗಳಿಗೆ ಹೇಳಿದ್ದೆ. ಈ ಸಿನಿಮಾ ಓಡಲ್ಲ ಬಿಟ್ಟುಬಿಡಿ ಅಂತ ಹೇಳಿದ್ದೆ. ಅದು ಹಾಗೆಯೇ ಆಗಿದೆ. ದೊಡ್ಡ ಲೆವಲ್ನಲ್ಲಿ ಹಿಟ್ ಆಗತ್ತೆ ಅಂತ ಕೂಡ ಹೇಳಿದ್ದೆ’ ಎಂದು ಓಂ ಪ್ರಕಾಶ್ ರಾವ್ (Om Prakash Rao) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
