ಜೇನುತುಪ್ಪದ ಪ್ರಯೋಜನಗಳೇನು, ಪತಂಜಲಿ ಜೇನುತುಪ್ಪದ ಶುದ್ಧತೆ ಎಷ್ಟು? ಇಲ್ಲಿದೆ ಮಾಹಿತಿ – Kannada News | Baba Ramdev tells the benefits of honey for healthier life, research reveals quality of Patanjali honey

ಆಯುರ್ವೇದದಲ್ಲಿ ಜೇನುತುಪ್ಪವನ್ನು (Honey) ನೈಸರ್ಗಿಕ ಮತ್ತು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ನೈಸರ್ಗಿಕ ಸಕ್ಕರೆಯಿಂದ ಸಮೃದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಕಲಬೆರಕೆ ಜೇನು ಬಗ್ಗೆ ಜನರು ಹೆಚ್ಚು ಆತಂಕಿತರಾಗಿದ್ದಾರೆ. ಶುದ್ಧ ಜೇನುತುಪ್ಪಕ್ಕೆ ಬೇಡಿಕೆ ಮತ್ತು ಅಗತ್ಯತೆ ಬಹಳ ಹೆಚ್ಚಿದೆ. ಈ ಸಂದರ್ಭದಲ್ಲಿ, ಪತಂಜಲಿ ಆಯುರ್ವೇದ (Patanjali Ayurveda) ಸಂಸ್ಥೆಯು ಜೇನುತುಪ್ಪದ ಶುದ್ಧತೆಯ ಬಗ್ಗೆ ವೈಜ್ಞಾನಿಕ ಅಧ್ಯಯನವೊಂದನ್ನು ಪ್ರಕಟಿಸಿದೆ.

ತನ್ನ ಜೇನುತುಪ್ಪವು ಸ್ಥಾಪಿತ ಮಾನದಂಡಗಳನ್ನು ಪೂರೈಸುತ್ತದೆ. ಗ್ರಾಹಕರಿಗೆ ಇದು ಸುರಕ್ಷಿತವಾಗಿಯೂ ಇದೆ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಶುದ್ಧ ಜೇನುತುಪ್ಪದ ನಿಯಮಿತ ಮತ್ತು ಸಮತೋಲಿತ ಸೇವನೆಯು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಆಯುರ್ವೇದದ ಪ್ರಕಾರ, ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ. ಅನೇಕ ಮನೆಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಆಯುರ್ವೇದದಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು, ಮತ್ತು ಇದರ ಸಂಶೋಧನೆ ಹೇಳುವುದೇನು ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಪತಂಜಲಿ ಲೋಹಾಸವ ಸಿರಪ್; ಏನಿದು, ಯಾಕಾಗಿ ಬೇಕು, ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಜೇನುತುಪ್ಪ ಸೇವನೆಯಿಂದ ಪ್ರಯೋಜನಗಳೇನು?

ಆಯುರ್ವೇದದ ಪ್ರಕಾರ, ಜೇನುತುಪ್ಪವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಗಂಟಲು ನೋವು, ಕೆಮ್ಮು ಮತ್ತು ಶೀತ ಸಮಸ್ಯೆ ನಿವಾರಿಸಲು ಬಳಸಲಾಗುತ್ತದೆ. ಜೇನುತುಪ್ಪವು ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಬೆಚ್ಚಗಿನ ನೀರಿನೊಂದಿಗೆ ಜೇನುತುಪ್ಪ ಸೇವಿಸಿದಾಗ ಕೊಬ್ಬು ಕರಗುತ್ತದೆ. ಜೇನುತುಪ್ಪದಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ದೇಹಕ್ಕೆ ಇಮ್ಯೂನಿಟಿ ಶಕ್ತಿ ಹೆಚ್ಚಿಸುತ್ತದೆ.

ಜೇನುತುಪ್ಪವು ನ್ಯಾಚುರಲ್ ಮಾಯಿಶ್ಚರೈಸರ್ ಗುಣ ಹೊಂದಿರುವುದರಿಂದ ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲಿ ಗಾಯಗಳನ್ನು ಗುಣಪಡಿಸಲು ಮತ್ತು ಇಮ್ಯೂನಿಟಿ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಮತ್ತು ಮಿತವಾಗಿ ಸೇವಿಸುವುದರಿಂದ ದೇಹವು ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ.

ಪತಂಜಲಿ ಆಯುರ್ವೇದದ ಜೇನುತುಪ್ಪದ ಬಗ್ಗೆ ರಿಸರ್ಚ್ ಏನು ಹೇಳುತ್ತದೆ?

ಎಲ್ಸೆವಿಯರ್ (Elsevier) ರಿಸರ್ಚ್ ಪ್ರಕಾರ, ಪತಂಜಲಿ ಆಯುರ್ವೇದದ ಜೇನುತುಪ್ಪದ ಶುದ್ಧತೆ ಮತ್ತು ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ. ಅಧ್ಯಯನದಲ್ಲಿ ಜೇನುತುಪ್ಪದ ನೈಸರ್ಗಿಕ ಅಂಶಗಳು ಮತ್ತು ಸ್ಥಾಪಿತ ಮಾನದಂಡಗಳನ್ನು ಪರಿಗಣಿಸಲಾಗಿದೆ. ಜೇನುತುಪ್ಪವು ಸ್ಥಾಪಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದೆ ಎಂದು ಈ ರಿಸರ್ಚ್ ವರದಿ ಹೇಳಿದೆ.

ಇದನ್ನೂ ಓದಿ: ಪತಂಜಲಿ ಫುಡ್ಸ್​ನ ‘ಸೂಪರ್-ಫಾಸ್ಟ್’ ಗಳಿಕೆ! 9 ತಿಂಗಳಲ್ಲಿ ₹29,000 ಕೋಟಿ ಆದಾಯ

ಕಲಬೆರಕೆಗೆ ಸ್ಪಷ್ಟ ಎವಿಡೆನ್ಸ್ ಇಲ್ಲ. ಸರಿಯಾಗಿ ತಯಾರಿಸಿ ಪರೀಕ್ಷಿಸಿದ ಜೇನುತುಪ್ಪವನ್ನು ಸುರಕ್ಷಿತವಾಗಿ ಸೇವಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಕಂಪನಿಯ ಪ್ರಕಾರ, ಈ ಅಧ್ಯಯನವು ಪತಂಜಲಿಯ ಜೇನುತುಪ್ಪದ ಗುಣಮಟ್ಟವನ್ನು ಸಾಬೀತುಪಡಿಸುತ್ತದೆ.

ಜೇನುತುಪ್ಪವನ್ನು ಹೇಗೆ ಸೇವಿಸಬೇಕು?

ಜೇನುತುಪ್ಪವನ್ನು ಮಿತವಾಗಿ ಸೇವಿಸಬೇಕು. ಬೆಳಿಗ್ಗೆ ಒಂದು ಟೀ ಚಮಚ ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಕೆಮ್ಮು ಅಥವಾ ಗಂಟಲು ನೋವಿಗೆ, ಶುಂಠಿ ಅಥವಾ ತುಳಸಿ ರಸದೊಂದಿಗೆ ಸೇವಿಸಬಹುದು. ಜೇನುತುಪ್ಪವನ್ನು ಅತಿಯಾಗಿ ಬಿಸಿ ಮಾಡದಂತೆ ಎಚ್ಚರವಹಿಸಿ ಮತ್ತು ಒಂದು ವರ್ಷದೊಳಗಿನ ಮಕ್ಕಳಿಗೆ ನೀಡುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *