ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ತಾತ್ಕಾಲಿಕ ಬಿಡುಗಡೆ: ಕಾರಣವೇನು? – Kannada News | Rajpal Yadav got interim release from jail on condition

ಬಾಲಿವುಡ್​ನ (Bollywood) ಖ್ಯಾತ ನಟ ರಾಜ್​​ಪಾಲ್ ಯಾದವ್ 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು ಈಗಾಗಲೇ ಅವರು ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೋನು ಸೂದ್ ಸೇರಿದಂತೆ ಇನ್ನೂ ಕೆಲವರು ರಾಜ್​ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದು, ರಾಜ್​ಪಾಲ್ ಯಾದವ್ ಅವರ ಸಾಲದ ಹಣ ನೀಡಿ ಅವರನ್ನು ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ಇವುಗಳ ನಡುವೆ ರಾಜ್​​ಪಾಲ್ ಯಾದವ್ ಅವರಿಗೆ ನ್ಯಾಯಾಲಯದಿಂದಲೇ ತಾತ್ಕಾಲಿಕ ಬಿಡುಗಡೆ ದೊರಕಿದೆ.

ರಾಜ್​ಪಾಲ್ ಯಾದವ್ ಅವರ ಸಹೋದರನ ಪುತ್ರಿಯ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್​ಪಾಲ್ ಯಾದವ್ ಅವರು ತಾತ್ಕಾಲಿಕ ಬಿಡುಗಡೆಯನ್ನು ಕೋರಿದ್ದರು. ಅದರಂತೆ ಇದೀಗ ನ್ಯಾಯಾಲಯವು ರಾಜ್​ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಬಿಡುಗಡೆ ಮಂಜೂರು ಮಾಡಿದ್ದು, ಮಾರ್ಚ್ 18 ರ ವರೆಗೆ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮತ್ತೆ ತಿಹಾರ್ ಜೈಲು ಸೇರಿಕೊಳ್ಳಬೇಕಿದೆ. ರಾಜ್​ಪಾಲ್ ಯಾದವ್ ಅವರಿಗೆ ಹಲವು ಷರತ್ತುಗಳ ಮೇಲೆ ಈ ಮಧ್ಯಂತರ ಜಾಮೀನು ನೀಡಲಾಗಿದೆ.

ಜೈಲಿಂದ ಹೊರಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ರಾಜ್​ಪಾಲ್ ಯಾದವ್, ‘ನನಗೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ, ನನ್ನ ದೇಶದ ಜನ ಮತ್ತು ಬಾಲಿವುಡ್ ಮಂದಿ ನನ್ನನ್ನು ಪ್ರೀತಿಸಿದ್ದಾರೆ. ಅವರ ಪ್ರೀತಿಯಿಂದಲೇ ನಾನು ಧೈರ್ಯವಾಗಿದ್ದೇನೆ. ಕಳೆದ ಹತ್ತು ವರ್ಷಗಳಿಂದಲೂ ನಾನು ನ್ಯಾಯಾಲಯವನ್ನು ಗೌರವಿಸುತ್ತಾ ಬಂದಿದ್ದೇನೆ. ಎಲ್ಲೆಲ್ಲಿ ನ್ಯಾಯಾಲಯ ಆದೇಶಿಸಿದೆಯೋ ಅಲ್ಲೆಲ್ಲ ನಾನು ಹಾಜರಿ ಹಾಕಿದ್ದೇನೆ. ಈಗ ನನ್ನ ಮನವಿಯನ್ನು ಪುರಸ್ಕರಿಸಿ ನನಗೆ ಅವಕಾಶವಿತ್ತ ಹೈಕೋರ್ಟ್​​ಗೆ ಧನ್ಯವಾದ’ ಎಂದಿದ್ದಾರೆ ರಾಜ್​ಪಾಲ್ ಯಾದವ್.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

2010 ರಲ್ಲಿ ರಾಜ್​ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ದೆಹಲಿ ಮುರಳಿ ಪ್ರಾಜೆಕ್ಟ್ ಲಿಮಟೆಡ್ ವತಿಯಿಂದ ಐದು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಭಾರಿ ಮೊತ್ತದ ಹಣ ನಷ್ಟವಾಯ್ತು. ರಾಜ್​ಪಾಲ್ ಯಾದವ್ ಸಾಲ ಮರುಪಾವತಿ ಮಾಡಲಾಗಲಿಲ್ಲ, ಅವರು ಫೈನ್ಯಾನ್ಸಿಯರ್​​ಗೆ ಕೊಟ್ಟಿದ್ದ ಚೆಕ್​​ಗಳು ಬೌನ್ಸ್ ಆದವು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 9 ಕೋಟಿ ರೂಪಾಯಿ ಹಣ ಮರುಪಾವತಿಸಬೇಕು ಅಥವಾ ಜೈಲು ಶಿಕ್ಷೆ ಅನುಭವಿಸಬೇಕು ಎಂದಾಯ್ತು. ಆದರೆ ತಮ್ಮ ಬಳಿ ಅಷ್ಟೋಂದು ಹಣ ಇಲ್ಲ ಎಂದ ರಾಜ್​ಪಾಲ್ ಯಾದವ್ ಜೈಲು ಸೇರಿದ್ದರು. ಈಗ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ತಿಂಗಳು ಮಧ್ಯಂತರ ಜಾಮೀನು ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *