ಜೊತೆ ನೃತ್ಯ ಮಾಡಲು ಪೀಡಿಸಿ, ಮೊಬೈಲ್ ನಂಬರ್‌ಗಾಗಿ ಡಿಮ್ಯಾಂಡ್!: ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ – Kannada News | Bengaluru Resort Incident: Woman Harassed at Office Event, Sparks Outrage Online

ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ

ಬೆಂಗಳೂರು, ಏ,30: ಬೆಂಗಳೂರಿನಲ್ಲಿ ಕಾಮ ಪಿಶಾಚಿಗಳ ಹವಾಳಿ ಹೆಚ್ಚಾಗಿದೆ. ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಬೆಂಗಳೂರಿನ ರೆಸಾರ್ಟ್‌ನಲ್ಲಿ ಅಸಭ್ಯ ವರ್ತನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ರಜೆಯಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಮೋಜು, ವಿಶ್ರಾಂತಿ ಮತ್ತು ನಿರಾತಂಕವಾಗಿ ಇರುವ ಎಂದರೆ ಇಂತವರ ಕಾಟ ಹೆಚ್ಚಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ತಮ್ಮ ಕೆಟ್ಟ ಅನುಭವದ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ತನ್ನ ಕೆಲಸದ ನಿಮಿತ್ತ ನಗರದ ಸಮೀಪವಿರುವ ರೆಸಾರ್ಟ್‌ಗೆ ಹೋಗಿದ್ದರು. ಅದು ಅವರ ಆಫೀಸ್​​​ ಕೆಲಸ ಆಗಿರುವ ಕಾರಣ ಅಲ್ಲಿ ಪುರುಷರು ಕೂಡ ಇದ್ದರು. ಅಲ್ಲಿ ಕುಡಿಯಲು, ತಿನ್ನಲು ಎಲ್ಲವೂ ಇತ್ತು. ಆದರೆ ಈ ಮಹಿಳೆಗೆ ಅಲ್ಲಿ ಅವರ ಜತೆ ಕೆಲಸ ಬಗ್ಗೆ ಚರ್ಚೆ ಮಾಡಲು ಮಾತ್ರ ಇತ್ತು. ಇನ್ನು ಈ ಮಹಿಳೆಯ ಹೆಸರು ತುಷಿಕಾ ಅಗರ್ವಾಲ್ ಎಂದು, ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ತುಷಿಕಾ ಅಗರ್ವಾಲ್ ಊಟ ಮಾಡುತ್ತಿರುವ ಪುರುಷರ ಗುಂಪೊಂದು ಕೆಟ್ಟಾಗಿ ನೋಡುತ್ತಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆ ಪುರುಷರು ನೋಡುತ್ತಿರುವುದನ್ನು ಸರಿಯಾಗಿ ಇವರು ಗಮನಿಸಿದ್ದಾರೆ. 20 ರಿಂದ 30 ಜನರ ಮದ್ಯಪಾನ ಮಾಡಿದ ಪುರುಷರು ನೀವು ನಮ್ಮ ಜತೆಗೆ ಡ್ಯಾನ್ಸ್​​ ಮಾಡುತ್ತೀರಾ ಎಂದು ಕೇಳಿದರು. ಆದರೆ ಇದಕ್ಕೆ ತುಷಿಕಾ ನಿರಾಕರಿಸಿದ್ದಾರೆ. ಆದರೆ ಈ ವಿಷಯವನ್ನು ಅಷ್ಟಕ್ಕೆ ಬಿಡಲಿಲ್ಲ. ಆ ಪುರುಷರಲ್ಲಿ ಒಬ್ಬ ನಂತರ ನೇರವಾಗಿ ಬಂದು ತುಷಿಕಾ ಅವರಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತೀರಾ ಎಂದು ಕೇಳಲು ಆರಂಭಿಸಿದ್ದಾನೆ. ಇದಕ್ಕೂ ಕೂಡ ತುಷಿಕಾ ವಿರೋಧಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳ ಜೀವದ ಜೊತೆ ಆಟವಾಡಬೇಡಿ: ಬೆಂಗಳೂರಿನಲ್ಲಿ ಆರು ಮಕ್ಕಳ ಕಿಕ್ಕಿರಿದ ಸ್ಕೂಟರ್ ಜರ್ನಿ

ಇಲ್ಲಿದೆ ನೋಡಿ ವಿಡಿಯೋ:

ಇಷ್ಟಕ್ಕೆ ಬಿಡದ ಆ ಪುರುಷರ ಗುಂಪು ತುಷಿಕಾ ಅವರ ಮೊಬೈಲ್​​​ ನಂಬರ್​​​ನ್ನು ಅವರ ಆಫೀಸ್​​ ಸಿಬ್ಬಂದಿಗಳಿಂದ ಕೇಳಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆಯೇ? ಎಂಬ ಬಗ್ಗೆ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹದೇ ಘಟನೆ ನನ್ನ ಜೀವನದಲ್ಲೂ ನಡೆದಿದೆ ಎಂದು ಮತ್ತೊಂದು ಮಹಿಳೆ ಕಮೆಂಟ್ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯನ್ನು ಇಷ್ಟು ಕೆಟ್ಟ ಮನಸ್ಥಿತಿಯ ಪುರುಷರೊಂದಿಗೆ ಮೀಟಿಂಗ್​ ಮಾಡಲು ಹೇಗೆ ಕಳಿಸುತ್ತಾರೆ ಈ ಕಂಪನಿಯವರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಾಕ್ಷಿ ಇದ್ದರೆ ಇಲ್ಲಿ ಹಾಕಿ, ಇಲ್ಲದಿದ್ದರೆ ಇದು ಕಥೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *