ಏಕೆಂದರೆ ಈ ಪಂದ್ಯವನ್ನು ವೀಕ್ಷಿಸಲು ಮೊದಲೆರಡು ದಿನಗಳು 90 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿದ್ದರು. ಅತ್ತ ಆಸ್ಟ್ರೇಲಿಯಾದಲ್ಲಿ ಕ್ರಿಸ್ಮಸ್ ರಜೆ ಇರುವುದರಿಂದ 5 ದಿನದಾಟಗಳ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ 5 ಪೌಂಡ್ ಮಿಲಿಯನ್ಗಿಂತಲೂ ಆದಾಯಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಜೋಶ್ ಟಂಗ್ನ ನಿಖರ ದಾಳಿಯಿಂದ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಎರಡು ಇನಿಂಗ್ಸ್ಗಳ ಮೂಲಕ ಎದುರಿಸಿದ್ದು 479 ಎಸೆತಗಳನ್ನು ಮಾತ್ರ. ಪರಿಣಾಮ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಕೇವಲ 2 ದಿನಗಳಲ್ಲೇ ಕೊನೆಗೊಂಡಿದ್ದು, ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಸುಮಾರು 60.6 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.
