ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು – Kannada News | Shivamogga Astrologer Kamalakar Bhat And Uttara kannada suchitra audio Goes viral

ಶಿವಮೊಗ್ಗ, (ಫೆಬ್ರವರಿ 05): ನಿತ್ಯ ಬೆಳಗ್ಗೆ ಭವಿಷ್ಯ. ದಿನವೆಲ್ಲ ಆಂಟಿ ಜೊತೆ ಸರಸ ಸಲ್ಲಾಪ. ಇದು ಜನರ ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್​ನ (Kamalakar bhat )ಕರ್ಮಕಾಂಡ. ರೀಲ್ಸ್ ಮಾಡುತ್ತಿದ್ದ ಸುಚಿತ್ರಾಳ (Suchitra) ಹಿಂದೆ ಕಮಲಾಕರ್ ಭಟ್ ನಾಯಿ ತರ ಸುತ್ತಾಡುತ್ತಿದ್ದಂನಂತೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಸ್ವತಃ ಕಮಲಾಕರ್ ಭಟ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಇನ್ನೊಂದೆಡೆ  ‘ನೊಂದ ಹೃದಯದ ಪ್ರೀತಿ, ಇನ್ಮೇಲೆ ಓನ್ಲಿ ಮನಿ ಮನಿ’ ಎಂದು ಸುಚಿತ್ರಾ  ಬಯೋ ಹಾಕಿಕೊಂಡಿದ್ದು. ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಆಡಿಯೋನಲ್ಲೇನಿದೆ?


ಇಲ್ಲಿ ಕೇಳು ಇಲ್ಲಿ. ನೀನು ಇವಳನ್ನ, ಇನ್ನೊಂದು ವಿಚಾರ ನಿನಗೆ ಗೊತ್ತೋ ಗೊತ್ತಿಲ್ವೋ ಗೊತ್ತಿಲ್ಲ ನಂಗೆ. ಇವಳೇ ನನ್ನ ಸರ್ವಸ್ವ, ಇವಳನ್ನ ಪಡೆಯಬೇಕು ಎನ್ನುವ ದೃಷ್ಟಿಯಿಂದ ಅವಳು ಏನು ಮಾಡಿದ್ರು ಕೂಡ ನಾಯಿ ತರದಲ್ಲಿ ಅವಳ ಹಿಂದೆ ಓಡಾಡಿದವನು ನಾನು. ಅವಳು ನನ್ನ ಹಿಂದೆ ಬಂದೋಳಲ್ಲ. ಅವಳಿಗೆ ಬೇಕು ಅಂದ್ರೆ ಚಿಟಿಕೆ ಹೊಡೆದ್ರೆ ಸಾವಿರ ತಿಂಗಳು ಸಾವಿರ ನಾಯಿಗಳು ಎದುರಿಗೆ ಬೌಬೌಬೌ ಅಂತಾ ಬರುವಂತವು ಇದ್ದವು. ಆದ್ರೆ 4 ತಿಂಗಳ ಪರಿಶ್ರಮದ ಫಲವಾಗಿ ಭಗವಂತ ನನಗೆ ಕೊಟ್ಟ ಅಂದುಕೊಂಡಿದ್ದೀನಿ, ಗೊತ್ತಾಯ್ತಾ ಮೇಡಂ?

ಇದನ್ನೂ ಓದಿ: ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಹೀಗೆ ಕಮಲಾಕರ್ ಭಟ್ ಆಡಿಯೋದಲ್ಲಿ ಹೇಳಿದಂತೆ ಸುಚಿತ್ರಾಳನ್ನ ಬಲೆ ಬೀಳಿಸಿಕೊಳ್ಳಲುನಾಲ್ಕು ತಿಂಗಳ ಪರಿಶ್ರಮ ಅಂತೆ. ದೇವರು ಕೊಟ್ಟ ಫಲ ಅಂತೆ. ನಾಯಿ ತರ ಸುಚಿತ್ರಾ ಹಿಂದೆ ಓಡಿದ್ನಂತೆ. ಇದು ಸುಚಿತ್ರಾ ಹಾಗೂ ಕಮಲಾಕರ್ ಭಟ್ ಮಾತನಾಡಿರೋ ಆಡಿಯೋ ಎನ್ನಲಾಗಿದೆ. ಇದನ್ನ ಇವರು ಅದ್ಯಾರಿಗೋ ಕಳಿಸಿದಂತಿದೆ. ಇದೇ ಆಡಿಯೋದಲ್ಲಿ ಈ ರೀಲ್ಸ್ ರಾಣಿ, ಕಮಲಾಕರ್ ಭಟ್ ಪ್ರೇಯಸಿ ಸುಚಿತ್ರಾ ಆಡಿರೋ ಮಾತು ಸಹ ವೈರಲ್ ಆಗಿದ್ದು, ಅವನಿಗೆ ಹೆಂಡ್ತಿನು ನಾನೇ, ಲವರೂ ನಾನೇ ಎಂದು ಸುಚಿತ್ರಾ ಹೇಳಿಕೊಂಡಿದ್ದಾಳೆ.

‘ನೊಂದ ಹೃದಯದ ಪ್ರೀತಿ, ಇನ್ಮೇಲೆ ಓನ್ಲಿ ಮನಿ ಮನಿ’


ಕೈಯಲ್ಲಿ ಕಾಸಿದ್ರೆ ಕೈಕಾಲಿಗೆ ನೆಂಟ್ರು ಎಲ್ಲ ಎಂದು ರೀಲ್ಸ್ ಮಾಡಿದ್ದ ಸುಚಿತ್ರಾಳದ್ದು ನೊಂದ ಹೃದಯವಂತೆ. ವಿಷಯ ಅಂದ್ರೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಎರಡು ಖಾತೆ ಹೊಂದಿದ್ದಾಳೆ. ಈ ಪೈಕಿ ಅಕೌಂಟ್​​ವೊಂದರಲ್ಲಿ ನೊಂದ ಹೃದಯ ಇಷ್ಟು ದಿನ ಪ್ರೀತಿ ಗೀತಿ, ಇನ್ಮೇಲೆ ಓನ್ಲಿ ಮನಿ ಎಂದು ಬಯೋ ಹಾಕಿಕೊಂಡಿದ್ದಾಳೆ. ಇದು ಪ್ರೀತಿ ಹೆಸರಲ್ಲಿ ದುಡ್ಡು ಮಾಡುತ್ತಿದ್ದಳಾ? ಅಥವಾ ದುಡ್ಡನ್ನೇ ನೋಡಿ ಕಮಲಾಕರ್ ಭಟ್​ನ ಪ್ರೀತಿಸಿದ್ಲಾ ಎನ್ನುವ ಪ್ರಶ್ನೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *