ಶಿವಮೊಗ್ಗ, (ಫೆಬ್ರವರಿ 05): ಕೊಲೆ ಕೇಸ್‌ನಲ್ಲಿ (Murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಈತನ ಲವರ್ ಸುಚಿತ್ರಾ ಜೈಲು ಪಾಲಾಗಿದ್ದಾರೆ. ಈ ಜೋಡಿಹಕ್ಕಿ ಜೈಲು ಸೇರ್ತಿದ್ದಂತೆ ಇವರ ಒಂದೊಂದೇ ಕಾಮಪುರಾಣ ಹೊರಗೆ ಬರುತ್ತಿವೆ. ನಿತ್ಯಪೂಜೆ ಅಂತಾ ಬೆಳ್ಳಂ ಬೆಳಗ್ಗೆ ಟಿವಿಯಲ್ಲಿ ಬರುತ್ತಿದ್ದ ಕಮಲಾಕರ, ರಾತ್ರಿ ಆಗುತ್ತಿದ್ದಂತೆಯೇ ಸುಚಿತ್ರಾಳ ಜತೆ ಮಂಚ ಏರ್ತಿದ್ದ. ಕಮಲಾಕರ ಹಾಗೂ ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾಗ ಆಡಿಯೋ ವೈರಲ್ ಆಗಿದೆ. ಇನ್ನು ಮತ್ತೊಂದೆಡೆ ದಾಳಿಯಿಂದ ಗಾಯಗೊಂಡಿರುವ ಸುಚಿತ್ರಾಳ ಪತಿ ಮಹೇಶ್, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವೇಳೆ ಹೆಂಡ್ತಿ ಸುಚಿತ್ರಾಳ ಮತ್ತಷ್ಟು ನವರಂಗಿ ಆಟವನ್ನು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.
