ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು – Kannada News | Kamalakar bhat guruji And Suchitra And others judicial custody In Siddapur murder over affair dispute

ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳ್ತಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ A3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್‌, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ಕಮಲಾಕರ್ ಭಟ್‌ ಹಾಗೂ ಸುಚಿತ್ರಾಳ ಅಕ್ರಮ ಸಂಬಂಧ ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿಷಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಸುಚಿತ್ರಾ, ಬಳಿಕ ಪರ್ಮನೆಂಟ್ ಆಗಿ ಆತನ ಮನೆಯವಳಾಗಿಬಿಟ್ಟಿದ್ದಳು. ನಂತರ ಮನೆಯಲ್ಲಿ ಏನೆಲ್ಲಾ ನಡೆಯಿತಿತ್ತು ಎನ್ನುವುದನ್ನು ಸ್ವತಃ ಸುಚಿತ್ರಾಳ ಪುತ್ರಿ ಬಯಲು ಮಾಡಿದ್ದಾಳೆ.

ಕೆಲಸಕ್ಕೆಂದು ಸೇರಿ ಲಿವಿಂಗ್ ಟುಗೆದರ್

ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚವಾಗಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದ ಹೀಗಾಗಿ ಸುಚಿತ್ರಾ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲನಿಯ ಬಡಾವಣೆಯಲ್ಲಿ ಮನೆಯಲ್ಲಿ ಮಗಳೊದಿಗೆ ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು.

ಇದನ್ನೂ ಓದಿ: ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ

ಸುಚಿತ್ರಾಳ ಐಷರಾಮಿ ಜೀವನ

ಬಾಡಿಗೆ ಮನೆ ಪಕ್ಕದಲ್ಲಿ ಒಂದು ಕನಸು ಎನ್ನುವ ಸ್ವಾಮೀಜಿ ಕಚೇರಿ ಇತ್ತು. ಸ್ವಾಮೀಜಿ ಹೀಗೆ ಕಚೇರಿ ಮತ್ತು ಸುಚಿತ್ರಾ ಮನೆ ಎರಡನ್ನು ನಿರ್ವಹಣೆ ಮಾಡುತ್ತಿದ್ದ. ವಾರದಲ್ಲಿ ಮೂರ್ನಾಲ್ಕು ದಿನ ಜ್ಯೋತಿಷಿ ಸುಚಿತ್ರಾ ಜೊತೆಯಲ್ಲೇ ಇರುತ್ತದ್ದ. ಹೀಗಿರುವಾಗ ಸುಚಿತ್ರಾಳದ್ದು ಐಷಾರಾಮಿ ಜೀವನ ಶುರುವಾಗಿದ್ದು ಜ್ಯೋತಿಷಿಯ ಎರಡು ಕಾರ್ ಗಳನ್ನು ಸುಚಿತ್ರಾ ಬಳಕೆ ಮಾಡುತ್ತಿದ್ದಳು. ಇನ್ನು ಸುಚಿತ್ರಾ ಳಿಗೆ ಹರ್ಷ ಎನ್ನುವ ಕಾರು ಚಾಲಕನನ್ನು ಇಟ್ಟುಕೊಂಡಿದ್ದಳು.

ಜ್ಯೋತಿಷಿ-ತಾಯಿಯ ಮುಖವಾಡ ಕಳಚಿಟ್ಟ ಪುತ್ರಿ


ಇನ್ನು ಸುಚಿತ್ರಾಳ ಮಗಳು ಸುಮಾಶ್ರೀ ಟಿವಿ9 ಜತೆ ಮಾನಾಡಿದ್ದು, ತಾಯಿ ಹಾಗೂ ಗುರೂಜಿಯ ಮುಖವಾಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಳೆದ ಆರು ತಿಂಗಳಿಂದ ಶಿವಮೊಗ್ಗದಲ್ಲಿ ತಾಯಿ ಜೊತೆ ವಾಸವಾಗಿದ್ದು, ತಾಯಿ ಮತ್ತು ಕಮಲಾಕರ್ ಭಟ್ ಇಬ್ಬರು ಸೇರಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದರು.ಮನೆ ಬಿಟ್ಟು ಹೋಗಲು ಇಬ್ಬರು ಬಲವಂತ ಮಾಡುತ್ತಿದ್ದರು. ಈ ಹಿನ್ನಲೆ ನಾನು ತಂದೆಗೆ ಮಾಹಿತಿ ನೀಡಿದೆ. ತಂದೆ ಊರಿಗೆ ಬರಲು ಸೂಚನೆ ನೀಡಿದರು. ಅದರಂತೆ ನಾನು ಸಿದ್ದಾಪುರಕ್ಕೆ ಹೋಗಿ ದೂರು ನೀಡಿರುವೆ. ನನ್ನ ತಂದೆ ಮತ್ತು ದೊಡ್ಡಪ್ಪ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ದೊಡ್ಡಪ್ಪ ಮೃತಪಟ್ಟಿದ್ದಾರೆ. ಗುರುಜಿ ಮತ್ತು ತಾಯಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾಳೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಸುಚಿತ್ರಾ ಸೇರಿ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

ಜನರ ಭವಿಷ್ಯ ಹೇಳುತ್ತಾ ಬದುಕು ಕಟ್ಟಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಕಮಲಾಕರ್ ಭಟ್‌, ಸುಚಿತ್ರಾ ಅನ್ನೋ ಈ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದನ್ನ ಪ್ರಶ್ನೆ ಮಾಡ್ತಿದ್ದಂತೆ ಮೊನ್ನೆ ದೊಡ್ಡ ರದ್ಧಾಂತವೇ ಆಗಿತ್ತು. ಶಿವಮೊಗ್ಗದಿಂದ ನಾಲ್ಕೈದು ಹುಡುಗರನ್ನ ಕರೆದುಕೊಂಡು ಸಿದ್ದಾಪುರಕ್ಕೆ ಹೋಗಿದ್ದ ಕಮಲಾಕರ, ಸುಚಿತ್ರಾ ಪತಿ ಮಹೇಶ್‌ ಮೇಲೆ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ತಡೆಯಲು ಬಂದ ಮಹೇಶ್‌ ಸಹೋದರ ವಸಂತನಿಗೆ ಚಾಕು ಹಾಕಿ ಕೊಲೆ ಮಾಡಿದ್ರು. ಸೋಮವಾರ ರಾತ್ರಿಯೇ ಆರೋಪಿಗಳನ್ನ ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಜೆಎಂಎಫ್‌ಸಿ ಕೋರ್ಟ್‌ ಮುಂದೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ಕೋರ್ಟ್‌ ಕಮಲಾಕರ್‌ ಭಟ್‌, ಸುಚಿತ್ರಾ ಸೇರಿದಂತೆ 7 ಆರೋಪಿಗಳಿಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *