ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಸಹಜವಾಗಿ ಒಂದು ಸಿನಿಮಾಗೆ ನಷ್ಟ ಆಗುತ್ತದೆ ಎಂಬ ನಂಬಿಕೆ ಅನೇಕರದ್ದು. ಆರ್ಜಿವಿ ಕೂಡ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಪ್ರಮುಖವಾಗಿ ಅವರಿಗೆ ‘ಟಾಕ್ಸಿಕ್’ ಬಗ್ಗೆ ದ್ವೇಷ ಇದ್ದಂತೆ ಇದೆ. ಅವರು ಮೊದಲಿನಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ವಿಷಯ ಸ್ಪ್ರೆಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ರಿಲೀಸ್ ಆಗುತ್ತಿದೆ. ‘ಧುರಂದರ್’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕಲೆಕ್ಷನ್ ತುಂಬಾನೇ ಸಣ್ಣದಾಗಿ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ‘ಧುರಂಧರ್ 2’ ಎದುರು ‘ಟಾಕ್ಸಿಕ್’ ಬಂದರೆ ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿ ಎಂಬುದು ಅವರ ಮಾತಿನ ಅರ್ಥ.
THE #Dhuroxic PARK
NO, I am not talking about TWO BIG FILMS #Dhurandhar2 and #Toxic releasing on March 19th. I am actually talking about a NEVER BEFORE SEEN or EXPERIENCED mythical archetype EXPLODING in the GRAND ARENA of INDIAN CINEMAS.
It is a BATTLE between DAVID AND GOLIATH…— Ram Gopal Varma (@RGVzoomin) February 22, 2026
‘ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧರ್ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಜನರ ಮೂರ್ಖತನವನ್ನು ಊಹಿಸುತ್ತದೆ. ಕೆಜಿಎಫ್ 2 ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ಧುರಂಧರ್ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು’ ಎಂದಿದ್ದಾರೆ. ಈ ಮೊದಲು ಆರ್ಜಿವಿ ‘ಕೆಜಿಎಫ್ 2’ ಚಿತ್ರವನ್ನು ಹೊಗಳಿ ಮಾಡಿದ ಟ್ವೀಟ್ನ ತೋರಿಸಿ ಅವರಿಗೆ ಪಾಠ ಹೇಳಿಕೊಡಲಾಗಿದೆ.
ಈಗ ಈ ವಿಷಯದಲ್ಲಿ ಆರ್ಜಿವಿಯನ್ನು ಟ್ರೋಲ್ ಮಾಡಲಾಗಿದೆ. ಆ ಬಳಿಕ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅರ್ಥವಾಗದ ಎಲ್ಲಾ ಡಂಬೋಗಳಿಗೆ, ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ‘2 ಬಿಡುಗಡೆಗಳ ಸಂದರ್ಭದಲ್ಲಿ, ನಾನು ಸಿನಿಮಾದ ಶೈಲಿಗಳ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು ನಿರ್ದಿಷ್ಟವಾಗಿ ಒಂದು ಚಿತ್ರದ ಬಗ್ಗೆ ಅಲ್ಲ’ ಎಂದಿದ್ದಾರೆ.
Published On – 7:02 am, Mon, 23 February 26
