‘ಟಾಕ್ಸಿಕ್’ ಚಿತ್ರವನ್ನು ತುಳಿಯಲು ಬಾಲಿವುಡ್​​ನಲ್ಲಿ ನಡೀತಿದೆ ಸೀಕ್ರೆಟ್ ಪ್ಲ್ಯಾನ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ ಎಂದು ಅನೌನ್ಸ್ ಆದ ಬೆನ್ನಲ್ಲೇ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆದರೆ, ಇದರ ಬೆನ್ನಲ್ಲೇ ‘ಟಾಕ್ಸಿಕ್’ ಸಿನಿಮಾದ ಹೈಪ್ ಕಮ್ಮಿ ಮಾಡಲು ಹಾಗೂ ಚಿತ್ರವನ್ನು ತುಳಿಯಲು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ತಂತ್ರ ಶುರುವಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ರೂಪದಲ್ಲಿ ಒಂದಷ್ಟು ಟ್ವೀಟ್​​ಗಳು ಸಿಕ್ಕಿವೆ.

‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ಎದುರು ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆಗಲೂ ‘ಧುರಂಧರ್ 2’ ಎದುರು ಬಂದರೆ ‘ಟಾಕ್ಸಿಕ್ ಸಿನಿಮಾ ಹಳ್ಳ ಹಿಡಿಯುತ್ತದೆ ಎಂದೆಲ್ಲ ಬಾಲಿವುಡ್​ನಲ್ಲಿ ಮಾತನಾಡಿಕೊಳ್ಳಲಾಯಿತು. ಆದರೆ, ಕಾರಣಾಂತರಗಳಿಂದ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಯಿತು ಈಗ ‘ಈಥಾ’ ತಂಡದವರು ಇದೇ ರೀತಿಯಲ್ಲಿ ತಂತ್ರ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಸದ್ಯದ ಅಪ್‌ಡೇಟ್ ಪ್ರಕಾರ, ‘ಈಥಾ’ ಚಿತ್ರತಂಡ ಈಗಾಗಲೇ ಪ್ಯಾನಿಕ್ ಬಟನ್ ಒತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಎಕ್ಸ್ (ಟ್ವಿಟರ್) ತಾಣದಲ್ಲಿ ‘ಈಥಾ’ ವರ್ಸಸ್ ‘ಟಾಕ್ಸಿಕ್’ ಎಂಬ ಟ್ರೆಂಡ್ ಸೃಷ್ಟಿಸಿ, ಯಶ್ ಚಿತ್ರವನ್ನು ಕಳೆಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ.

ಒಂದೇ ರೀತಿಯ ಟ್ವೀಟ್: ಬಯಲಾಯ್ತು ಪಿಆರ್ ಸ್ಟಂಟ್?

ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಪ್ರತಿಯೊಂದು ಟ್ವೀಟ್‌ನ ಮುಖ್ಯ ಉದ್ದೇಶ ‘ಟಾಕ್ಸಿಕ್’ ಸಿನಿಮಾವನ್ನು ಡೀಗ್ರೇಡ್ ಮಾಡುವುದೇ ಆಗಿದೆ. ‘ಈಥಾ’ ಚಿತ್ರದ ಜೊತೆ ಯಶ್ ಸಿನಿಮಾವನ್ನು ಹೋಲಿಕೆ ಮಾಡುವುದು ಹಾಗೂ ರಿಲೀಸ್ ಡೇಟ್ ವಿಷಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಇಲ್ಲಿ ಹಾಸ್ಯದ ವಿಷಯ ಏನೆಂದರೆ ಈ ಪಿಆರ್ ಸ್ಟಂಟ್ ಮಾಡುತ್ತಿರುವವರು ಕನಿಷ್ಠ ಪಕ್ಷ ಟ್ವೀಟ್‌ಗಳ ಭಾಷೆ ಅಥವಾ ಸಾಲುಗಳನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ. ಪ್ರತಿಯೊಬ್ಬರೂ ಒಂದೇ ರೀತಿಯ ಸಾಲುಗಳನ್ನು ಕಾಪಿ-ಪೇಸ್ಟ್ ಮಾಡಿ ಟ್ವೀಟ್ ಮಾಡುತ್ತಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು, ಈ ಬಾಲಿಶ ಪಿಆರ್ ತಂತ್ರ ನಗೆಪಾಟಲಿಗೀಡಾಗಿದೆ.

ಇದನ್ನೂ ಓದಿ: ‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್

ಸಿನಿಮಾ ವಿಶ್ಲೇಷಕರ ಪ್ರಕಾರ, ‘ಈಥಾ’ ಸಿನಿಮಾ ಹೇಗಿದ್ದರೂ ಕೊನೆಗೆ ತನ್ನ ಬಿಡುಗಡೆ ದಿನಾಂಕವನ್ನು ಮುಂದೂಡುವುದು ಬಹುತೇಕ ಪಕ್ಕಾ ಆಗಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಇಲ್ಲದ ಪರ್ಸೆಪ್ಷನ್ ಕ್ರಿಯೇಟ್ ಮಾಡಲು ಮತ್ತು ‘ಟಾಕ್ಸಿಕ್’ ಇಮೇಜ್‌ಗೆ ಧಕ್ಕೆ ತರಲು ಇಂತಹ ತಂತ್ರಗಳನ್ನು ಮಾಡುತ್ತಿರುವುದು ಸದ್ಯ ಗಾಂಧಿನಗರ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *