ಯಶ್ ಟಾಕ್ಸಿಕ್ ಸಿನಿಮಾ Image Credit source: Toxic Movie
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಹೊಸ ಟೀಸರ್ ಗಮನ ಸೆಳೆದಿದೆ. ‘ಲೇಡೀಸ್ ಆ್ಯಂಡ್ ಲೇಡಿಸ್’ ಹೆಸರಲ್ಲಿ ಬಿಡುಗಡೆಯಾಗಿದ್ದ ಈ ಟೀಸರ್ನಲ್ಲಿ ಎಲ್ಲಾ ಹೀರೋಯಿನ್ಗಳನ್ನು ಪರಿಚಯಿಸಲಾಗಿದೆ. ಅದರಲ್ಲಿರುವ ವಿಭಿನ್ನ ಡಿಸ್ಕ್ಲೈಮರ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಎಚ್ಚರಿಕೆ ಕೊಡಲು ಕಾರಣವನ್ನು ಫ್ಯಾನ್ಸ್ ಪತ್ತೆ ಹಚ್ಚಿದ್ದಾರೆ.
‘ಲೇಡಿಸ್ ಆ್ಯಂಡ್ ಲೇಡಿಸ್’ ಟೀಸರ್ ಆರಂಭದಲ್ಲಿ ‘ಚಿಕ್ಕ ಮಕ್ಕಳೇ ಇದರಿಂದ ದೂರ ಇರಿ. ಪೋಷಕರೇ, ನಿಮ್ಮ ಮಕ್ಕಳು ಇದರಿಂದ ದೂರವಿರುವುದ್ದಾರೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮುತ್ತಜ್ಜ-ಮುತ್ತಜ್ಜಿಯರೇ ನಿಮ್ಮ ಮೊಮ್ಮಕ್ಕಳು ದೂರ ಇದ್ದಾರಾ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೋಡಿ’ ಎಂದು ಬರೆಯಲಾಗಿದೆ. ಟೀಸರ್ ಸಖತ್ ಬೋಲ್ಡ್ ಆಗಿದೆ ಎಂಬ ಕಾರಣಕ್ಕೆ ಈ ರೀತಿಯ ಡಿಸ್ಕ್ಲೈಮರ್ ಕೊಡಲಾಗಿದೆ. ಇದರ ಜೊತೆಗೆ ವಿವಾದದಿಂದ ತಪ್ಪಿಸಿಕೊಳ್ಳುವ ಒಂದು ಪ್ಲ್ಯಾನ್ ಕೂಡ ಇದರಲ್ಲಿ ಇದೆ.
Make sure ur kids Stay away😂🔥#Toxic #ToxicTheMovie #Yash #YashBoss pic.twitter.com/U36VRLXwKR
— ADI (Yashism) (@AdityaAngadi17) July 1, 2026
ಕಾರಣ ಪತ್ತೆ ಹಚ್ಚಿದ ನೆಟ್ಟಿಗರು:
ಯಶ್ ಫ್ಯಾನ್ಸ್ ಹಾಗೂ ಸಿನಿಪ್ರೇಮಿಗಳು ಈ ವಿಲಕ್ಷಣ ಎಚ್ಚರಿಕೆಯ ಹಿಂದಿನ ಅಸಲಿ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ) ಎಂದಾಗಿದೆ. ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಹಾಗೂ ಬೋಲ್ಡ್ ಕಂಟೆಂಟ್ ಇರಲಿದ್ದು, ಇದು ಕೇವಲ ವಯಸ್ಕರಿಗೆ ಮಾತ್ರ ಸೀಮಿತವಾಗಿರಲಿದೆ ಎಂಬುದನ್ನು ಚಿತ್ರತಂಡವೇ ನೇರವಾಗಿ ಸೂಚಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ನಲ್ಲಿ ಗನ್ ಹಿಡಿದು ಬಂದ ನಟಿ ರುಕ್ಮಿಣಿ ವಸಂತ್
ಹಿಂದಿನ ವಿವಾದಗಳ ಮುನ್ನೆಚ್ಚರಿಕೆ
‘ಟಾಕ್ಸಿಕ್’ ಸಿನಿಮಾದ ಆರಂಭಿಕ ಕಂಟೆಂಟ್ ಬಿಡುಗಡೆಯಾದಾಗ ಅದರಲ್ಲಿನ ಕೆಲವು ತೀವ್ರವಾದ ಬೋಲ್ಡ್ ದೃಶ್ಯಗಳ ವಿರುದ್ಧ ಮಹಿಳಾ ಸಂಘಟನೆಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ‘ಮೊದಲೇ ಎಚ್ಚರಿಕೆ ಕೊಟ್ಟಿದ್ರೆ ನಾವು ಮಕ್ಕಳ ಎದುರು ಟೀಸರ್ ಓಪನ್ ಮಾಡ್ತಾ ಇರಲಿಲ್ಲ’ ಎಂಬ ಹೇಳಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ಚಿತ್ರತಂಡವು ಮುಂದೆ ಎದುರಾಗಬಹುದಾದ ಯಾವುದೇ ಸೆನ್ಸಾರ್ ಅಥವಾ ಕಾನೂನು ವಿವಾದಗಳಿಂದ ಬಚಾವಾಗಲು ಮೊದಲೇ ಈ ರೀತಿಯ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.
ಬೋಲ್ಡ್ ಡೈಲಾಗ್ ಮತ್ತು ಆ್ಯಕ್ಷನ್
ಹೊಸ ಪ್ರೋಮೋದಲ್ಲಿಯೂ ನಟ ಯಶ್ ಅವರು ನಟಿಯರ ಜೊತೆ ಆ್ಯಕ್ಷನ್ ಹಾಗೂ ರೊಮ್ಯಾನ್ಸ್ ಮಾಡುವ ದೃಶ್ಯ ಇದೆ. ಕೆಲವು ಅತ್ಯಂತ ಬೋಲ್ಡ್ ಇಂಗ್ಲಿಷ್ ಸಂಭಾಷಣೆಗಳು ಇರುವುದರಿಂದ ಮಕ್ಕಳನ್ನು ಇದರಿಂದ ದೂರ ಇಡುವಂತೆ ಕಡಕ್ ಆಗಿ ಹೇಳಲಾಗಿದೆ.
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ
ಹಲವು ಬಾರಿ ಮುಂದೂಡಲ್ಪಟ್ಟಿದ್ದ ‘ಟಾಕ್ಸಿಕ್’ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಪ್ರಕಟಿಸಿದೆ. ಈ ಹೈ-ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:18 am, Thu, 2 July 26
