‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ 8ರ ನಂಟು; ಇದರ ಹಿಂದಿದೆ ರೋಚಕ ಸಂಖ್ಯಾಶಾಸ್ತ್ರ – Kannada News | Toxic Trailer Launch: Rocking Star Yash Event Encrypted with Mystery Number 8

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗವೇ ಕಾದು ಕುಳಿತಿರುವ ‘ಟಾಕ್ಸಿಕ್’ ಸಿನಿಮಾದ (Toxic Movie) ಅದ್ದೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು ಕಪಾಲಿ ಎಎಂಬಿ ಸಿನಿಮಾಸ್‌ನಲ್ಲಿ ಅತ್ಯಂತ ಖಾಸಗಿಯಾಗಿ ನಡೆಯುತ್ತಿದೆ. ಈ ಈವೆಂಟ್‌ನ ಬೆನ್ನಲ್ಲೇ ಇದೀಗ ಅಭಿಮಾನಿಗಳ ಕಣ್ಣು ಬಿದ್ದಿರುವುದು ಒಂದು ವಿಶಿಷ್ಟ ಲೆಕ್ಕಾಚಾರದ ಮೇಲೆ! ಅದೇನೆಂದರೆ, ಈ ಟ್ರೇಲರ್ ಲಾಂಚ್ ಕಾರ್ಯಕ್ರಮದ ಹಿಂದೆ ನಿಗೂಢ ‘8’ರ ಸಂಖ್ಯೆಯ ಬಲವಾದ ನಂಟಿದೆ.

ದಿನಾಂಕದಿಂದ ವರ್ಷದವರೆಗೆ ಎಂಟರ ಜಾಲ

ಇಂದು ಆಗಸ್ಟ್ 8. ಅಂದರೆ ದಿನಾಂಕ 8, ತಿಂಗಳು ಕೂಡ 8 (ಆಗಸ್ಟ್) ಮತ್ತು ಪ್ರಸ್ತುತ ವರ್ಷ 2026ರ ಕೊನೆಯ ಸಂಖ್ಯೆ 26 (2+6=8). ಹೀಗೆ ದಿನಾಂಕ, ತಿಂಗಳು ಹಾಗೂ ವರ್ಷ—ಮೂರೂ ಕೋನಗಳಿಂದಲೂ ಸೇರಿಸಿದರೆ ಸಿಗುವುದು ‘8’. ಇದು ಕೇವಲ ಕಾಕತಾಳೀಯವೋ ಅಥವಾ ಚಿತ್ರತಂಡ ಬೇಕೆಂದೇ ಮಾಡಿದ ಮಾಸ್ಟರ್ ಪ್ಲಾನೋ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಸಮಯದಲ್ಲೂ ಅಡಗಿದೆಯಾ ‘ಲಕಿ 8’ ಗುಟ್ಟು?

ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಇದುವರೆಗೂ ಟ್ರೇಲರ್ ರಿಲೀಸ್ ಆಗುವ ನಿಖರ ಸಮಯವನ್ನು ಬಹಿರಂಗಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಈ ಸಮಯದಲ್ಲೂ ‘8’ರ ಮ್ಯಾಜಿಕ್ ಇರಲಿದೆ. ಉದಾಹರಣೆಗೆ, ಸಂಜೆ 5:03 (5+3=8) ಅಥವಾ 6:02 (6+2=8), 7:01 (7+1)ರಂತೆ ಅಂಕಿಗಳ ಮೊತ್ತ 8 ಬರುವಂತಹ ಸಮಯಕ್ಕೇ ಟ್ರೇಲರ್ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಹಿಂದಿನ ಹಾಡಿನಲ್ಲೂ ಮಿಂಚಿದ್ದ 8ರ ರಹಸ್ಯ

ಈ ‘8’ರ ಟ್ರೆಂಡ್ ಇಂದಿನ ಟ್ರೇಲರ್‌ಗೆ ಮಾತ್ರ ಸೀಮಿತವಾಗಿಲ್ಲ. ಈ ಮೊದಲು ಬಿಡುಗಡೆಯಾಗಿದ್ದ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಕೂಡ ಬೆಳಿಗ್ಗೆ 11:33ಕ್ಕೆ ರಿಲೀಸ್ ಆಗಿತ್ತು. ಆ ಸಮಯದ ಅಂಕಿಗಳನ್ನು ಕೂಡಿ ನೋಡಿದರೆ (1+1+3+3) ಬರುವ ಮೊತ್ತವೂ ‘8’ ಆಗಿತ್ತು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ಲಾಂಚ್ ಕಾರ್ಯಕ್ರಮದ ವಿಶೇಷತೆಗಳೇನು? ಇಲ್ಲಿದೆ ವಿವರ

ರಿಲೀಸ್ ದಿನಾಂಕ

‘ಟಾಕ್ಸಿಕ್’ ಸಿನಿಮಾ 26-08-26ಕ್ಕೆ ರಿಲೀಸ್ ಆಗುತ್ತಿದೆ. ಇಲ್ಲಿಯೂ 8ರ ನಂಟು ಅಡಗಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಯಶ್ ಹುಟ್ಟಿದ್ದು 8ನೇ ತಾರೀಕಿನಂದು. ಹೀಗಾಗಿ, ಅವರಿಗೆ ಈ ಸಂಖ್ಯೆ ಲಕ್ಕಿ ಅಂತ ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *