‘ಟಾಕ್ಸಿಕ್’ ಸಿನಿಮಾ ಟೀಸರ್ ವಿಷಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ವಿಷಯದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಈಗ ಯಶ್ ಬೆಂಬಲಕ್ಕೆ ಕನ್ನಡದ ಮಹಿಳಾ ನಿರ್ದೇಶಕಿ ನಿಂತಿದ್ದಾರೆ. ಫಿಲ್ಮ್ ಚೇಂಬರ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರಿಯಾ ಹಾಸನ್ ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಯಶ್ ಬೆಂಬಲಕ್ಕೆ ನಿಂತಿದ್ದಾರೆ. ‘ಸಿನಿಮಾಗೆ ಏನು ಅಗತ್ಯವಿದೆಯೋ ಅವರನ್ನು ಮಾಡುತ್ತಿದ್ದಾರೆ. ಅವರ ಸಿನಿಮಾಗೆ ಎಲ್ಲ ಕಡೆ ಮಾರುಕಟ್ಟೆ ಇರುವುದರಿಂದ ಅವರು ಭಿನ್ನ ಸಿನಿಮಾ ನೀಡುತ್ತಿದ್ದಾರೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
