ಚೆನ್ನೈ, ಆಗಸ್ಟ್ 4: “ನಾನು ತ್ರಿಶಾ ಕೃಷ್ಣನ್ ಕುರಿತಾಗಿ ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ” ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ (Udhayanidhi Stalin) ಸ್ಪಷ್ಟಪಡಿಸಿದ್ದಾರೆ. ತಮ್ಮ ಭಾಷಣವು ಸಂಪೂರ್ಣವಾಗಿ ಸತ್ಯಾಂಶಗಳಿಂದ ಕೂಡಿದ್ದು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೇಲಷ್ಟೇ ಗಮನ ಹರಿಸಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಗೇ, “ಬಂಧನದ ಬಳಿಕ ಟಿವಿಕೆ ಸರ್ಕಾರ ನನ್ನನ್ನು ಭಯೋತ್ಪಾದಕನಂತೆ ನಡೆಸಿಕೊಂಡಿತು” ಎಂದು ಕೂಡ ಉದಯನಿಧಿ ಆರೋಪಿಸಿದ್ದಾರೆ.
ತಂಜಾವೂರಿನ ಸೆಂಗಿಪಟ್ಟಿ ಪೊಲೀಸ್ ಠಾಣೆಯಲ್ಲಿ ಸುಮಾರು 90 ನಿಮಿಷಗಳ ಕಾಲ ವಿಚಾರಣೆ ಎದುರಿಸಿದ ನಂತರ ಮಾತನಾಡಿದ ಉದಯನಿಧಿ, ಆಡಳಿತಾರೂಢ ಟಿವಿಕೆ ಸರ್ಕಾರವು ತಮ್ಮನ್ನು ಭಯೋತ್ಪಾದಕನಂತೆ ನಡೆಸಿಕೊಂಡಿದೆ ಎಂದು ಆರೋಪಿಸಿದರಲ್ಲದೆ, ಅದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಉದಯನಿಧಿ ಸ್ಟಾಲಿನ್, ತಮ್ಮ ಭಾಷಣವು ಸಚಿವರ ಕಾರ್ಯವೈಖರಿಯನ್ನು ಎತ್ತಿಹಿಡಿದಿತ್ತು ಮತ್ತು ರೈತರ ಕಳವಳಗಳನ್ನು ಪ್ರಸ್ತಾಪಿಸಿತ್ತು ಎಂದಿದ್ದಾರೆ. “ಅಷ್ಟೇ ಅಲ್ಲ, ಕಳೆದ 3 ತಿಂಗಳಲ್ಲಿ ಪ್ರತಿಯೊಬ್ಬ ಸಚಿವ ಏನು ಮಾಡಿದ್ದಾರೆ ಎಂಬುದನ್ನು ಸಾಕ್ಷ್ಯ ಸಮೇತ ಬೆಟ್ಟು ಮಾಡಿ ತೋರಿಸಿದ್ದೇನೆ. ಆದರೆ, ಇದಕ್ಕೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವಿಲ್ಲದ, ಅಸಮರ್ಥ ಹಾಗೂ ನಿಷ್ಪ್ರಯೋಜಕ ಡಮ್ಮಿ ಮುಖ್ಯಮಂತ್ರಿ ನಮ್ಮನ್ನಾಳುತ್ತಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
VIDEO | Tiruchirappalli: Former Tamil Nadu Deputy CM Udhayanidhi Stalin addresses a press conference at Tiruchirappalli Airport after leaving Sengipatti Police Station.
(Full video available on PTI Videos – https://t.co/n147TvrpG7)#TamilNadu pic.twitter.com/PgSMkgsB5x
— Press Trust of India (@PTI_News) August 4, 2026
“ನಾನು ಹೇಳದೇ ಇರುವ ಮಾತುಗಳನ್ನು ಕಾಪಿ-ಪೇಸ್ಟ್ ಮಾಡಿ, ಕೆಲವು ವಿಷಯಗಳನ್ನು ತಾವೇ ಸೇರಿಸಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ. ಸಂಪೂರ್ಣವಾಗಿ ರೈತರ ಪರವಾಗಿಯೇ ಮಾತನಾಡಿದ್ದೇನೆ” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
