ಟಿ20 ಯಲ್ಲಿ ಟೆಸ್ಟ್ ಆಡಿ ಅರ್ಧಶತಕ ಬಾರಿಸಿದ ಬಾಬರ್ ಆಝಂ – Kannada News | Babar Azam’s BBL Brilliance: Unbeaten Half Century Seals Sydney Sixers Victory

ಕಳೆದ ವರ್ಷವನ್ನು ಫಾರ್ಮ್​ ಕಂಡುಕೊಳ್ಳುವುದರಲ್ಲೇ ಕಳೆದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಈ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿರುವ ಬಾಬರ್ ಆಝಂ ಅಜೇಯ ಅರ್ಧಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡದ ಪರ ಆಡುತ್ತಿರುವ ಬಾಬರ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್‌ಗಳಲ್ಲಿ 165 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ತಂಡ ಇನ್ನು ಐದು ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತು. ಸಿಡ್ನಿ ಸಿಕ್ಸರ್ಸ್ ಪರ ಈ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಬರ್ ಆರಂಭದಿಂದ ಅಂತ್ಯದವರೆಗೆ ಒಂದು ತುದಿಯಲ್ಲಿ ನಿಂತು ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಬಾಬರ್ ನಿಧಾನಗತಿಯ ಇನ್ನಿಂಗ್ಸ್ ಆಡಿದರಾದರೂ 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್​ಗೆ ಇದು ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಎರಡನೇ ಅರ್ಧಶತಕವಾಗಿದೆ. 2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಬಾಬರ್ 128 ರನ್ ಗಳಿಸಿದ್ದಾರೆ. ಎರಡು ಪಂದ್ಯಗಳಲ್ಲಿ ತಲಾ 58 ರನ್‌ಗಳ ಎರಡೂ ಇನ್ನಿಂಗ್ಸ್‌ಗಳನ್ನು ಹೊರತುಪಡಿಸಿದರೆ, ಬಾಬರ್ ಉಳಿದ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 13 ರನ್ ಗಳಿಸಿದ್ದಾರೆ.

Source link

Leave a Reply

Your email address will not be published. Required fields are marked *