ಡಾಕ್ಟರ್ ಆಗು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ, ತಂಗಿ ಎದುರೇ ದೇಹ ಕತ್ತರಿಸಿ ಡ್ರಮ್​​ನಲ್ಲಿಟ್ಟ – Kannada News | Lucknow Shocker: Son Kills Father Over NEET Pressure, Dismembers Body

ಲಕ್ನೋ, ಫೆಬ್ರವರಿ 4: ಸಾಮಾನ್ಯವಾಗಿ ಪೋಷಕರಿಗೆ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ನೌಕರಿ ಪಡೆಯಬೇಕೆಂಬ ಕನಸಿರುತ್ತದೆ. ಕೆಲವೊಮ್ಮೆ ತಾವು ಸಾಧಿಸಲಾಗದ್ದನ್ನು ಅವರು ಸಾಧಿಸಲಿ ಎನ್ನುವ ಬಯಕೆಯೂ ಇರುತ್ತದೆ. ಆದರೆ ಆ ಆಸೆಯನ್ನು ಹೇಳಿಕೊಂಡ ತಂದೆಯನ್ನೇ ಮಗನೊಬ್ಬ  ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಡ್ರಮ್​​ನಲ್ಲಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು.

ಪೊಲೀಸರು ಅವರ ಮನೆಗೆ ಭೇಟಿ ನೀಡಿ, ಬ್ಯಾರೆಲ್‌ನಲ್ಲಿ ದೇಹದ ಭಾಗಗಳನ್ನು ಕಂಡುಕೊಂಡಿದ್ದರು. ಮಗ ಅಕ್ಷತ್ ಪ್ರತಾಪ್ ಸಿಂಗ್​​ನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿತ್ತು. ಪೊಲೀಸರ ಪ್ರಕಾರ, ಮನ್ವೇಂದ್ರ ಸಿಂಗ್ ಮಗ ಅಕ್ಷತ್ ಬಿ.ಕಾಂ ಓದುತ್ತಿದ್ದ, ಫೆಬ್ರವರಿ 20ರಂದು ಸಿಂಗ್ ಕಾಣೆಯಾಗಿದ್ದರು, ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.

ಆಶಿಯಾನಾದ ಸೆಕ್ಟರ್ ಎಲ್ ನಲ್ಲಿರುವ ಮನೆ ಸಂಖ್ಯೆ 91 ರಲ್ಲಿ ಡ್ರಮ್ ನಲ್ಲಿ ಮನ್ವೇಂದ್ರ ಅವರ ದೇಹವು ಡ್ರಮ್​ನಲ್ಲಿ ಪತ್ತೆಯಾಗಿತ್ತು, ತಂದೆ ಬೈದಿದ್ದರಿಂದ ಮಗ ನೊಂದಿದ್ದ ಎಂದು ವರದಿಯಾಗಿದ್ದು, ಇದೇ ಘಟನೆಗೆ ಕಾರಣವಾಗಿರಬಹುದು ಎಂದು ನಂಬಲಾಗಿದೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅಕ್ಷತ್ ತಾನು 12 ನೇ ತರಗತಿಯಲ್ಲಿ ಜೀವಶಾಸ್ತ್ರ ಪದವಿಯೊಂದಿಗೆ ಉತ್ತೀರ್ಣನಾಗಿದ್ದೇನೆ ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ವಿಚಾರಣೆಯ ಸಮಯದಲ್ಲಿ, ಅವನು ತನ್ನ ತಂದೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತನ್ನ ತಂದೆಯಿಂದ ಒತ್ತಡ ಇತ್ತು. ಬೈಯುವುದು ಹೆಚ್ಚಾಗಿ ಮನೆಯಲ್ಲಿ ಜಗಳಗಳು ನಡೆದಿತ್ತು ಎಂದು ಆತ ವಿವರಿಸಿದ್ದಾನೆ.

ಫೆಬ್ರವರಿ 20 ರಂದು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು ಎಂದು ಡಿಸಿಪಿ ವಿಕ್ರಾಂತ್ ವೀರ್ ದೃಢಪಡಿಸಿದರು. ಕೋಪದ ಭರದಲ್ಲಿ, ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಕೊಂದಿದ್ದ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಸ್ಥಳಾಂತರಿಸುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದ.

ಅಕ್ಷತ್ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಕೆಲವನ್ನು ಸದಾರೋನಾ ಗ್ರಾಮದ ಬಳಿ ಎಸೆದಿದ್ದ ಮತ್ತು ಉಳಿದ ಭಾಗಗಳನ್ನು ಮನೆಯಲ್ಲಿ ಡ್ರಮ್‌ನಲ್ಲಿ ಮರೆಮಾಡಿದ್ದ. ದೇಹದ ಭಾಗಗಳನ್ನು ನೆಲ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಶವ ಪತ್ತೆಯಾದ ನಂತರ, ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಪೊಲೀಸರು ಅಕ್ಷತ್ ನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಮಯದಲ್ಲಿ ಸಿಂಗ್ ಅವರ ಕುಟುಂಬ ಸದಸ್ಯರು ಹಾಜರಿದ್ದರು. ಉಳಿದ ದೇಹದ ಭಾಗಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಘಟನೆ ನಡೆದ ಸಮಯದಲ್ಲಿ, ಮನ್ವೇಂದ್ರ ಸಿಂಗ್ ಅವರ ಪತ್ನಿ ಗ್ರಾಮದಲ್ಲಿದ್ದರು, ಅವರ ಮಗಳು ಮನೆಯಲ್ಲಿದ್ದರು. ಆಕೆಯನ್ನು ಬೆದರಿಸಿದ್ದ ಎನ್ನಲಾಗಿದೆ. ಇದು ಹಠಾತ್ ವಿವಾದದ ಪರಿಣಾಮವೋ ಅಥವಾ ಪೂರ್ವಯೋಜಿತ ಪಿತೂರಿಯೋ? ಪೊಲೀಸರು ಹತ್ತಿರದ ನಿವಾಸಿಗಳು ಮತ್ತು ಸಂಬಂಧಿಕರನ್ನು ಸಹ ಪ್ರಶ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *