ಮೈಸೂರು, ಮೇ 15: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯ ಅವರ ತವರಲ್ಲಿ ವಿನೂತನವಾಗಿ ಆಚರಿಸಲಾಗಿದೆ. ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿಕೆಶಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗಿದೆ. 60 ಅಡಿ ಅಗಲ, 135 ಅಡಿ ಉದ್ದವಿರುವ ಈ ಚಿತ್ರವನ್ನು 4 ಸಾವಿರ ಕೆ.ಜಿ. ರಂಗೋಲಿ ಬಳಸಿ ಕಲಾವಿದ ಪುನೀತ್ ಬಿಡಿಸಿದ್ದಾರೆ. ಕನ್ನಡ ಭಾವುಟದ ಒಳಭಾಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾವಚಿತ್ರ ಮೂಡಿಬಂದಿರೋದು ನೋಡುಗರ ಗಮನ ಸೆಳೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
