Headlines

ತಮನ್ನಾ ಜೊತೆ ಹಾಡು ಬೇಕು ಎಂದ ಶಿವಣ್ಣ; ಗೀತಕ್ಕನ ಬಳಿ ಪಿಟ್ಟಿಂಗ್ ಇಟ್ಟ ಶ್ರೀನಿ – Kannada News | Dr Shivarajkumar A For Anand Promo Released: Hilarious Birthday Banter Goes Viral

ಕನ್ನಡ ಚಿತ್ರರಂಗದ ಖ್ಯಾತ ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ‘A For ಆನಂದ್’ ಚಿತ್ರದ ವಿಶೇಷ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ನಿರ್ದೇಶಕ ಶ್ರೀನಿ, ಶಿವಣ್ಣ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ನಡುವಿನ ಸಂಭಾಷಣೆ ಸಖತ್ ಫನ್ ಆಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ವಿಡಿಯೋದ ಆರಂಭದಲ್ಲಿ ಶಿವಣ್ಣ ಫೋನ್ ಮೂಲಕ ನಿರ್ದೇಶಕ ಶ್ರೀನಿಗೆ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸೂಚಿಸುತ್ತಾರೆ. ಶಿವಣ್ಣ ಅವರ ಮನೆಗೆ ಬರೋ ಶ್ರೀನಿ ಅವರು, ಗೀತಾ ಶಿವರಾಜ್‌ಕುಮಾರ್ ಅವರ ಸಮ್ಮುಖದಲ್ಲೇ ಎಲ್ಲಾ ಬದಲಾವಣೆ ಓಕೆ ಎನ್ನುತ್ತಾರೆ. ಆದರೆ ಶ್ರೀನಿ, ಶಿವಣ್ಣ ಅವರಿಗೆ ಬಿಗ್ ಶಾಕ್ ನೀಡುತ್ತಾರೆ!
‘ಅಕ್ಕ, ಶಿವಣ್ಣ ಅವರು ತಮನ್ನಾ ಭಾಟಿಯಾ ಅವರ ಜೊತೆ ಒಂದು ಇಂಟೆನ್ಸ್ ಸಾಂಗ್ ಇಡಬೇಕು ಅಂತ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ್ದಾರೆ’ ಎಂದು ಗೀತಕ್ಕನ ಮುಂದೆ ಗುಟ್ಟು ರಟ್ಟು ಮಾಡುತ್ತಾರೆ. ಇದನ್ನು ಕೇಳಿ ಶಿವಣ್ಣ ತಬ್ಬಿಬ್ಬಾಗುತ್ತಾರೆ. ‘ಅದು ತಮನ್ನಾ ಅಲ್ಲ, ಪಬ್ ಸಾಂಗ್ ಅಂತ ಬರೆಯಲು ಹೋಗಿ ಆಟೋಕರೆಕ್ಟ್ ಆಗಿ ತಮನ್ನಾ ಅಂತ ಬಂದಿದೆ’ ಎಂದು ತಮಾಷೆಯಾಗಿ ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಾರೆ.

ಅಷ್ಟಕ್ಕೇ ನಿಲ್ಲದ ಶ್ರೀನಿ, ‘ಶಿವಣ್ಣ ಪ್ರತಿಯೊಂದು ಸಿನಿಮಾದಲ್ಲೂ ಒಬ್ಬರೇ ಹೀರೋಯಿನ್ ಇರ್ತಾರೆ, ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಬೇಕು ಅಂದಿದ್ದಾರೆ, ರವಿಚಂದ್ರನ್ ಬಳಿ ಸಾಂಗ್ ಕೊರಿಯೋಗ್ರಫಿ ಮಾಡುವ ಬದಲಾವಣೆಯನ್ನು ಅವರು ಸೂಚಿಸಿದ್ದಾರೆ ಎಂದು ಎಂದು ಸಾಲು ಸಾಲು ಪಿಟ್ಟಿಂಗ್ ಇಡುತ್ತಾರೆ. ಗೀತಕ್ಕನ ಎದುರೇ ಶ್ರೀನಿ ಸತ್ಯ ಬಿಚ್ಚಿಡುತ್ತಿದ್ದಂತೆ ಶಿವಣ್ಣ ಬೆವತು ಹೋಗುವ ದೃಶ್ಯ ಕಾಮಿಡಿಯಾಗಿ ಮೂಡಿಬಂದಿದೆ. ನಂತರ ಈ ಚಿತ್ರದಲ್ಲಿ ಅವರ ಪಾತ್ರ ಮಾಸ್ ಲೀಡರ್ ಅಲ್ಲ,ಕ್ಲಾಸ್ ಲೀಡರ್  ಎಂದು ಬರುತ್ತದೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಹುಟ್ಟುಹಬ್ಬ ಫ್ಯಾನ್ಸ್​ಗೆ ವಿಶೇಷ ಆಹ್ವಾನ

ಕೊನೆಯಲ್ಲಿ ಶಿವಣ್ಣ ಅವರ ಖಡಕ್ ಲುಕ್ ರಿವೀಲ್ ಆಗುತ್ತೆ. ಈ ಚಿತ್ರಕ್ಕೆ ‘A For ಆನಂದ್’ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಸಿಕ್ಕ ಈ ಪ್ರೋಮೋ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *