ತಮಿಳುನಾಡು ಚುನಾವಣೆ, ಹೊಸ ಪಕ್ಷ ರಚಿಸುವುದಾಗಿ ಘೋಷಿಸಿದ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ – Kannada News | Tamil Nadu Election: VK Sasikala forms new Dravidian party, targets AIADMK ahead of Tamil Nadu elections

ಚೆನ್ನೈ, ಫೆಬ್ರವರಿ 25: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾ(Sasikala) ಮಂಗಳವಾರ ಹೊಸ ದ್ರಾವಿಡ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಇದೇ ಏಪ್ರಿಲ್​-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 78ನೇ ಜನ್ಮ ದಿನಾಚರಣೆಯಂದು ಅವರು ಪಕ್ಷದ ಧ್ವಜವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಶಶಿಕಲಾ ಮಾತನಾಡಿ, ತಮ್ಮ ಮಾಜಿ ಸಹೋದ್ಯೋಗಿ ಮತ್ತು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮಗೆ ದ್ರೋಹ ಬಗೆದಿದ್ದಾರೆ, ಅವರ ನಾಯಕತ್ವದಲ್ಲಿ ಪಕ್ಷವು ಅವನತಿ ಕಂಡಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಮತ್ತು ಜಯಲಲಿತಾ ಅವರ ಆಪ್ತ ಸಹಾಯಕರಾಗಿದ್ದ ಶಶಿಕಲಾ ಅವರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಒಳಗಾದ ಬಳಿಕ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.
ನಾನು ಕಳೆದ 9 ವರ್ಷಗಳಿಂದ ಮೌನವಾಗಿದ್ದರೆ ಅದು ತಮಿಳುನಾಡಿನ ಜನರಿಗೆ ಮಾಡಿದ ದ್ರೋಹವಾಗುತ್ತಿತ್ತು, ಆದ್ದರಿಂದ ತಮಿಳುನಾಡಿನ ಜನರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗಾಗಿ ನಾವು ಹೊಸ ಯುವನ್ನು ಪ್ರಾರಂಭಿಸಲಿದ್ದೇವೆ, ನಾವು ಹೊಸ ಪಕ್ಷವನ್ನು ಕಟ್ಟಲಿದ್ದೇವೆ ಎಂದು ಘೋಷಿಸಿದ್ದಾರೆ.

ಶಶಿಕಲಾ ಅವರು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು, ಇದರಲ್ಲಿ ಸಿಎನ್ ಅಣ್ಣಾದೊರೈ, ಎಂಜಿ ರಾಮಚಂದ್ರನ್ ಮತ್ತು ಜಯಲಲಿತಾ ಚಿತ್ರಗಳಿವೆ. ಸಧ್ಯಕ್ಕೆ ತಾವು ಪಕ್ಷದ ಧ್ವಜವನ್ನಷ್ಟೇ ಅನಾವರಣಗೊಳಿಸುತ್ತಿರುವುದಾಗಿ ಪಕ್ಷದ ಹೆಸರು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೂಡಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ, ಟಿವಿಕೆಗೆ ಪೂರ್ಣ ಬಹಮತ ಸಿಗಲಿದೆ: ವಿಜಯ್

2026ರ ಮೊದಲಾರ್ಧದಲ್ಲಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ನಾನು ಜೈಲಿನಲ್ಲಿದ್ದಾಗ, ಜೈಲು ಅಧಿಕಾರಿಗಳು ನನಗೆ 15 ದಿನಗಳ ಪೆರೋಲ್ ನೀಡಿದರು. ಆದರೆ, ಚೆನ್ನೈ ಆಯುಕ್ತರು ಜೈಲು ಎಸ್‌ಪಿಯನ್ನು ಸಂಪರ್ಕಿಸಿ, ಮುಖ್ಯಮಂತ್ರಿಗಳು ನನಗೆ ಐದು ದಿನಗಳಿಗಿಂತ ಹೆಚ್ಚು ಪೆರೋಲ್ ನೀಡಬಾರದು ಎಂದು ಆದೇಶಿಸಿದ್ದಾರೆ ಎಂದು ತಿಳಿಸಿದರು.

ನನ್ನ ಪತಿ ನಿಧನರಾದಾಗಲೂ, ಆರಂಭದಲ್ಲಿ 15 ದಿನಗಳನ್ನು ನೀಡಲಾಗಿದ್ದರೂ, ನಂತರ ಅವರು ಕೇವಲ 10 ದಿನಗಳನ್ನು ಮಾತ್ರ ನೀಡುವುದಾಗಿ ನಮಗೆ ತಿಳಿಸಿದರು. ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದ ವ್ಯಕ್ತಿಯೇ ನನ್ನ ಬೆನ್ನಿಗೆ ಇರಿದಿದ್ದ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗೆ, ಎಐಎಡಿಎಂಕೆ ಹತ್ತು ಬಾರಿ ಸೋಲನ್ನು ಎದುರಿಸಿದೆ ಮತ್ತು ಒಂದೇ ಒಂದು ಚುನಾವಣೆಯನ್ನು ಸಹ ಗೆದ್ದಿಲ್ಲ. ವಿರೋಧ ಪಕ್ಷದ ಕಾರ್ಯವೈಖರಿ ಅತ್ಯಂತ ಕಳಪೆಯಾಗಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:45 am, Wed, 25 February 26

Source link

Leave a Reply

Your email address will not be published. Required fields are marked *