ಕ್ರಿಕೆಟ್ ಜಗತ್ತಿಗೆ ಹೊಸ ಟಿ20 ಲೀಗ್ ಪ್ರವೇಶಿಸಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್)ನ ಮೊದಲ ಆವೃತ್ತಿ ಇಷ್ಟರಲ್ಲೇ ಪ್ರಾರಂಭವಾಗಲಿದೆ. ಈ ಲೀಗ್ನಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದ್ದು, ಈ ತಂಡಗಳಲ್ಲಿ ಒಂದು ತಂಡದ ಸಹ ಮಾಲೀಕತ್ವವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಹೊಂದಿದ್ದಾರೆ (PC-PTI).
ವಾಸ್ತವವಾಗಿ ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಈ ಹೊಸ ಟಿ20 ಲೀಗ್ ಅನ್ನು ಆಯೋಜಿಸುತ್ತಿವೆ. ಈ ಲೀಗ್ನಲ್ಲಿ ಒಂದು ತಂಡವನ್ನು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಡಚ್ ಫ್ರಾಂಚೈಸ್ ರೋಟರ್ಡ್ಯಾಮ್ ಡಾಕರ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ (PC-PTI).
ಡು ಪ್ಲೆಸಿಸ್ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರ ಮತ್ತು ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ನ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಹೆನ್ರಿಕ್ ಕ್ಲಾಸೆನ್ ಕೂಡ ಈ ಫ್ರಾಂಚೈಸಿಯ ಮಾಲೀಕರಲ್ಲಿ ಒಬ್ಬರು. ಇವರೊಂದಿಗೆ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಮಾಜಿ ಆಟಗಾರ ಜಾಂಟಿ ರೋಡ್ಸ್ ಕೂಡ ಈ ತಂಡದ ಸಹ-ಮಾಲೀಕರಾಗಿದ್ದಾರೆ (PC-PTI).
ಈ ಲೀಗ್ನ ಡ್ರಾಫ್ಟ್ ಜುಲೈ 2 ರಂದು ನಡೆಯಲಿದ್ದು, ಅದಕ್ಕೂ ಮೊದಲು ಎಲ್ಲಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ನೇರವಾಗಿ ತಂಡಕ್ಕೆ ಸೇರಿಸಿಕೊಂಡಿವೆ. ಅದರಲ್ಲಿ ಡು ಪ್ಲೆಸಿಸ್ ತನ್ನದೇ ಆದ ತಂಡದ ನಾಯಕರಾಗಿರಲಿದ್ದು, ಕ್ಲಾಸೆನ್ ಸಹ ಇದರಲ್ಲಿ ಆಡಲಿದ್ದಾರೆ. ಡೊನೊವನ್ ಫೆರೆರಾ ಮತ್ತು ಅನ್ರಿಚ್ ನೋಕಿಯಾ ಕೂಡ ಈ ತಂಡದಲ್ಲಿ ಇರಲಿದ್ದಾರೆ (PC-PTI).
ಇದಲ್ಲದೆ, ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಲೀಗ್ಗೆ ಸೇರಿದ್ದಾರೆ. ಅವರನ್ನು ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ನಾಯಕ ಮತ್ತು ಮಾರ್ಗದರ್ಶಕನಾಗಿ ನೇಮಿಸಲಾಗಿದೆ. ಹಅಗೆಯೇ ನ್ಯೂಜಿಲೆಂಡ್ನ ಸ್ಟಾರ್ ಆಟಗಾರರಾದ ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ಎಡಿನ್ಬರ್ಗ್ ಕ್ಯಾಸಲ್ ರಾಕರ್ಸ್ ತಂಡವನ್ನು ಸೇರಿದ್ದಾರೆ (PC-PTI).
