Headlines

ತಿರುಪತಿಗೆ ತೆರಳಿ ಮುಡಿಕೊಟ್ರಾ ನಯನತಾರಾ? ಫೋಟೋ ಅಸಲಿಯತ್ತೇನು? – Kannada News | Fact Check: Did Nayanthara Shave Her Head At Tirumala Ahead Of Toxic Release?

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಪ್ರಸ್ತುತ ‘ಟಾಕ್ಸಿಕ್’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಅವರು ತಿರುಪತಿ ತಿರುಮಲ ದೇವಾಲಯದಲ್ಲಿ ಮುಡಿ ಕೊಟ್ಟು ಸಂಪೂರ್ಣ ಬೋಳು ತಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ಈ ವೈರಲ್ ಫೋಟೋಗಳ ಹಿಂದಿನ ಅಸಲಿ ಸತ್ಯವೇ ಬೇರೆಯಾಗಿದೆ.

ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ನಯನತಾರಾ ಅವರ ಬೋಳು ತಲೆಯ ಫೋಟೋಗಳು ಹರಿಫಾಡುತ್ತಿವೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನ ನಟಿ ತಿರುಮಲದಲ್ಲಿ ಮುಡಿ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಚಿತ್ರಗಳು ನೈಜವಾದವುಗಳಲ್ಲ. ಇವುಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಲಾಗಿದೆ.

ನೆಟ್ಟಿಗರು ಈ ಫೋಟೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಈ ಫೋಟೋಗಳನ್ನು ಕೃತಕ ಬುದ್ಧಿಮತ್ತೆ ಅಂದರೆ ಎಐ ಬಳಸಿ ಸೃಷ್ಟಿಸಲಾಗಿದೆ. ನಯನತಾರಾ ಅವರು ನಿಜವಾಗಿ ತಮ್ಮ ತಲೆಗೂದಲನ್ನು ತೆಗೆಸಿಕೊಂಡಿಲ್ಲ. ದೇವಾಲಯಕ್ಕೆ ಭೇಟಿ ನೀಡಿದ ವೇಳೆ ತೆಗೆದ ಹಳೆಯ ಫೋಟೋಗಳನ್ನು ಎಡಿಟ್ ಮಾಡಲಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಜೊತೆ ತಿರುಮಲಕ್ಕೆ ಭೇಟಿ ನೀಡಿದ್ದರು. ಆ ವೇಳೆ ತೆಗೆಸಿಕೊಂಡ ಫೋಟೋಗಳನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಮೂಲ ಫೋಟೋದಲ್ಲಿದ್ದ ಉಡುಪು ಮತ್ತು ಓಲೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಕೇವಲ ತಲೆಯ ಭಾಗವನ್ನು ಎಐ ಮೂಲಕ ಬೋಳಾಗಿ ಕಾಣುವಂತೆ ಬದಲಾಯಿಸಲಾಗಿದೆ.

ಇದನ್ನೂ ಓದಿ:  ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು

ನಯನತಾರಾ ಸದ್ಯ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಭಿಮಾನಿಗಳು ಇಂತಹ ನಕಲಿ ಫೋಟೋ ಹಾಗೂ ವದಂತಿಗಳನ್ನು ನಂಬಬಾರದು ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *