ಶಿವಮೊಗ್ಗ, (ಆಗಸ್ಟ್ 02): ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಗುಡ್ಡ ಕುಸಿದು (thirthahalli land sliding ), ಶೆಡ್ ಮೇಲೆ ಮಣ್ಣು ಬಿದ್ದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ತಡರಾತ್ರಿ 2:30 ವೇಳೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪಕ್ಕದ ಶೆಡ್ನಲ್ಲಿ ವಾಸವಿದ್ದವರಿಗೂ ಗಂಭೀರ ಗಾಯಗಳಾಗಿವೆ. ಕೊಪ್ಪಳ. ರಾಯಚೂರು, ದಾವಣಗೆರೆಸ ಜಿಲ್ಲೆಯ ಕೂಲಿ ಕಾರ್ಮಿಕರು ನೆಲೆಸಿದ್ದ ಶೆಡ್ಗಳ ಮೇಲೆ ತಡೆಗೋಡೆ ಕುಸಿದು ಬಿದ್ದು ನಂತರ ಗುಡ್ಡದ ಮಣ್ಣು ಶೆಡ್ ಮೇಲೆ ಬಿದ್ದಿದೆ. ಗುಡ್ಡ ಕುಸಿತದ ಶಬ್ದ ಆಗುತ್ತಿದಂತೆ ಕೂಲಿ ಕಾರ್ಮಿಕರು ಶಡ್ ನಿಂದ ಹೊರಗೆ ಬಂದಿದ್ದಾರೆ. ಇದರೊಂದಿಗೆ ಪವಾಡ ರೀತಿಯಲ್ಲಿ ಪಾರಾಗಿದ್ದು, 22 ಜನರ ಜೀವ ಉಳಿದಿದೆ. ಇನ್ನು ಟಿವಿ9 ಮುಂದೆ ಗುಡ್ಡ ಕುಸಿದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ
