ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯಿಸಿದ್ದು ಹೇಗೆ ನೋಡಿ.. – Kannada News | Darshan wife Vijayalakshmi reaction after noticing media camera in Parappana Agrahara jail

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಅವರು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇರುವ ಅವರನ್ನು ನೋಡಲು ಇಂದು (ಏಪ್ರಿಲ್ 16) ಪತ್ನಿ ವಿಜಯಲಕ್ಷ್ಮಿ ಅವರು ಆಗಮಿಸಿದ್ದರು. ಅವರ ಜೊತೆ ನಟ ಧನ್ವೀರ್ ಕೂಡ ಬಂದಿದ್ದಾರೆ. ಜೈಲಿನ ಆವರಣದಲ್ಲಿ ನಡೆದು ಬರುವಾಗ ಮಾಧ್ಯಮಗಳ ಕ್ಯಾಮೆರಾ ನೋಡಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಸೆರೆ ಹಿಡಿಯುತ್ತಿರುವುದು ಏಕೆ ಎಂದು ವಿಜಯಲಕ್ಷ್ಮಿ (Vijayalakshmi Darshan) ಕಡೆಯವರು ಪ್ರಶ್ನಿಸಿದ್ದಾರೆ. ‘ಮಾಧ್ಯಮದವರು’ ಎಂದು ಹೇಳಿದ ಬಳಿಕ ಅವರು ಸುಮ್ಮನಾಗಿದ್ದಾರೆ. ವಾರಕ್ಕೆ ಎರಡು ಬಾರಿ ದರ್ಶನ್ ಅವರನ್ನು ನೋಡಲು ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿದ್ದಾರೆ. ಆದಷ್ಟು ಬೇಗ ದರ್ಶನ್ ಅವರಿಗೆ ಜಾಮೀನು ಸಿಗಲಿ ಎಂಬುದು ಅಭಿಮಾನಿಗಳ ಬಯಕೆ. ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *