
ದಾವಣಗೆರೆ, (ಮೇ 01): ಕರ್ನಾಟಕದಲ್ಲಿ ಎರಡು ವಿಧಾನಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಬಿರು ಬಿಸಿಲಿನಲ್ಲೂ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬಾಗಲಕೋಟೆಯಲ್ಲಿ ಮೂರು ದಿನ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಭರ್ಜರಿ ಪ್ರಚಾರ ಮಾಡಿ ಇದೀಗ ದಾವಣೆಗೆರೆ ಅಖಾಡಕ್ಕಿಳಿದಿದ್ದಾರೆ. ಹೌದು…ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಮುಗಿಸಿಕೊಂಡು ಇಂದು (ಮೇ 01) ದಾವಣಗೆರೆಗೆ ಕಾಲಿಟ್ಟಿದ್ದು, ತಮ್ಮ ಅಭ್ಯರ್ಥಿ ಸಮರ್ಥ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ, ಕಾರ್ಯಕರ್ತರು ಸಿಎಂ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪಟಾಕಿ ಹಚ್ಚಲು ರೆಡಿ ಮಾಡಿಕೊಂಡಿದ್ದರು. ಆದ್ರೆ, ಪಟಾಕಿ ಹಚ್ಚಲು ಅವಕಾಶ ಸಿಗದಿದಕ್ಕೆ ಯುವರು ಕೊಂಚ ಅಸಮಧಾನಗೊಂಡಿದ್ದು, ನಮ್ಮೂರಲ್ಲಿ ಜಾಸ್ತಿ ಹೊತ್ತು ಭಾಷಣ ಮಾಡಿಲ್ಲ ಎಂದು ಅಭಿಮಾನಿಯೋರ್ವ ಪ್ರೀತಿಯಿಂದ ಸಿದ್ದರಾಮಯ್ಯನವರಿಗೆ ಹೇಳಿದ ಪ್ರಸಂಗ ನಡೆದಿದೆ.