ದಾವಣಗೆರೆ ದಕ್ಷಿಣ ಕ್ಷೇತ್ರದ ಆಳ ಅಗಲ: ಕಣದಲ್ಲಿ 25 ಅಭ್ಯರ್ಥಿಗಳು; ಮಹಿಳಾ ಮತದಾರರೇ ಹೆಚ್ಚು

ದಾವಣಗೆರೆ ದಕ್ಷಿಣ ಕ್ಷೇತ್ರದ ಆಳ ಅಗಲ: ಕಣದಲ್ಲಿ 25 ಅಭ್ಯರ್ಥಿಗಳು; ಮಹಿಳಾ ಮತದಾರರೇ ಹೆಚ್ಚು

ದಾವಣಗೆರೆ, ಏಪ್ರಿಲ್​ 08: ಅಬ್ಬರದ ಪ್ರಚಾರ, ಜಿದ್ದಾಜಿದ್ದಿ ಸ್ಪರ್ಧೆಯಿಂದ ದಾವಣಗೆರೆ ದಕ್ಷಿಣ ಕ್ಷೇತ್ರ (Davanagere Bypoll) ರಾಜ್ಯದ ಗಮನ ಸೆಳೆದಿದೆ. ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ ಸೇರಿ ಬರೋಬ್ಬರಿ 25 ಜನ ಕಣದಲ್ಲಿದ್ದಾರೆ. ಮೇಲಾಗಿ ಅಲ್ಪಸಂಖ್ಯಾಂತರೇ ಅಧಿಕ ಇರುವ ಕ್ಷೇತ್ರವಾದ ಹಿನ್ನೆಲೆ ಆ ಸಮುದಾಯ ಅಭ್ಯರ್ಥಿಗಳೇ ಎಸ್​​ಡಿಪಿಐ ಸೇರಿ 14 ಜನ ಇದ್ದಾರೆ. ಇನ್ನೇನು ಮತದಾನಕ್ಕೆ ಕೆಲವೇ ಗಂಟೆ ಬಾಕಿಯಿದ್ದು, ಅಂತಿಮ ಹಂತದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.

ಶಿಗ್ಗಾಂವಿ, ಸಂಡೂರ್ ಹಾಗೂ ಚನ್ನಪಟ್ಟಣ ಮೂರು ಉಪ ಚುನಾವಣೆ ಗೆದ್ದು ಬೀಗುತ್ತಿರು ಕಾಂಗ್ರೆಸ್​​ ಇದೀಗ ಮತ್ತೊಂದು ಸತ್ವ ಪರೀಕ್ಷೆಗೆ ಸಜ್ಜಾಗಿದೆ. ಮೇಲಾಗಿ ಕಾಂಗ್ರೆಸ್ಸಿನ ಇಬ್ಬರು ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಹೆಚ್ ವೈ ಮೇಟಿ ನಿಧನದಿಂದ ತೆರವಾದ ಕ್ಷೇತ್ರಗಳು. ಇನ್ನೊಂದು ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಮಕ್ಕಳನ್ನ ಸೋಲಿಸಿದ್ದೇವೆ, ಇದ್ಯಾವ ಲೆಕ್ಕ ಎನ್ನುತ್ತಿರುವ ಕಾಂಗ್ರೆಸ್​​ ನಾಯಕ ಅಲ್ಪ ಸಂಖ್ಯಾತರ ಬಗ್ಗೆ ಅಳಕು ಇದೆ. ಇನ್ನೊಂದು ಕಡೆ ಹಮಾಲಿ ಮಾಡುವ ವ್ಯಕ್ತಿಯ ಮಗನಿಗೆ ಟಿಕೆಟ್​ ನೀಡಿ ಹೊಸ ಪ್ರಯೋಗ ಮಾಡಿದೆ ಬಿಜೆಪಿ.

ಇದನ್ನೂ ಓದಿ: ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ಇತ್ತ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿರುವ ಕಾಂಗ್ರೆಸ್. ತಂದೆ ಮಂತ್ರಿ, ತಾಯಿ ಸಂಸದೆ, ಮಗಾ ಏಕೆ ಶಾಸಕ ಎಂಬ ಪ್ರಶ್ನೆ ಕೇಳಿ ಬರುತ್ತಿವೆ. ಏನೇ ಆಗಲಿ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾನಕ್ಕೆ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ‌ ನಡೆಯಲಿದೆ. ಮತದಾನ ಹಿನ್ನೆಲೆ ದಾವಣಗೆರೆ ನಗರದ ಪಿಬಿ ರಸ್ತೆಯ ಬಳಿ ಇರುವ ಡಿಆರ್​ಆರ್​ ಸ್ಕೂಲ್​ನಲ್ಲಿ ಅಂತಿಮ ಹಂತದ ಸಿದ್ದತೆ ಹಾಗೂ ಮಸ್ಟರಿಂಗ್ ಕಾರ್ಯ ನಡೆದಿದ್ದು, 1425 ಚುನಾವಣಾ ಸಿಬ್ಬಂದಿ ಭಾಗಿಯಾಗಿದ್ದಾರೆ.

284 ಮತಗಟ್ಟೆಗಳ ಸ್ಥಾಪನೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ76 ಮತಗಟ್ಟೆಗಳನ್ನ ಅತಿ ಸೂಕ್ಷ್ಮ ಎಂದು ಗುರ್ತಿಸಲಾಗಿದೆ. 244 ಮತಗಟ್ಟೆ ಅಧಿಕಾರಿಗಳು, ಎಲ್ಲ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ 25 ಅಭ್ಯರ್ಥಿ ಕಣದಲ್ಲಿದ್ದಾರೆ.  ಪ್ರಜಾಪ್ರಭುತ್ವದ ಮಹತ್ವದ ಕಾರ್ಯಕ್ಕೆ ಸಿಬ್ಬಂದಿಗಳು ಸಜ್ಜಾಗಿದ್ದಾರೆ.

ಎಲ್ಲಾ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ಇದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು ಮತದಾರರು 231072. ಮಹಿಳಾ ಮತದಾರರ ಸಂಖ್ಯೆ 1,17690, ಪುರುಷ ಮತದಾರರ ಸಂಖ್ಯೆ 1,13399 ಹಾಗೂ ತೃತೀಯ ಲಿಂಗಿಗಳು 43 ಗಳಿದ್ದಾರೆ. ಪೊಲೀಸ್ ಇಲಾಖೆಯಿಂದ 38 ಸಶಸ್ತ್ರ ಮೀಸಲು ಪಡೆಯ ತುಕಡಿಗಳು, 37 ಎಎಸ್​ಐಗಳು, 164 ಪ್ರೊಬೇಷನರಿ ಪಿಎಸ್ ಐಗಳು, 47 ಹೆಡ್ ಕಾನ್ಸ್ ಸ್ಟೇಬರ್, 284 ಕಾನ್ಸ್ ಸ್ಟೇಬಲ್ ಹಾಗೂ 212 ಮಹಿಳಾ ಕಾನ್ಸ್ ಸ್ಟೇಬಲ್​ಗಳನ್ನ ಭದ್ರತೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಗ್ಯಾರಂಟಿ ಯೋಜನೆಗಳ ಅನುದಾನದ ವಿವರ ಕೇಳಿದ ಆಯೋಗ

ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಗಂಭೀರ ಸಮಸ್ಯೆ ಇದ್ದವರಿಗೆ ಚುನಾವಣೆ ಸೇವೆಯಿಂದ ಬಿಡುಗಡೆಗೆ ಕ್ರಮಕೈಗೊಳ್ಳಲಾಗುತ್ತಿದೆ.‌ ಕೆಲವರು ಅನಾರೋಗ್ಯದ ಕಾರಣ ಹೇಳಿಕೆ ಚುನಾವಣಾ ಕಾರ್ಯದಿಂದ ಜಾರಿಕೊಳ್ಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ. ಇಂತವರಿಗೆ ತೊಂದರೆ ಇದೆ ಎಂದು ವೈದ್ಯರೇ ಹೇಳಬೇಕು, ಆಗ ಅವರನ್ನ ಹಿರಿಯ ಅಧಿಕಾರಿಗಳು ಚುನಾವಣೆ ಸೇವೆಯಿಂದ ಬಿಡುಗಡೆಗೊಳಿಸಲಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು 

ಇನ್ನು ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಸಖಿ ಮತಗಟ್ಟೆಗಳನ್ನ ಸಹ ಮಾಡಲಾಗಿದೆ. ಈ ಹಿಂದೆ ಕೆಲ ಬೂತಗಳಲ್ಲಿ ರಾತ್ರಿಯವರೆಗೂ ಮತದಾನ ನಡೆದ ಬಗ್ಗೆ ಮಾಹಿತಿಗಳಿದ್ದು, ಅಂತಹ ಬೂತ್​ಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗ ನಿರ್ಧರಿಸಿದೆ. ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *