Headlines

ದಿನ ಭವಿಷ್ಯ: ಇಂದು ಈ ರಾಶಿಯವರು ವ್ಯಾಪಾರದಲ್ಲಿ ಅನ್ಯರನ್ನು ಬಲವಾಗಿ ನಂಬಿಸುವರು.. – Kannada News | Daily Horoscope for July 05, 2026: Uttarayan Greeshma season, Jyeshtha Masa Krishna Paksha Monday astrology prediction

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಸೋಮ ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:36 – 09:12, ಯಮಗಂಡ ಕಾಲ 10:48 – 12:24, ಗುಳಿಕ ಕಾಲ 14:01 – 15:37

ಮೇಷ ರಾಶಿ:

ನಿಮ್ಮ ಅತಿಯಾದ ಲೆಕ್ಕಾಚಾರವು ಬುಡ ಮೇಲಾಗುವ ಸಾಧ್ಯತೆ ಇದೆ. ನಿಮ್ಮನ್ನು ಅನಾವರಣ ಗೊಳಿಸಿದವರಿಗೆ ಕೃತಜ್ಞತೆ ಹೇಳಿ. ವಾಹನವನ್ನು ರಿಪೇರಿ ಮಾಡಿಸುವ ಕೆಲಸವೇ ಇಂದು ಹೆಚ್ಚಾದೀತು. ಯಾವ ಕೆಲಸವೂ ಆಗದೇ ಕಿರಿಕಿರಿಯಿಂದ ಸಿಟ್ಟುಗೊಳ್ಳುವಿರಿ. ಕೃಷಿಕರಿಗೆ ಇಂದು ಸ್ವಲ್ಪ ಜಾಡ್ಯವೂ ಇರಬಹುದು. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಅನಪೇಕ್ಷಿತ ಮಾತುಗಳೇ ನಿಮ್ಮ ಸಿಕ್ಕಿಸುವುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ.

ವೃಷಭ ರಾಶಿ:

ಕಳೆದುಕೊಂಡದ್ದರ ಬಗ್ಗೆ ಚಿಂತೆ ಬಿಟ್ಟು ಮುಂದೇನು ಆಗಬೇಕು ಎಂಬ ಬಗ್ಗೆ ಆಲೋಚಿಸಿ ಸಂತೋಷವಾಗಿರಬಹುದು. ನಿಮ್ಮ ಸ್ವಭಾವಕ್ಕೆ ಯೋಗ್ಯರಾದವರನ್ನು ಆರಿಸಿಕೊಳ್ಳಲು ಕಷ್ಟವಾಗಬಹುದು. ತೊಂದರೆಯನ್ನು ಸಹಿಸುವ ಸಹನೆ ಕಡಿಮೆಯಾಗಬಹುದು. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ಮಿಥುನ ರಾಶಿ:

ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಸಂಗಾತಿಯ ಜೊತೆ ತಾಳ್ಮೆಂದಿರಿ. ಉತ್ತಮ ಕಾಲವು ಬರಲಿ ಎಂದು ನಿರೀಕ್ಷೆಯಲ್ಲಿ ಇರುವಿರಿ. ತುಲನಾತ್ಮಕತೆಯಿಂದ ಸರಿಯಾದುದರ ಆಯ್ಕೆ ಮಾಡುವಿರಿ. ಮನೆಯಲ್ಲಿ‌ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ.‌ ನಿಮ್ಮ ಕೆಲಸದಲ್ಲಿ ಸಮಯ ಮತ್ತು ಶ್ರಮವನ್ನು ಹಾಕಿದ್ದರೆ ನೀವು ಗುರಿಯನ್ನು ಸಾಧಿಸುವಿರಿ. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ:

ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ‌ಇಂದು ನಿಮ್ಮ ಸಂಬಂಧದಲ್ಲಿ ಅನಗತ್ಯ ಮಾತುಗಳು, ವಿವಾದಗಳು ಉಂಟುಮಾಡಬಹುದು. ಸುಲಭವಾಗಿ ಏನನ್ನೂ ಒಪ್ಪಿಕೊಳ್ಳಲಾರಿರಿ. ಒಬ್ಬರಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಇಂದು ಇರಬಹುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು.

ಸಿಂಹ ರಾಶಿ:

ಇಂದು ನೀವು ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯದು. ಇಂದು ಕೆಲಸವನ್ನು ಕಂಡು ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಿಯಾರು. ಪ್ರವಾಸವನ್ನು ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡಲಿದ್ದೀರಿ.‌ ಅಪರಿಚಿತರು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಕ್ಲಿಷ್ಟ ಎನಿಸದು.

ಕನ್ಯಾ ರಾಶಿ:

ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ಇಂದು ನೀವು ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ತಾಳ್ಮೆಯಿಂದಲೇ ಇರಿ. ವಿವಾಹಕ್ಕೆ ನಿಮಗೆ ಮನಸ್ಸು ಪೂರ್ಣವಾಗಿ ಸಿದ್ಧವಾಗಿರದು. ಹಣಕಾಸಿನ ಒತ್ತಡದಿಂದ ಮನೆಯಲ್ಲಿ ಅಶಾಂತಿಯು ಉಂಟಾಗಬಹುದು. ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು.

ತುಲಾ ರಾಶಿ:

ಅನವಶ್ಯಕ ಚರ್ಚೆಗಳಿಗೆ ಆಸ್ಪದ ನೀಡದಿರಿ. ನೂತನ ಮಿತ್ರರ ಭೇಟಿ ಆಗವುದು. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಬರಲಿದೆ. ಮನೆಯಲ್ಲಿ ದೇವಕಾರ್ಯಗಳು ನಡೆಯಲಿದೆ. ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಅದರಲ್ಲಿ ಯಾವುದೇ ಬೇಸರಿಸಬೇಕಿಲ್ಲ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು.

ವೃಶ್ಚಿಕ ರಾಶಿ:

ಸ್ತ್ರೀಗೆ ಪುರುಷನ ಮೇಲೆ ದ್ವೇಷಬರಬಹುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ನಿಮ್ಮವರೇ ನಿಮ್ಮ‌ಮೇಲೆ ಅಪವಾದವನ್ನು ಹೇರುವ ಪ್ರಯತ್ನವನ್ನು ಮಾಡಬಹುದು.‌ ನಿಃಸ್ವಾರ್ಥವಾಗಿ ಇಷ್ಟಪಡುವವರ ಮೇಲೆ‌ ಅನುಮಾನ ಬೇಡ. ಯಾವದನ್ನಾದರೂ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರಲಾಗದು. ನೀವು ನಡೆಯಬೇಕಾದ ದಾರಿಯು ಸರಿ ಇದ್ದು ಅತ್ತ ಸಾಗುವಿರಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಧನು ರಾಶಿ:

ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನೀವು ನಿಯಮಬದ್ಧವಾಗಿ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೊಳ್ಳುತ್ತದೆ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರಲಿದೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುಂದೆ ಬಂದು ಸಹಾಯ ಮಾಡುವರು. ಸರ್ಕಾರಿ ಕಛೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.

ಮಕರ ರಾಶಿ:

ಜೊತೆಗಾರರು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸಂಗಾತಿಯ ಜೊತೆಗೆ ಸ್ನೇಹದಿಂದ ವರ್ತಿಸುವಿರಿ. ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಅಚಲವಾದ ನಂಬಿಕೆಗೆ ಘಾಸಿ ಮಾಡುವರು. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಸಂಬಂಧದ ಮಹತ್ವವನ್ನು ತಿಳಿಯುವುದು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ.

ಕುಂಭ ರಾಶಿ:

ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿ ಸಿಗುವುದು. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಿಮ್ಮನ್ನು ಯಾರಾದರೂ ಗಮನಿಸಬಹುದು. ಆರ್ಥಿಕ ಲಾಭಕ್ಕಾಗಿ ಪ್ರಯಾಣ ಮಾಡುವಿರಿ. ಕುಟುಂಬದ ಖರ್ಚು ಇಂದು ಇರಬಹುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು.

ಮೀನ ರಾಶಿ:

ವ್ಯವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ನಿಮ್ಮ ಪ್ರಣಯ ಜೀವನವು ಬಹಳಷ್ಟು ಸಂತೋಷ ತರಬಹುದು. ನಿಮ್ಮ ಆಪ್ತರ ಜೊತೆ ಬಾಂಧವ್ಯವನ್ನು ರೂಪಿಸುವ ಅವಕಾಶವಿದೆ. ಹೆಚ್ಚು ಶ್ರಮದ ಕಾರ್ಯಕ್ಕೆ ನೀವು ಹೋಗಲಾರಿರಿ. ನೂತನವಾಗಿ ವಿವಾಹವಾದ ದಂಪತಿಗಳು ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವರು. ವಿದ್ಯಾರ್ಥಿಗಳ ಕೆಲಸವು ಗಮನಾರ್ಹವಾಗಿ ವೃದ್ಧಿಯಾಗಬಹದು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *