ದಿನ ಭವಿಷ್ಯ: ಇಂದು ಈ ರಾಶಿಯವರ ಉನ್ನತಿ, ಹಲವರಿಗೆ ಅಸಹನೆ… – Kannada News | Daily Horoscope for July 22, 2026: Uttarayan Greeshma season, Ashada Masa shukla Paksha Wednesday astrology Prediction

ಮೇಷ ರಾಶಿ:

ನಿಮ್ಮ ಪಾಲಿನದ್ದು ನೀವು ಇಂದು ಪಡೆದುಕೊಳ್ಳಬಹುದು. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ನಿಮಗೆ ಇಂದು ಕುಟುಂಬಕ್ಕಿಂತಲೂ ಕಾರ್ಯವೇ ಮುಖ್ಯವಾಗಲಿದೆ. ಬೇಡ ಆಲೋಚನೆಯನ್ನು ಬಿಡುವುದು ಸೂಕ್ತ. ಪ್ರಯತ್ನಕ್ಕೆ ಇಂದೇ ಫಲವು ಸಿಗುತ್ತದೆ ಎಂಬುದು ಬೇಡ.ಲ.‌ ಸುಮ್ಮನೇ ಬಡಾಯಿ ಕೊಚ್ಚಿಕೊಳ್ಳುವುದು ಬೇಡ. ದಿನಸ ಎಲ್ಲ ಕಾರ್ಯವನ್ನೂ ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು.

ವೃಷಭ ರಾಶಿ:

ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡಿ. ನೂತನ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಪುಣ್ಯಸ್ಥಳದಿಂದ ನೆಮ್ಮದಿ ಸಿಗುವುದು. ನಿಮ್ಮೆದುರು ಸಹೋದ್ಯೋಗಿಗಳನ್ನು ಪ್ರಶಂಸಿಸಿದರೆ ಕೋಪ ಬರುವುದು. ನಿಮ್ಮವರಿಗೆ ಅನಿರೀಕ್ಷಿತವಾಗಿ ಅಮೂಲ್ಯವಾದ ಉಡುಗೊರೆಯೊಂದನ್ನು ಕೊಡುವಿರಿ. ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಪಾಲುದಾರಿಕೆಯಿಂದ ನಷ್ಟವೆನಿಸಬಹುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ.

ಮಿಥುನ ರಾಶಿ:

ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ಅಧಿಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಯಾರನ್ನೋ ಬೆರಳು ಮಾಡಿ ತೋರಿಸುವ ಬದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ಇರುವ ಭಾವನೆಯು ಬದಲಾಗುವುದು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡಿ.

ಕರ್ಕಾಟಕ ರಾಶಿ:

ಇಂದು ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಒತ್ತಡವಿರುವುದು. ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ವಾಹನದಿಂದ ನಿಮಗೆ ತೊಂದರೆಗಳು ಆಗಬಹುದು‌. ಸ್ತ್ರೀಯರಿಗೆ ಹೆಚ್ಚು ಅನುಕೂಲಕರವಾಗಲಿದೆ‌. ಒತ್ತಾಯದಿಂದ ಇರಿಕೊಂಡರೂ ಪ್ರಯೋಜನವಾಗದು. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಅಧ್ಯಾತ್ಮ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು.

ಸಿಂಹ ರಾಶಿ:

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಮನಸ್ಸನ್ನು ಯಾವುದೋ ಬೇಡದ ವಿಷಯಗಳ ಆಲೋಚನೆಗೆ ಬಿಡುವಿರಿ. ಸ್ವಾದಿಷ್ಟವಾದ ಭೋಜನವನ್ನು ಮಾಡಲು ಉತ್ಸಾಹದಿಂದ ಇರುವಿರಿ. ಅನಗತ್ಯ ಖರ್ಚಿಗೆ ತಡೆ ಹಾಕಿಕೊಳ್ಳಿ. ಪ್ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದುವರಿಯಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಬಹುದು‌. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ.

ಕನ್ಯಾ ರಾಶಿ:

ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಾಗಲಿದೆ‌. ನಿಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ನಿಮಗೇ ಆಶ್ಚರ್ಯವಾಗಬಹುದು. ಭವಿಷ್ಯದಲ್ಲಿ ಅತಿಯಾದ ಭರವಸೆ ಬೇಡ. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಯೋಚನೆ ಬರಬಹುದು. ಕಷ್ಟವಾದರೂ ಅಭ್ಯಾಸ ಮಾಡುವುದು ಒಳ್ಳೆಯದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ.

ತುಲಾ ರಾಶಿ:

ಹೊರಗೆ ಸುತ್ತಟ ಮಾಡಿ ದೇಹ ಹಾಗೂ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸಂಗಾತಿಯ ಚಿಂತನೆಗಳನ್ನು ನೀವು ಗೌರವಿಸುವಿರಿ. ಜೀವನವನ್ನು ರೂಪಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬಹುದು. ಸುಳ್ಳು ಸುದ್ದಿಗಳನ್ನು ನಂಬಬೇಕಾಗುವುದು. ನಿಮ್ಮ ನಿರಂತರ ಉತ್ಸಾಹವು ನಿಮಗೆ ಧನಾತ್ಮಕ ಅಂಶಗಳನ್ನು ತರುವುದು. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ನಿಮ್ಮ ಮಾತು ಇತರರಿಗೆ ಇಷ್ಟವಾಗದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌

ವೃಶ್ಚಿಕ ರಾಶಿ:

ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಹಣವನ್ನು ಸಂಪಾದಿಸುವ ಛಲವಿದ್ದರೂ ಮಾರ್ಗವು ಶುದ್ಧವಾಗಿರಲಿ. ನೀವು ಮಾಡುವ ಕೆಲಸದ ಮೇಲೆ ಪೂರ್ಣ ವಿಶ್ವಾಸವಿರಲಿ. ಅನಾರೋಗ್ಯವು ನಿಮ್ಮನ್ನು ಹಿಮ್ಮೆಟ್ಟಿಸೀತು. ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಅವರ ಜೊತೆ ಕಾಲ ಕಳೆಯುವಿರಿ. ಉನ್ನತ ವಿದ್ಯಾಭ್ಯಾಸವು ನಿಮಗೆ ಅನುಕೂಲಕರವಾಗಲಿದೆ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು.

ಧನು ರಾಶಿ:

ನಿಮ್ಮ ಕಪಿಮುಷ್ಟಿಯನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ಕಲಹವೂ ಆಗಬಹುದು. ತೊಂದರೆಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಮಕರ ರಾಶಿ:

ಇಂದು ನೀವು ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಇನ್ನೊಬ್ಬರನ್ನು ಹೋಲಿಸಿಕೊಂಡು ಮನಸ್ಸಿನೊಳಗೇ ನೊಂದುಕೊಳ್ಳುವಿರಿ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಮನಸ್ಸಿಗೆ ಏನೋ ಒಂದು ಹೊಸತು ಬೇಕು ಅನ್ನಿಸಬಹುದು. ನಿಮ್ಮ ವಿವೇಕಕ್ಕೆ ಸರಿಯಾದ ತಿಳಿವಳಿಕೆ ಇರದು. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು.

ಕುಂಭ ರಾಶಿ:

ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಪ್ರತಿಕೂಲ ಸ್ಥಿತಿಯನ್ನು ದೈವಾನುಗ್ರಹದಿಂದ ಪಾರಾಗಲು ಸಾಧ್ಯ. ನೂತನ ಗೃಹನಿರ್ಮಾಣವನ್ನು ಮಾಡುವಿರಿ. ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಹುಡುಕುವಿರಿ. ಹಳೆಯ ಕೆಲಸಗಳಿಂದ ನಿಮಗೆ ಬೇಸರ ಬರಬಹುದು. ಕುಟುಂಬದ ಜೊತೆ ಸಮಾಧಾನದ ಮನಸ್ಸಿಂದ ಮಾತನಾಡಿ. ವಿದ್ಯಾಭ್ಯಾಸದಲ್ಲಿ ಚುರುಕುತನ ಅಗತ್ಯ.

ಮೀನ ರಾಶಿ:

ಇಂದು ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ನಿಮ್ಮನ್ನು ಅಳೆಯಲು ಆರಂಭಿಸುವರು. ಸುತ್ತಲೂ ನಿಮ್ಮ‌ ಕಣ್ಣಿರಲಿ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಬೇಕೆನಿಸುವುದು. ವಿಷಯದ ಮೇಲೆ ಆಸಕ್ತಿ ಹೆಚ್ಚಾದೀತು. ನಿಮ್ಮ ಬಗ್ಗೆ ಯಾರೇ ನಕಾರಾತ್ಮಕ ಹೇಳಿಕೆ ಕೊಟ್ಟರೂ ಸಹಿಸುವ ತಾಳ್ಮೆ ಇರದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 14:02, ಯಮಗಂಡ ಕಾಲ 07:40 – 09:15, ಗುಳಿಕ ಕಾಲ 10:51 – 12:26

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *