ಮೇಷ ರಾಶಿ:
ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟಮಾಡಬೇಕಾದೀತು. ಸಂಗಾತಿಗೆ ನಿಮ್ಮ ಅರ್ಥಿಕತೆಯದ್ದೇ ಚಿಂತೆಯಾಗಲಿದೆ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ.
ವೃಷಭ ರಾಶಿ:
ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಭವಿಷ್ಯದ ಬಗ್ಗೆ ಒಳ್ಳೆಯ ಯೋಜನೆಯನ್ನು ತಯಾರಿಸುವಿರಿ. ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಮರೆವನ್ನು ದೂರ ಮಾಡಿಕೊಂಡರೆ ಉತ್ತಮ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.
ಮಿಥುನ ರಾಶಿ:
ಅಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ವಿವಾಹಬಂಧವು ಬೆಸೆಯು ಸೂಚನೆ ಕಾಣಿಸುವುದು. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ನಿಮ್ಮನ್ನು ಹೊಗಳಬೇಕೆಂಬ ಆಸೆ ಇರುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ಒಳ್ಳೆಯ ಕಾರ್ಯಕ್ಕೆ ಧನನಷ್ಟವಾಗಲಿದೆ. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ ಕೆಲಸಗಳನ್ನು ಮಾಡಿ ಮುಗಿಸುವಿರಿ.
ಕರ್ಕಾಟಕ ರಾಶಿ :
ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸೂಕ್ಷ್ಮ ಮತಿಯಿಂದ ವ್ಯವಹಾರವನ್ನು ಮಾಡಬೇಕಾಗುವುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ಹೂಡಿಕೆಯಲ್ಲಿ ಅಲ್ಪ ಲಾಭ ಸಿಗುವುದು. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು.
ಸಿಂಹ ರಾಶಿ:
ನಿಮಗೆ ಅತ್ಮಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಯಾರಾದರೂ ಅಪಮಾನ ಮಾಡಬಹುದೆಂಬ ಭಯವೂ ಕಾಡುವುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ.
ಕನ್ಯಾ ರಾಶಿ:
ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನಿಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ. ಹಣವನ್ನು ಕೊಟ್ಟಾದರೂ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ನಿರ್ಲಜ್ಜೆಯಿಂದ ಮಾತನಾಡುವಿರಿ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು.
ತುಲಾ ರಾಶಿ:
ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ನಿರ್ದಯೆಯು ನಿಮ್ಮ ಸ್ವಭಾವವಲ್ಲದಿದ್ದರೂ ಸಂದರ್ಭವು ಅದನ್ನು ಸೃಷ್ಟಿಸುವುದು. ಯಾವುದನ್ನೂ ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗದು. ಸ್ತ್ರೀ ಸಮೂಹದ ಮುಖ್ಯಸ್ಥರಾಗುವಿರಿ. ಅನಗತ್ಯ ಖರ್ಚಿನ ನಡುವೆ ಸದುಪಯೋಗವಾಯಿತು ಎಂಬ ಸಂತೋಷವು ಇರಲಿದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು.
ವೃಶ್ಚಿಕ ರಾಶಿ:
ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಭೂ ವಿವಾದವು ನಿಮಗೆ ಬೇಸರ ತರಿಸಬಹುದು. ವಿನಿಮಯ ಯಾವಾಗಲೂ ಸರಿಯಾಗಿ ಇರಲಿ. ನಿಮಗೆ ಪೋಷಕರ ಬೆಂಬಲವು ಪರೋಕ್ಷವಾಗಿ ಸಿಕ್ಕರೂ ಪ್ರತ್ಯಕ್ಷ ಬೆಂಬಲವನ್ನು ನೀವು ನಿರೀಕ್ಷಿಸುವಿರಿ. ಅಶಿಸ್ತಿನ ನಿಮ್ಮ ವರ್ತನೆಯು ಸಂಗಾತಿಗೆ ಕಿರಿಕಿರಿಯನ್ನು ಉಂಟುಮಾಡೀತು. ಮನೆಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು.
ಧನು ರಾಶಿ:
ನೀವು ಮಕ್ಕಳ ವಿಚಾರವಾಗಿ ಮಾಡಿದ ಶ್ರಮವು ಇಂದು ಫಲಿಸುವುದು. ಮಕ್ಕಳಿಂದ ನಿಮಗೆ ಅವಶ್ಯಕವಾದ ಸಹಕಾರವು ದೊರೆಯುವುದು. ಸಂಗಾತಿಯ ಬಗ್ಗೆ ಹೇಳಲು ಮುಜಗರ. ಪ್ರೇಮವೂ ನಿಮಗೆ ನೆಮ್ಮದಿಯನ್ನು ಹಾಳುಮಾಡುವುದು. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿರುವರು. ಹಿತಶತ್ರುಗಳಿಂದ ನೀವು ದೂರವಿರುವುದು ಅವಶ್ಯಕ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು.
ಮಕರ ರಾಶಿ:
ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ವೃತ್ತಿಯಲ್ಲಿ ಬೆಳೆಯುವ ಕನಸು ದೊಡ್ಡದಾಗುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ.
ಕುಂಭ ರಾಶಿ:
ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ಆಲಸ್ಯವು ನಿಮ್ಮ ಒಳ್ಳೆತನಕ್ಕೆ ಮುಳುವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ಇಂದು ನೀವು ಬಹಳ ಕಾರ್ಯದಲ್ಲಿ ಮಗ್ನರಾಗುವಿರಿ. ಬೇರೆಯವರ ಮಾತನ್ನೊಂದನ್ನೇ ನಂಬಿ ಮೋಸಹೋಗುವಿರಿ. ನಿಮ್ಮ ಸಂತೋಷವನ್ನು ಕಸಿದುಕೊಳ್ಳುವ ಮಾತುಗಳನ್ನು ನಿಮ್ಮವರು ಆಡಬಹುದು. ಕೇಳಿಸಿಕೊಂಡಿಲ್ಲ ಎಂಬ ಮನೋಭಾವವಿರಲಿ.
ಮೀನ ರಾಶಿ:
ಇಂದು ನೀವು ಮನೆಯವರಿಗೆ ತೊಂದರೆಯಾಗದಂತೆ ನೀವೇ ಉದ್ಯೋಗದ ಜೊತೆ ಉನ್ನತ ವಿದ್ಯಾಭ್ಯಾಸವನ್ನೂ ಮಾಡಬೇಕಾಗಬಹುದು. ನಿಮಗೆ ಇಂದು ಪರಿಚಿತ ವ್ಯಕ್ತಿಯ ಸಹಾಯದಿಂದ ಸಾಲವನ್ನು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವಿಸಲ್ಪಡುವ ಸಾಧ್ಯತೆಯಿದೆ. ತಂದೆಯು ನಿಮಗೆ ಏನನ್ನಾದರೂ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವರು. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 14:01, ಯಮಗಂಡ ಕಾಲ 07:41 – 09:16, ಗುಳಿಕ ಕಾಲ 10:51 – 12:26
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:31 am, Wed, 29 July 26
