ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಭರಣೀ, ಯೋಗ : ವೃದ್ಧಿ, ಕರಣ : ಬಾಲವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 14:00, ಯಮಗಂಡ ಕಾಲ 07:42 – 09:16, ಗುಳಿಕ ಕಾಲ 10:51 – 12:26
ಮೇಷ ರಾಶಿ: ವಿವಾದಗಳಿಂದ ನೀವು ಆತಂಕದಲ್ಲಿ ಇರುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ. ಮಾಧ್ಯಮದವರ ಮೇಲೆ ನಿಮಗೆ ಭಯವುಂಟಾಗುವುದು. ವಾಹನ ಖರೀದಿಗೆ ನಿಮ್ಮ ಬಳಗದ ಸಹಕಾರ ಇರುವುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ.
ವೃಷಭ ರಾಶಿ: ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವಿರಿ. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲ ದಿನ. ಯಾರೋ ಕೊಡುವ ದುಡ್ಡಿಗೆ ಕಾಯುವುದು ಬೇಸರವೆನಿಸುವುದು. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ. ಭೂಮಿಯ ವ್ಯವಹಾರವು ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ.
ಮಿಥುನ ರಾಶಿ: ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಸರ್ಕಾರದಿಂದ ಬರುವ ಹಣಕ್ಕೆ ಕಾನೂನು ಮೆಟ್ಟಿಲೇರುವ ಸಂದರ್ಭ ಬರಬಹುದು. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು. ಆಹಾರವು ನಿಮಗೆ ಸರಿಯಾದ ಸಮಯಕ್ಕೆ ಸಿಗದು. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು.
ಕರ್ಕಾಟಕ ರಾಶಿ: ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ. ಮಾತನಾಡದೇ ನಿಮ್ಮ ಕೆಲಸದಲ್ಲಿ ಮಗ್ನರಾಗಿರಿ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು.
ಸಿಂಹ ರಾಶಿ: ನಿಮ್ಮವರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ನೀವು ಮಾಡಿಸಿದ ಮನೆಯ ಕೆಲಸವನ್ನು ಅಲ್ಲಗಳೆಯುವ ಕುಟುಂಬದವರಿಗೆ ಏನೂ ಉತ್ತರ ಕೊಡಲಾಗದು. ಹೂಡಿಕೆಯಿಂದ ನಿಮಗೆ ಆರ್ಥಿಕ ತೊಂದರೆ ಅನಿಸುವುದು. ಆಂತರಿಕ ಕಲಹವು ಅತಿಯಾದ ವ್ಯಥೆಯನ್ನು ಉಂಟುಮಾಡೀತು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತೆಯಿಂದ ಇರುವುದು ಸುಖವೆನಿಸಬಹುದು.
ಕನ್ಯಾ ರಾಶಿ: ಅನಗತ್ಯ ಕಾರ್ಯಗಳನ್ನು ಮಾಡಿಕೊಂಡು ದಿನವನ್ನು ಹಾಳುಮಾಡಿಕೊಳ್ಳಬೇಕಾಗುವುದು. ಅನೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಮುಂಗಡ ಕೊಟ್ಟು ಮೋಸ ಹೋಗುವ ಸ್ಥಿತಿ ಬರಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಜೊತೆಗಿನ ಸಲುಗೆಯು ನಿಮಗೆ ಕಷ್ಟವಾದೀತು. ಕೆಟ್ಟ ಕೆಲಸಗಳು ನಿಮ್ಮನ್ನು ಆಕರ್ಷಿಸಬಹುದು. ಸ್ವಂತಿಕೆಯನ್ನು ಇಲ್ಲಿ ಉಪಯೋಗಿಸಿ ಕೆಲಸಮಾಡಿ.
ತುಲಾ ರಾಶಿ: ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಅನ್ನಸಂತರ್ಪಣೆಯ ಪುಣ್ಯವು ಪ್ರಾಪ್ತವಾಗಲಿದೆ. ಸಂಗಾತಿಯ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ ಎಂದು ನಿಮ್ಮನ್ನು ದೂರಬಹುದು. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು.
ವೃಶ್ಚಿಕ ರಾಶಿ: ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನು ದ್ವೇಷಿಸುವರು. ಔಷಧವನ್ನು ಸೇವಿಸುವಾಗ ಅದರ ಮುಕ್ತಾಯದ ದಿನವನ್ನು ನೋಡಿಕೊಳ್ಳಿ. ಹಾಳಾದ ಔಷಧಿಂದ ಅಪಾಯ ಬರುವುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇಂದು ಅವಲೋಕನ ಮಾಡಿಕೊಳ್ಳಬಹುದು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳನ್ನು ನೀವಾಡಿ. ನಿಮ್ಮ ಸೋಲನ್ನು ಸಾಧಾರಣಕ್ಕೆ ಒಪ್ಪಿಕೊಳ್ಳಲಾರಿರಿ.
ಧನು ರಾಶಿ: ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಿರಿ. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಾರು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.
ಮಕರ ರಾಶಿ: ಸ್ವಂತ ಕಾರ್ಯಕ್ಕೆ ಸಮಯವನ್ನು ಪ್ರಯತ್ನಪೂರ್ವಕವಾಗಿ ತೆಗೆದುಕೊಳ್ಳಬೇಕಾಗಬಹುದು. ನಿರುದ್ಯೋಗದ ಬಗ್ಗೆ ನಿಮಗೆ ಬೇಸರವಾಗಬಹುದು. ಮುಗ್ಧತೆಯನ್ನು ಎಲ್ಲಾದರಲ್ಲಿ ತೋರಿಸಲಾಗದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು. ಕುಟುಂಬವನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವು ಬೆಳಸಿಕೊಂಡಿದ್ದೀರಿ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು.
ಕುಂಭ ರಾಶಿ: ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಯಂತ್ರೋಪಕರಣಗಳಿಗೆ ನೀವು ಧನವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು. ಕಚೇರಿ ಕೆಲಸದಲ್ಲಿ ನೆಮ್ಮದಿ ಇರದು. ಸಾಮಾನ್ಯವಾದ ಕೆಲಸವನ್ನು ಮಾಡಲೂ ಇಂದು ಜಾಡ್ಯ ಬರಬಹುದು. ಭೂಮಿಯನ್ನು ಕಳೆದುಕೊಳ್ಳಬೇಕಾಗಬಹುದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು.
ಮೀನ ರಾಶಿ: ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ವ್ಯವಹಾರಿಕ ನಷ್ಟವನ್ನು ಸರಿ ಮಾಡಿಕೊಳ್ಳುವ ಬಗೆಯನ್ನು ಚಿಂತಿಸುವಿರಿ. ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ಮಾತನ್ನು ಬದಲಾಯಿಸುವಿರಿ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ ಕಾರಣಗಳು ಇರಬಹುದು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ.
ಲೋಹಿತ್ ಹೆಬ್ಬಾರ್ – 8762924271 (what’s app only)
