ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಉತ್ತೆರಾಷಾಢ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:35 – 17:12, ಯಮಗಂಡ ಕಾಲ 09:16 – 10:51, ಗುಳಿಕ ಕಾಲ 12:26 – 14:01
ಮೇಷ ರಾಶಿ: ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಅನ್ಯರ ಚಿಂತೆ ನಿಮಗೆ ಬೇಡ. ಬಾಕಿ ಇರುವ ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ. ದಿನವನ್ನು ಮುಂದೆ ಹಾಕುವುದು ಬೇಡ. ಇಂದು ನಿಮ್ಮ ಕಡೆಯಿಂದ ದೊಡ್ಡ ತಪ್ಪು ಆಗದಂತೆ ನೋಡಿಕೊಳ್ಳಿ. ಶಾರೀರಿಕ ಆಯಾಸವನ್ನು ವಿಶ್ರಾಂತಿಯಿಂದ ದೂರವಗಿಸಿ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ಯಾವ ಕೆಲಸ ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ.
ವೃಷಭ ರಾಶಿ: ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಹಣದ ಬಗ್ಗೆ ಬಹಳ ಚಿಂತಾಕ್ರಾಂತರಾಗಿದ್ದು ಅದನ್ನು ಸ್ನೇಹಿತರು ಮನಗಂಡು ಸಹಾಯ ಮಾಡುವರು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸ್ವಾರಸ್ಯಕರವಾಗಿ ಇರದು. ನಿಮ್ಮ ತಂದೆಯ ಮಾತು ನಿಮಗೆ ಅಸಹ್ಯವಾದರೂ ಅದನ್ನು ತಮಾಷೆಯಾಗಿ ತೆಗೆದುಕೊಂಡು ಸುಮ್ಮನಾಗುವಿರಿ. ನೀವು ಹನಿಮ್ಮ ಆವಿಷ್ಕಾರಕ್ಕೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.
ಮಿಥುನ ರಾಶಿ: ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಕಾಣಿಸುವುದು. ಉದ್ಯಮಿಗಳಾಗಿರುವ ನಿಮಗೆ ಉದ್ಯಮದಲ್ಲಿ ಉಂಟಾದ ಸಣ್ಣ ಬದಲಾವಣೆಯಿಂದ ಕೆಲವು ಕೆಲಸಗಾರರು ಬಿಟ್ಟು ಹೋಗಬಹುದು. ಸಂಗಾತಿಯನ್ನು ಟೀಕಿಸುತ್ತ ಇರುವಿರಿ. ರಾಜಕಾರಣಿಗಳು ತುರ್ತು ಕಾರ್ಯಪ್ರವೃತ್ತರಾಗಬೇಕಾಗುವುದು. ವಾಹನ ಖರೀದಿಗೆ ನೀವು ಮುಂದಾಗುವಿರಿ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ.
ಕರ್ಕಾಟಕ ರಾಶಿ: ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಯಾರ ಬಳಿ ಏನನ್ನು ಮಾತನಾಡುತ್ತಿದ್ದೇನೆ ಎಂಬ ಜ್ಞಾನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಹೊಸ ಉದ್ಯೋಗವನ್ನು ಹುಡುಕುವ ಭರದಲ್ಲಿ ಮೋಸಕ್ಕೆ ಸಿಲುಕಿಕೊಳ್ಳಬಹುದು. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ.
ಸಿಂಹ ರಾಶಿ: ಎಲ್ಲ ಕಡೆಯಿಂದ ನೀವು ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ನಿಮ್ಮ ವೃತ್ತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳವುದು ಬೇಡ. ಅಸ್ಖಲಿತ ಮಾತುಗಾರಿಕೆಯಿಂದ ಶಿರೋವೇದನೆ. ನಿಮ್ಮ ವೇತನವನ್ನು ತಿಳಿದು ಆಡಿಕೊಳ್ಳಬಹುದು. ಕಾರ್ಯದ ನಿಮಿತ್ತ ಓಡಾಟದಿಂದ ಆಯಾಸವಾಗಬಹುದು. ಸಮಸ್ಯೆಯನ್ನು ಸರಳ ಮಾಡಿಕೊಂಡು ಬಗೆಹರಿಸಿಕೊಳ್ಳಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಸಾಹಸ ಪ್ರವೃತ್ತಿ ಒಳ್ಳೆಯದಲ್ಲ.
ಕನ್ಯಾ ರಾಶಿ: ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ನಿಮ್ಮ ದಾಂಪತ್ಯದ ಪ್ರಕರಣವು ನ್ಯಾಯಾಲಯದ ಮಟ್ಟದ ವರೆಗೆ ತಲುಪಬಹುದು. ಅಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಿರಿ. ಇನ್ನೊಬ್ಬರ ಬಗ್ಗೆ ತೋರುವ ಸಹಾನುಭೂತಿಯು ಬೇರೆಯವರಿಗೆ ಇಷ್ಟವಾಗುವುದು. ನಿಮ್ಮ ಸಂಗಾತಿಗೆ ಒತ್ತಡಕ್ಕೆ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಖ್ಯಾತಿಯನ್ನು ಪಡೆಯುವ ಆಸೆಯಾಗುವುದು.
ತುಲಾ ರಾಶಿ: ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ನಿಮ್ಮ ಯೋಚನೆಗಳಿಗೆ ಸಂಗಾತಿಯಿಂದ ಬೆಂಬಲ ಸಿಗಬಹುದು. ಅದರ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನವೇ ಆಗಬೇಕಾದೀತು. ಉದ್ಯೋಗದಲ್ಲಿ ಭಡ್ತಿ ಸಿಗುವ ವಿಚಾರವು ನಿಮಗೆ ಸ್ನೇಹಿತರಿಂದ ತಿಳಿಯಲಿದೆ. ಯಾರ ಬಗೆಗಿನ ತೀರ್ಮಾನವನ್ನೂ ಏಕಪಕ್ಷೀಯವಾಗಿ ತೆಗೆದುಕೊಳ್ಳುವುದು ಬೇಡ. ಸುಳ್ಳನ್ನು ಹೇಳುವುದು ಗೊತ್ತಾದೀತು. ದಿನಸಿ ವಸ್ತುಗಳ ಖರೀದಿಯಲ್ಲಿ ಮೋಸವಾಗಲಿದೆ.
ವೃಶ್ಚಿಕ ರಾಶಿ: ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಸಂಪೂರ್ಣ ಮಾಹಿತಿಯ ಜೊತೆ ಕೆಲಸಕ್ಕೆ ಮುಂದುವರಿಯಿರಿ. ವ್ಯವಹಾರದಲ್ಲಿ ನಿಮಗೆ ತಿಳಿವಳಿಕೆ ಕೊರತೆ ಎಂದು ಗೊತ್ತಾಗಬಹುದು. ಸಂಗಾತಿಯ ಕಾರಣದಿಂದ ನಿಮಗೂ ಗೌರವ ಸಿಗಲಿದೆ. ವಿವಾಹಜೀವನದ ಚಿಂತೆ ನಿಮ್ಮನ್ನು ಕಾಡಬಹುದು. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆಪ್ತರ ಮೇಲೆ ಅಪನಂಬಿಕೆ ಇಟ್ಟು ಎಲ್ಲವೂ ಹಾಳಾಗುವುದು.
ಧನು ರಾಶಿ: ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಾಡೆಯುವುದು. ಅದನ್ನು ನಿಮಗೆ ಸಹಿಸಲಾಗದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ವಾಹನದ ದುರಸ್ತಿಯ ಕಾರಣ ಆದಾಯಕ್ಕೆ ತೊಂದರೆ. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಸಂಗಾತಿಯನ್ನು ಪ್ರೀತಿಸುವಿರಿ. ನಿಮ್ಮ ವಿವಾಹ ನಿಶ್ಚಯದಿಂದ ಸಂತಸ ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ.
ಮಕರ ರಾಶಿ: ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಹಣದಿಂದ ಎಲ್ಲವೂ ಅಸಾಧ್ಯ ಎಂದು ತಿಳಿದು ಹಣದ ಮೋಹವು ಕಡಿಮೆ ಆದೀತು. ಉದ್ವೇಗದಲ್ಲಿ ಏನ್ನಾದರೂ ಹೇಳಿ ಬಿಡುವಿರಿ. ಆಪ್ತರಿಗೆ ಧನಸಹಾಯ ಮಾಡಬೇಕಾದೀತು. ಅನ್ಯರನ್ನು ಹಾಸ್ಯ ಮಾಡಬಹುದು. ದ್ರವ ಪದಾರ್ಥದ ಮಾರಟದಿಂದ ಲಾಭ. ನಿಮ್ಮ ಕುಂದುಕೊರೆತಗಳ ಬಗ್ಗೆ ಲಕ್ಷ್ಯ ವಹಿಸಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು.
ಕುಂಭ ರಾಶಿ: ನಿಮಗೆ ನಿಮ್ಮ ದಿನ ನಿತ್ಯದ ಕೆಲಸಗಳೇ ಮುಖ್ಯವಾಗಿ ಉಳಿದವು ನಗಣ್ಯವೆನಿಸೀತು. ಮೋಜಿನಲ್ಲಿ ಹಣವನ್ನು ಕಳೆದುಕೊಳ್ಳುವಿರಿ. ವೃತ್ತಿಯನ್ನು ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ. ಗೃಹನಿರ್ಮಾಣಕ್ಕೆ ಚಾಲನೆ ಸಿಗುವುದು. ಹಿತಶತ್ರುಗಳ ಬಗ್ಗೆ ಜಾಗೃತರಾಗಿರುವಿರಿ. ನಿಮ್ಮ ಕೆಲಸವು ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಪುಣ್ಯಾತ್ಮರ ಸಂಗ ಅನಿರೀಕ್ಷಿತವಾಗಿ ಸಿಗುವುದು.
ಮೀನ ರಾಶಿ: ಇಂದು ನಿಮ್ಮ ಮಕ್ಕಳ ಜೀವನವನ್ನು ಕಂಡು ಖೇದವಾಗುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನೀವು ಇಂದು ನಿಯಮಕ್ಕೆ ಬದ್ಧರಾಗಿ ಕಾರ್ಯವನ್ನು ಮಾಡುವಿರಿ. ಸ್ವತಂತ್ರ ಆಲೋಚನೆಗಳು ನಿಮಗೆ ಖುಷಿ ಕೊಡುವುದು. ಕಲಾವಿದರಿಗೆ ಹಲವು ಕಡೆಗಳಿಂದ ಒತ್ತಡ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹಿರಿಯರ ಚಿಂತನೆ ನಡೆಸುವಿರಿ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು.
ಲೋಹಿತ್ ಹೆಬ್ಬಾರ್-8762924271 (what’s app only)
Published On – 1:01 am, Tue, 28 July 26