ನವದೆಹಲಿ, ಮೇ 13: ವಿಮಾನಗಳಿಗೆ ಬಳಸಲಾಗುವ ಜೆಟ್ ಫುಯೆಲ್ ಅಥವಾ ಎಟಿಎಫ್ ಇಂಧನದ (ATF- Aviation Turbine Fuel) ಬೆಲೆ ತೀವ್ರವಾಗಿ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ (Air India) ತನ್ನ ಕೆಲ ಫ್ಲೈಟ್ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಜೂನ್ನಿಂದ ಆಗಸ್ಟ್ವರೆಗೆ ಕೆಲ ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಫ್ಲೈಟ್ ಸರ್ವಿಸ್ ಅನ್ನು ಕಡಿಮೆಗೊಳಿಸುವುದಾಗಿ ಸಂಸ್ಥೆ ಹೇಳಿದೆ.
ಏರ್ ಇಂಡಿಯಾ ಇಂದು ಬುಧವಾರ ನೀಡಿರುವ ಮಾಹಿತಿ ಪ್ರಕಾರ ಆರೇಳು ಮಾರ್ಗಗಳಲ್ಲಿ ಅದರ ಫ್ಲೈಟ್ ಸಂಚಾರ ಇರುವುದಿಲ್ಲ. ದೆಹಲಿ-ಚಿಕಾಗೊ, ಮುಂಬೈ-ನ್ಯೂಯಾರ್ಕ್, ದೆಹಲಿ-ಶಾಂಘೈ, ಚೆನ್ನೈ-ಸಿಂಗಾಪುರ್ ಹಾಗೂ ಇತರ ಎರಡು ಮಾರ್ಗಗಳಲ್ಲಿ ಏರ್ ಇಂಡಿಯಾ ಫ್ಲೈಟ್ಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.
ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?
ಏರ್ ಇಂಡಿಯಾದ ಬಹುತೇಕ ಎಲ್ಲಾ ಫ್ಲೈಟ್ಗಳು ಯಥಾಪ್ರಕಾರ ಸಂಚರಿಸಲಿವೆ. ಮೇಲೆ ತಿಳಿಸಿದ ಆರು ಮಾರ್ಗಗಳನ್ನು ಬಿಟ್ಟರೆ ಉಳಿದ ಕಡೆ ಫ್ಲೈಟ್ ಸ್ಥಗಿತ ಇರುವುದಿಲ್ಲ. ಏರ್ ಇಂಡಿಯಾ ಒಂದು ತಿಂಗಳಲ್ಲಿ 1,200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫ್ಲೈಟ್ಗಳನ್ನು ಚಲಾಯಿಸುತ್ತದೆ. ಇದರಲ್ಲಿ ಉತ್ತರ ಅಮೆರಿಕಕ್ಕೆ ವಾರಕ್ಕೊಮ್ಮೆ 33 ಫ್ಲೈಟ್ಗಳು, ಯೂರೋಪ್ಗೆ 47 ಫ್ಲೈಟ್ಗಳು, ಯುಕೆಗೆ 57 ಫ್ಲೈಟ್ಗಳು, ಪೂರ್ವ ಏಷ್ಯಾಗೆ 158 ಫ್ಲೈಟ್ಗಳು, ಆಸ್ಟ್ರೇಲಿಯಾಗೆ 8 ಫ್ಲೈಟ್ಗಳು, ಆಫ್ರಿಕಾಗೆ 7 ಫ್ಲೈಟ್ಗಳನ್ನು ಏರ್ ಇಂಡಿಯಾ ಆಪರೇಟ್ ಮಾಡುತ್ತಿದೆ. ಬಹುತೇಕ ಇವೆಲ್ಲವೂ ಹಾಗೇ ಮುಂದುವರಿಯುತ್ತವೆ.
ಇಂಧನ ದರ ಹೆಚ್ಚಳದ ಜೊತೆಗೆ ಏರ್ಸ್ಪೇಸ್ ನಿರ್ಬಂಧವೂ ಒಂದು ಕಾರಣ
ವಿಮಾನ ಸಂಸ್ಥೆಯು ತನ್ನ ಫ್ಲೈಟ್ ಸಂಖ್ಯೆ ಇಳಿಸಲು ಇಂಧನ ದರ ಏರಿಕೆ ಮಾತ್ರವೇ ಅಲ್ಲ, ಕೆಲ ಪ್ರದೇಶಗಳಲ್ಲಿ ವಾಯು ಸಂಚಾರ ನಿರ್ಬಂಧಗಳು ಮುಂದುವರಿದಿರುವುದೂ ಕಾರಣವಾಗಿದೆ.
ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ
ಕೆಲ ದಿನಗಳ ಹಿಂದಷ್ಟೇ ಭಾರತೀಯ ವಿಮಾನ ಸಂಸ್ಥೆಗಳ ಸಂಘಟನೆಯೊಂದು ಜೆಟ್ ಇಂಧನದ ಬೆಲೆ ವಿಚಾರವಾಗಿ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿತ್ತು. ಜೆಟ್ ಫುಯಲ್ಗೆ ಇರುವ ಬೆಲೆ ಸೂತ್ರದಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಈ ಸಂಘಟನೆಯು ಸರ್ಕಾರಕ್ಕೆ ತುರ್ತು ಸಂದೇಶಳ ಕಳುಹಿಸಿತ್ತು. ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳನ್ನು ಒಳಗೊಂಡ ಸಂಘಟನೆಯ ಇದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ