ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!

ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!

ನವದೆಹಲಿ, ಮಾರ್ಚ್​ 13: ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪ್ರಸ್ತುತ ಪಳೆಯುಳಿಕೆಗಿಂತ ಪಳೆಯುಳಿಕೆಯೇತರ, ನವೀಕರಿಸಬಹುದಾದ ಇಂಧನ ಪಾಲೇ ಹೆಚ್ಚಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ (Pralhad Joshi) ಜೋಶಿ ತಿಳಿಸಿದ್ದಾರೆ.

ಎಷ್ಟಿದೆ ನವೀಕರಿಸಬಹುದಾದ ಇಂಧನ?

ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆಯೇತರ ಇಂಧನ ಶೇ.52.3ರಷ್ಟಿದ್ದರೆ, ನವೀಕರಿಸಬಹುದಾದ ಇಂಧನ ಶೇ.50.6ರಷ್ಟಿದೆ. ಪಳೆಯುಳಿಕೆ ಇಂದಿನ ಮೂಲದಿಂದ ಶೇ.47.7ರಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಂಡುಬಂದಿದೆ. 2026ರ ಜನವರಿ ಅಂತ್ಯದವರೆಗೆ ಭಾರತ 52,536.49 ಮೆಗಾವ್ಯಾಟ್ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಜನವರಿ 31ಕ್ಕೆ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 5,20,511 ಮೆಗಾವ್ಯಾಟ್ ಆಗಿದ್ದು, ಇದರಲ್ಲಿ 2,48,542 ಮೆಗಾವ್ಯಾಟ್ ಪಳೆಯುಳಿಕೆ-ಇಂಧನ ಮೂಲ ಮತ್ತು 2,71,969 ಮೆಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಮೂಲದ ವಿದ್ಯುತ್ ಉತ್ಪಾದನೆ ಆಗಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ‘ನವೀಕರಿಸಬಹುದಾದ ಇಂಧನ’ ಮೂಲಗಳ ಪಾಲು 2,63,189 ಮೆಗಾವ್ಯಾಟ್ ಆಗಿದೆ ಎಂದಿದ್ದಾರೆ.

2025-26ರ ಆರ್ಥಿಕ ವರ್ಷದಲ್ಲಿ ಅಖಿಲ ಭಾರತ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆ 52,536.49 ಮೆ.ವ್ಯಾ. ಆಗಿದ್ದು, ನವೀಕರಿಸಬಹುದಾದ ಇಂಧನದ್ದೇ 43,026.49 ಮೆ.ವ್ಯಾ ಅಗ್ರ ಪಾಲಿದೆ. ಇನ್ನು ಮೀ, ಉಷ್ಣಶಕ್ತಿಯಲ್ಲಿ ಕಲ್ಲಿದ್ದಲು ಒಂದರಿಂದಲೇ 8,810 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗಿದೆ. ಅನಿಲದಿಂದ ಶೂನ್ಯವಾಗಿದೆ. ಹೈಡ್ರೋದಲ್ಲಿ 3,370 ಮೆ.ವ್ಯಾ, ಗಾಳಿಯಿಂದ 4,612.58 ಮೆ.ವ್ಯಾ, ಸೌರಶಕ್ತಿಯಿಂದ ಬರೋಬ್ಬರಿ 34,955.24 ಮೆ.ವ್ಯಾ, ಜೈವಿಕ ಶಕ್ತಿ-30.61, ಸಣ್ಣ ಹೈಡ್ರೋದಿಂದ 58.06 ಮೆ.ವ್ಯಾ ಹಾಗೂ 700 ಮೆ.ವ್ಯಾ ಪರಮಾಣು ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ

ಪಳೆಯುಳಿಕೆ ಇಂಧನದಲ್ಲಿ ಕಲ್ಲಿದ್ದಲು-2,21,210 ಮೆಗಾವ್ಯಾಟ್, (ಶೇ.42.5), ಲಿಗ್ನೈಟ್ -6,620 (ಶೇ.1.3), ಅನಿಲ-20,122 (ಶೇ.3.9), ಡೀಸೆಲ್- 589 (ಶೇ.0.1 ) ಒಟ್ಟು ಪಳೆಯುಳಿಕೆ ಇಂಧನದಿಂದ 2,48,542 (ಶೇ.47.7) ಹಾಗೂ ಪಳೆಯುಳಿಕೆಯಲ್ಲದ ಇಂಧನ RES (ಹೈಡ್ರೋ ಸೇರಿದಂತೆ)- 2,63,189 ಮೆಗಾವ್ಯಾಟ್ ಶೇ.50.6 ರಷ್ಟಿದೆ. ಹೈಡ್ರೋ – 51,165 (ಶೇ.9.8), ಪವನ, ಸೌರ ಮತ್ತು ಇತರ ನವೀಕರಿಸಬಹುದಾದ ವಿದ್ಯುತ್ – 2,12,025 ಮೆಗಾವ್ಯಾಟ್ ಶೇ.40.7ರಷ್ಟಿದೆ ಎಂದು ತಿಳಿಸಿದ್ದಾರೆ.

ಗಾಳಿಯಿಂದ 54,650 ಮೆಗಾವ್ಯಾಟ್ (ಶೇ.10.5), ಸೌರಶಕ್ತಿ -1,40,602 ಮೆಗಾವ್ಯಾಟ್ (27.0), ಬಿಎಂ ಪವರ್ ಕೋಜೆನ್. – 10,757 (ಶೇ.2.1), ತ್ಯಾಜ್ಯದಿಂದ ಶಕ್ತಿಗೆ- 857 (0.2), ಸಣ್ಣ ಜಲ ವಿದ್ಯುತ್ ಸ್ಥಾವರ – 5,159 (ಶೇ.1.0) ಹಾಗೂ ಪರಮಾಣು-8,780 (ಶೇ.1.7) ವಿದ್ಯುತ್ ಉತ್ಪಾದನೆ ಸೇರ್ಪಡೆ ಸಾಧ್ಯವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *