ದೇಹದಲ್ಲಿ ವಿಟಮಿನ್, ಮಿನರಲ್ಸ್ ಕೊರತೆ ಇದೆಯೇ? ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷಿಸಬೇಡಿ! – Kannada News | Vitamin B12 to Iron Deficiency: Symptoms You Need to Know

ದೇಹ ಆರೋಗ್ಯವಾಗಿರಲು ವಿಟಮಿನ್‌ಗಳು ಮತ್ತು ಮಿನರಲ್ಸ್‌ಗಳು ಅತ್ಯಗತ್ಯ. ಆದರೆ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಕೆಲವು ಆರೋಗ್ಯ ಸಮಸ್ಯೆಗಳು ಅಥವಾ ಜೀವನಶೈಲಿಯಲ್ಲಿ ಮಾಡಿಕೊಂಡ ಕೆಲವು ಬದಲಾವಣೆಗಳಿಂದ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಮಟ್ಟ ಕಡಿಮೆಯಾಗಬಹುದು. ಆರಂಭದಲ್ಲಿ ಇದರ ಲಕ್ಷಣಗಳು ಸಾಮಾನ್ಯ ದಣಿವು ಅಥವಾ ದುರ್ಬಲತೆಯಂತೆ ಕಾಣಿಸಿಕೊಳ್ಳಬಹುದು. ಆದರೆ ಪದೇಪದೇ ದಣಿವು, ತಲೆಸುತ್ತುವಿಕೆ, ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಕೂದಲು ಉದುರುವುದು ಅಥವಾ ಸ್ನಾಯುಗಳ ದುರ್ಬಲತೆ ಕಂಡುಬಂದರೆ ದೇಹದಲ್ಲಿ ಯಾವುದಾದರೂ ವಿಟಮಿನ್ ಅಥವಾ ಮಿನರಲ್ ಕೊರತೆ ಇರಬಹುದೇ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಹಾಗಾದರೆ ಯಾವ ಕೊರತೆಗೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಯಾವ ರೀತಿಯ ಪರೀಕ್ಷೆ ಮಾಡಿಸಬೇಕು ಜೊತೆಗೆ ಆಹಾರದ ಮೂಲಕ ಇದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ದೇಹದಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಕೊರತೆಯಾದರೆ ಕಾಣಿಸಿಕೊಳ್ಳುವ ಲಕ್ಷಣಗಳು

Cleveland Clinic ಪ್ರಕಾರ, ದೇಹದಲ್ಲಿ ಪೋಷಕಾಂಶಗಳ ಕೊರತೆಯಾದಾಗ ವಿವಿಧ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ಬಿ12 ಕೊರತೆ ಇದ್ದರೆ ದಣಿವು, ದುರ್ಬಲತೆ, ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಕಾಣಿಸಬಹುದು. Iron deficiency ಇದ್ದಾಗ ದಣಿವು, ತಲೆಸುತ್ತುವಿಕೆ, ದುರ್ಬಲತೆ ಮತ್ತು ಚರ್ಮ ಬಿಳಿಚಿಕೊಳ್ಳುವಂತಹ ಲಕ್ಷಣಗಳು ಕಾಣಿಸಬಹುದು. ವಿಟಮಿನ್ ಡಿ ಕೊರತೆಯಿಂದ ಮೂಳೆ ಮತ್ತು ಸ್ನಾಯುಗಳಲ್ಲಿ ನೋವು ಅಥವಾ ದುರ್ಬಲತೆ ಉಂಟಾಗಬಹುದು. ಜಿಂಕ್ ಕೊರತೆ ಇದ್ದರೆ ಕೂದಲು ಉದುರುವಿಕೆ ಹಾಗೂ ಗಾಯಗಳು ನಿಧಾನವಾಗಿ ಗುಣವಾಗುವ ಸಮಸ್ಯೆ ಕಾಣಿಸಬಹುದು. ಇದರ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ವಿಟಮಿನ್ ಸಿ ಕೊರತೆಯೂ ದೇಹದ ಮೇಲೆ ಪರಿಣಾಮ ಬೀರಬಹುದು. ಆದರೆ ಇದೇ ಲಕ್ಷಣಗಳು ಇತರ ಆರೋಗ್ಯ ಸಮಸ್ಯೆಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ಕೊರತೆ ಪತ್ತೆಹಚ್ಚಲು ಯಾವ ಪರೀಕ್ಷೆ ಮಾಡಿಸಬೇಕು?

ವಿಟಮಿನ್ ಮತ್ತು ಮಿನರಲ್ಸ್ ಕೊರತೆಯನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಬ್ಲಡ್ ಟೆಸ್ಟ್ ಮಾಡಲಾಗುತ್ತದೆ. ವ್ಯಕ್ತಿಯ ಲಕ್ಷಣಗಳು ಮತ್ತು ಆರೋಗ್ಯದ ಇತಿಹಾಸವನ್ನು ಆಧರಿಸಿ ವೈದ್ಯರು ಅಗತ್ಯವಿರುವ ಪರೀಕ್ಷೆಗಳನ್ನು ಸೂಚಿಸುತ್ತಾರೆ. ವೈದ್ಯರ ಸಲಹೆಯಿಲ್ಲದೆ ಅನಗತ್ಯ ಪರೀಕ್ಷೆಗಳು ಅಥವಾ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ.

ಆಹಾರದ ಮೂಲಕ ವಿಟಮಿನ್ ಮತ್ತು ಮಿನರಲ್ಸ್ ಕೊರತೆ ತಡೆಯುವುದು ಹೇಗೆ?

ಪೋಷಕಾಂಶಗಳ ಕೊರತೆ ತಪ್ಪಿಸಲು ಒಂದೇ ಆಹಾರವನ್ನು ಅವಲಂಬಿಸುವ ಬದಲು ಸಮತೋಲಿತ ಆಹಾರ ಸೇವಿಸುವುದು ಮುಖ್ಯ. ಹಣ್ಣು, ತರಕಾರಿ, ಬೇಳೆಕಾಳುಗಳು, ಬೀನ್ಸ್, ಸಂಪೂರ್ಣ ಧಾನ್ಯಗಳು, ನಟ್ಸ್, ಸೀಡ್ಸ್, ಮೊಟ್ಟೆ, ಮೀನು ಮತ್ತು ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಬಹುದು. ಸಪ್ಲಿಮೆಂಟ್‌ಗಳ ಅಗತ್ಯ ಎಲ್ಲರಿಗೂ ಇರುವುದಿಲ್ಲ. ಯಾವುದೇ ವಿಟಮಿನ್ ಅಥವಾ ಮಿನರಲ್ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳುವುದು ಉತ್ತಮ. ಕೆಲವು ಪೋಷಕಾಂಶಗಳನ್ನು ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *