2007ರಲ್ಲಿ ಬಂದ ‘ಧಮಾಲ್’ ಸಖತ್ ನಗು ಉಕ್ಕಿಸಿತ್ತು. ಆದರೆ ಈ ನಾಲ್ಕನೇ ಭಾಗ ಅತಿಯಾದ ತಲೆನೋವು ತರಿಸುತ್ತದೆ’- ‘ಧಮಾಲ್ 4’ ನೋಡಿದವರ ವಿಮರ್ಶೆ ಇದು. ಅಜಯ್ ದೇವಗನ್ ಮೊದಲಾದವರು ನಟಿಸಿರೋ ಈ ಚಿತ್ರ ಇಂದು (ಜುಲೈ 10) ರಿಲೀಸ್ ಆಗಿದೆ. ಚಿತ್ರದ ಕಥೆ ಹಳೆಯ ಶೈಲಿಯಲ್ಲೇ ಇದೆ ಎಂದು ಫ್ಯಾನ್ಸ್ ಹೊರಹಾಕಿದ್ದಾರೆ.
‘ಧಮಾಲ್’ ಸರಣಿಯಲ್ಲಿ ನಿಧಿ/ಹಣ ಹುಡುಕೋ ಕಥೆ ಇರುತ್ತದೆ. ‘ಧಮಾಲ್ 4’ ಚಿತ್ರದಲ್ಲೂ ಅದು ಮುಂದುವರಿದಿದೆ. ಆದರೆ, ಇದು ‘ಪೈರೇಟ್ಸ್ ಆಫ್ ದಿ ಕೆರಿಬಿಯನ್’ ಮತ್ತು ‘ಇಂಡಿಯಾನಾ ಜೋನ್ಸ್’ ಚಿತ್ರಗಳ ಕಳಪೆ ಕಾಪಿ ತರಹ ಇದೆ ಎಂದು ಪ್ರೇಕ್ಷಕರು ಕಿಡಿಕಾರುತ್ತಿದ್ದಾರೆ. ಕೊನೆಯಿಲ್ಲದ ನಿಧಿ (ಖಜಾನೆ) ಹುಡುಕಾಟದ ಕಥೆ ಪ್ರೇಕ್ಷಕರಿಗೆ ಸಾಕು ಅನ್ನಿಸಿದೆ.
ಹಳೆ ಆ್ಯಕ್ಟಿಂಗ್
ಚಿತ್ರದಲ್ಲಿ ಅಜಯ್ ದೇವಗನ್ ಹೀರೋಯಿಸಂ ತೋರಿಸುತ್ತಾ ಹಡಗು, ಬೆಟ್ಟಗಳಿಂದ ಜಿಗಿಯುವ ಸಾಹಸ ಮಾಡಿದ್ದಾರೆ ಎಂದು ಪ್ರೇಕ್ಷಕರು ಹೇಳಿದ್ದಾರೆ. ಇದು ಹಳೇ ಸ್ಟೈಲ್ ಎಂದು ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಸಂಜಯ್ ಮಿಶ್ರಾ ಪ್ರತಿಯೊಂದು ಲೈನ್‌ಗೂ ‘ಬ್ರೋ’ ಅಂತ ಸೇರಿಸೋ ಸ್ಟೈಲ್ ಇಷ್ಟ ಆಗಲ್ಲ ಎಂದಿದ್ದಾರೆ ಫ್ಯಾನ್ಸ್.
ಸಿನಿಮಾದಲ್ಲಿ ಇಷ್ಟ ಆಗಿದ್ದು ಇವರೊಬ್ಬರೇ
ಈ ಸರಣಿಗೆ ನಟ ರವಿ ಕಿಶನ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಅವರ ಪಾತ್ರಕ್ಕೆ ಮಾತ್ರ ಸ್ವಲ್ಪ ಮೆಚ್ಚುಗೆ ಸಿಗುತ್ತಿದೆ. ಜಾಕ್ ಸ್ಪ್ಯಾರೋ ತರಹ ಸಮುದ್ರದ ಕಳ್ಳನಾಗಿ, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಬರುವ ರವಿ ಕಿಶನ್ ಅವರ ಪಾತ್ರ ಮಾತ್ರ ಪ್ರೇಕ್ಷಕರನ್ನು ಕೊಂಚ ನಗಿಸುವಲ್ಲಿ ಯಶಸ್ವಿಯಾಗಿದೆ.
Review : STOP ENCASHING ON SEQUELS
Pathetic music and visuals without a proper story and comedy.#AjayDevgn @ajaydevgn pic.twitter.com/WFDuCFDKL2
— The Climax India (@TheClimaxIndia) July 10, 2026
#Dhamaal4 Movie Review:
Rating :“Flat Experience” It starts on a decent note with a few funny moments in the first half. #AjayDevgn and Sanjay Mishra’s chemistry keeps things entertaining, story builds but the interval fails to create the excitement.#Dhamaal4Review pic.twitter.com/jPULAdPQYy
— Being Shivam (@itsbeingshivam) July 10, 2026
ವಿಪರೀತ CGI ಗ್ರಾಫಿಕ್ಸ್ ಮತ್ತು ಬಾಲಿಶ ಜೋಕ್ಸ್
ಚಿತ್ರದಲ್ಲಿ ಕಾಮಿಡಿಗಿಂತ ಹೆಚ್ಚಾಗಿ ಕಣ್ಣಿಗೆ ಚುಚ್ಚುವಂತಹ ಸಿಜಿಐ (CGI) ಗ್ರಾಫಿಕ್ಸ್ ತುಂಬಿಹೋಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಉ. ಹುಲಿ, ಮೊಸಳೆ, ಬೆಟ್ಟಗಳು ಎಲ್ಲವೂ ಗ್ರಾಫಿಕ್ಸ್‌ನಲ್ಲೇ ಇವೆ ಎಂಬ ಮಾತು ವ್ಯಕ್ತವಾಗಿದೆ.
ಕೆಲವರಿಗೆ ಇಷ್ಟ ಆಯ್ತು
ಕೆಲವರಿಗೆ ಈ ‘ಧಮಾಲ್ 4’ ಸಿನಿಮಾ ಇಷ್ಟ ಆಗಿದೆ. ಮೈಂಡ್ಲೆಸ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುವುದರಿಂದ ಅದು ಒಂದು ವರ್ಗದ ಜನರು ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
