‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಆಲ್ಪಾ’ (Alpha) ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ (Shah Rukh Khan) ಅವರು ಚಿತ್ರತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಆಲಿಯಾ ಭಟ್ ಅವರ ಹೈ-ವೋಲ್ಟೇಜ್ ಆ್ಯಕ್ಷನ್ ಅವತಾರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶಾರುಖ್ ಖಾನ್ ಅವರು, ನಟಿಯನ್ನು ‘ಸಿಗ್ಮಾ ಗರ್ಲ್’ ಎಂದು ಕರೆದಿದ್ದಾರೆ. ಇದರೊಂದಿಗೆ ನಟ ಬಾಬಿ ಡಿಯೋಲ್ ಮತ್ತು ನಿರ್ದೇಶಕ ಶಿವ ರವೈಲ್ ಅವರನ್ನು ಶಾರುಖ್ ಶ್ಲಾಘಿಸಿದ್ದಾರೆ. ಇದರಿಂದಾಗಿ ‘ಧುರಂಧರ್’ (Dhurandhar) ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಶಾರುಖ್ ಗುರಿ ಆಗಿದ್ದಾರೆ.

‘ಆಲ್ಪಾ’ ಚಿತ್ರದ ಟೀಸರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್, ‘ವೆಲ್ ಡನ್ ಆಲಿಯಾ, ವರ್ಷಗಳಿಂದ ಜನರ ಹೃದಯ ಒಡೆಯುತ್ತಿದ್ದ ನೀನು ಈಗ ವಿಲನ್‌ಗಳ ಮೂಳೆ ಮುರಿಯುತ್ತಿದ್ದೀಯ. ನಿನ್ನ ಕೌಶಲ್ಯ ನಿರಂತರವಾಗಿ ವಿಸ್ತರಿಸುತ್ತಿದೆ. ಆಲ್ಪಾ ಸಿನಿಮಾ ಎಲ್ಲರ ಹೃದಯ ಗೆಲ್ಲಲಿ, ಹಾಗೆಯೇ ಸೀಕ್ವೆಲ್‌ಗಾಗಿ ಕೆಲವು ವಿಲನ್‌ಗಳನ್ನು ಉಳಿಸಲಿ. ಲಾರ್ಡ್ ಬಾಬಿ… ನೀವು ತುಂಬಾ ಅದ್ಭುತವಾಗಿ ಕಾಣುತ್ತೀರಿ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಬಿಗ್ ಹಗ್ ಹಾಗೂ ಆಲ್ ದಿ ಬೆಸ್ಟ್’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ.

ಶಾರುಖ್ ಖಾನ್ ಅವರ ಈ ಪೋಸ್ಟ್ ಬೆನ್ನಲ್ಲೇ ರಣವೀರ್ ಸಿಂಗ್ ಅಭಿಮಾನಿಗಳು ಕಿಂಗ್ ಖಾನ್ ಅವರನ್ನು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಕಾಂಬಿನೇಷನ್‌ನ ಬ್ಲಾಕ್‌ಬಸ್ಟರ್ ಚಿತ್ರ ‘ಧುರಂಧರ್’ ಸಿನಿಮಾಗೆ ಶಾರುಖ್ ಖಾನ್ ಯಾವುದೇ ರೀತಿಯ ಬೆಂಬಲ ನೀಡದಿದ್ದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಎಕ್ಸ್‌ನಲ್ಲಿ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ‘ಸರ್, ಕೆಲವು ತಿಂಗಳ ಹಿಂದಷ್ಟೇ ಧುರಂಧರ್ ಬಿಡುಗಡೆಯಾಗಿತ್ತು, ಆಗ ನೀವು ಎಲ್ಲಿದ್ದಿರಿ?’ ಎಂದು ಕೇಳಿದ್ದಾರೆ. ಇನ್ನೊಬ್ಬರು, ‘ಧುರಂಧರ್ ಬಿಡುಗಡೆಯ ನಂತರ ಇಂತಹ ಹಳೇ ವೈಆರ್‌ಎಫ್ ಸ್ಪೈ ಯೂನಿವರ್ಸ್ ಸಿನಿಮಾಗಳನ್ನು ಯಾರೂ ನೋಡುವುದಿಲ್ಲ, ವೈಆರ್‌ಎಫ್ ಇನ್ಮುಂದೆ ಅಳಬೇಕಾಗುತ್ತದೆ’ ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, ‘ಧುರಂಧರ್ ಟ್ರೇಲರ್, ರಿಲೀಸ್ ಅಥವಾ ಸಕ್ಸಸ್ ಇವೆಂಟ್ ಯಾವುದಕ್ಕೂ ನಿಮ್ಮ ಬೆಂಬಲ ಸಿಗಲಿಲ್ಲ, ನಿಮಗೆ ಅಸೂಯೆಯೇ ಅಥವಾ ಆಶ್ಚರ್ಯವಾಗಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸ್ಪೈ ಯೂನಿವರ್ಸ್‌ನ 7ನೇ ಚಿತ್ರವಾಗಿರುವ ‘ಆಲ್ಪಾ’ ಭಾರಿ ಸದ್ದು ಮಾಡುತ್ತಿದೆ. ಇದಕ್ಕೂ ಮುನ್ನ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್ 3 ಮತ್ತು ವಾರ್ 2 ಚಿತ್ರಗಳು ಈ ಯೂನಿವರ್ಸ್‌ನ ಭಾಗವಾಗಿ ಮೂಡಿಬಂದಿವೆ. ಆ ಕಾರಣದಿಂದ ‘ಆಲ್ಫಾ’ ಸಿನಿಮಾ ಮೇಲೆ ಆಲಿಯಾ ಭಟ್ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *