ತುಮಕೂರು, ಜೂನ್ 21: ಪಾಕ್ ಶಂಕಿತನ ಜೊತೆ ನಂಟು ಹೊಂದಿದ್ದ ರಾಜ್ಯದ ಇಬ್ಬರು ಯುವಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಧುರಂಧರ್ ಚಿತ್ರದ ಮಾದರಿಯಲ್ಲಿ ಭಾರತದಲ್ಲಿ ಡಾನ್ ಸೃಷ್ಟಿಗೆ ಷಡ್ಯಂತ್ರ ನಡೆದಿತ್ತು ಎಂಬ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಆರೋಪಿ ಅಲ್ಲಾಭಕ್ಷು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದಾನೆ. ಭಾರತದಲ್ಲೇ ಯುವಕರ ಟಾರ್ಗೆಟ್ ಮಾಡಿ ಹೊಸ ಸಂಚಿಗೆ ತಯಾರಿ ನಡೆದಿತ್ತು. ಅದಕ್ಕಾಗಿ ತಮಗೆ ಬೇಕಾದ ರೀತಿ ಕೆಲಸ ಮಾಡುವ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಅರ್ಹತೆ ಹೊಂದಿದ್ದ ವ್ಯಕ್ತಿ ಸಿಕ್ಕರೆ ಆತನನ್ನ ಡಾನ್ ಮಾಡಲು ತಂತ್ರ ಕೂಡ ರೂಪಿಸಲಾಗಿತ್ತು. ಡಾನ್ ಮಾಡುವುದಾಗಿ ತುಮಕೂರಿನ ಅಲ್ಲಾಭಕ್ಷುಗೆ ಪಾಕಿಸ್ತಾನದ ರಾಣಾ ಆಫರ್ ನೀಡಿದ್ದ ಬಗ್ಗೆ ಆರೋಪಿ ಬಾಯ್ಬಿಟ್ಟು, ತುಮಕೂರು ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
